ಸಪ್ತಮಿ ಗೌಡ ರವರಿಗೆ ಮತ್ತೊಂದು ಅದೃಷ್ಟ; ಕಾಂತಾರ ಸಿನಿಮಾ ಗೆದ್ದಿದ್ದಕ್ಕಾಗಿ ಉಡುಗೊರೆಯಾಗಿ ಕೊಟ್ಟ ಹಣ ಎಷ್ಟು ಗೊತ್ತೇ?? 2 ಕೋಟ
ನಮ್ಮ ರಾಜ್ಯದಲ್ಲಿ ಮತ್ತು ಹೊರರಾಜ್ಯಗಳಲ್ಲಿ ಕಾಂತಾರ ಸಿನಿಮಾ ಹವಾ ಎಷ್ಟರ ಮಟ್ಟಿಗೆ ಇದೆ ಎಂದು ಈಗಾಗಲೇ ನಾವೆಲ್ಲರೂ ನೋಡುತ್ತಿದ್ದಾರೆ. ಭಾಷೆಯ ಬ್ಯಾರಿಯರ್ ಇಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಸಿನಿಪ್ರಿಯರು ಕಾಂತಾರ ಸಿನಿಮಾವನ್ನು ಕನ್ನಡ ಭಾಷೆಯಲ್ಲೆ ನೋಡಿ ಮೆಚ್ಚಿಕೊಂಡಿದ್ದಾರೆ. ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗೆ ಡಬ್ ಆಗಿರುಗ ಕಾಂತಾರ ಸಿನಿಮಾ, ಎಲ್ಲಾ ಭಾಷೆಗಳಲ್ಲೂ 340 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿದೆ. ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ನಾಯಕನ ಮತ್ತು ನಿರ್ದೇಶಕನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಅವರ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿರುವುದು ಈಗಾಗಲೇ ನಮಗೆಲ್ಲ ತಿಳಿದಿದೆ. ಈ ಸಿನಿಮಾದ ನಾಯಕಿ ಫಾರೆಸ್ಟ್ ಗಾರ್ಡ್ ಲೀಲಾ ಪಾತ್ರದಲ್ಲಿ ನಟಿಸಿರುವ ಸಪ್ತಮಿ ಗೌಡ ಅವರು ಸಹ ತಮ್ಮ ಪಾತ್ರ ಮತ್ತು ಅಭಿನಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕಾಂತಾರ ಸಿನಿಮಾ ಸಕ್ಸಸ್ ನಂತರ ಸಪ್ತಮಿ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ, ಹೊರ ರಾಜ್ಯದಲ್ಲಿ ಸಹ ಅಭಿಮಾನಿಗಳ ಸಂಖ್ಯೆ ಬೆಳೆಯುತ್ತಿದೆ. ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ಟ್ರೇನಿಂಗ್ ಮಾಡಿರುವ ಸರಳ ಹಳ್ಳಿಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ, ಇವರ ಪಾತ್ರ ನೋಡಿದರೆ ನಮ್ಮ ಪಕ್ಕದ ಮನೆಯಲ್ಲಿರುವ ಹುಡುಗಿ ಎಂದು ಅನ್ನಿಸುವುದು ಖಂಡಿತ.
ಸಿನಿಮಾದಲ್ಲಿ ತಮ್ಮ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿರುವ ಸಪ್ತಮಿ ಅವರಿಗೆ ಇದು ಎರಡನೇ ಸಿನಿಮಾ. ಮೊದಲಿಗೆ ಇವರು ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಕಾಂತಾರ ಸಿನಿಮಾ ಸಪ್ತಮಿ ಗೌಡ ಅವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿದೆ. ಕಾಂತಾರ ಯಶಸ್ಸಿನಿಂದ ಸಪ್ತಮಿ ಗೌಡ ಅವರಿಗೆ ದೊಡ್ಡ ಅವಕಾಶಗಳು ಹುಡುಕಿ ಬರುತ್ತಿದೆ. ಕಾಂತಾರ ಇಷ್ಟು ದೊಡ್ಡ ಹಿಟ್ ಆದ ನಂತರ ಇದೀಗ ಸಪ್ತಮಿ ಗೌಡ ಅವರಿಗೆ ಹೊಂಬಾಳೆ ಸಂಸ್ಥೆ ಉಡುಗೊರೆ ನೀಡಿದ್ದು, ಬರೋಬ್ಬರಿ 2ಕೋಟಿ ರೂಪಾಯಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.