ಗ್ರಹಣ ಮುಗಿದ ಕೂಡಲೇ ಶುರುವಾಗಿದೆ ಮಾರ್ಗಶಿರ ಮಾಸ: ಕೃಷ್ಣನ ಅನುಗ್ರಹ ಪಡೆಯಲು ಈ ಚಿಕ್ಕ ಕೆಲಸ ಮಾಡಿ ಸಾಕು.
ನಮ್ಮ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಮಾಸಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ, ಪ್ರತಿ ಮಾಸ ಕೂಡ ಒಂದೊಂದು ದೇವರಿಗೆ ಸಮರ್ಪಣೆ ಮಾಡಲಾಗಿದೆ, ಆಯಾ ದೇವರುಗಳನ್ನು ಪೂಜೆ ಮಾಡುವುದರಿಂದ, ವಿಶೇಷವಾದ ಫಲ ಸಿಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ, ಮಾರ್ಗಶಿರ ಮಾಸ ಶ್ರೀಕೃಷ್ಣನನ್ನು ಪೂಜಿಸುವ ಮಾಸ ಆಗಿದೆ. ಈ ಮಾಸವನ್ನು ಅಘನ್ ಮಾಸ ಎಂದು ಕರೆಯಲಾಗುತ್ತದೆ, ಈ ಮಾಸದಲ್ಲಿ ಕೃಷ್ಣನ ಪೂಜೆ ಅತ್ಯುತ್ತಮ ಎನ್ನುತ್ತಾರೆ. ಶ್ರೀಕೃಷ್ಣನಿಗೆ ಮಾರ್ಗಶಿರ ಮಾಸ ಎಂದರೆ ಇಷ್ಟವೆಂದು, ಶ್ರೀಕೃಷ್ಣನೇ ಭಗವದ್ಗೀತೆಯಲ್ಲಿ ತಿಳಿಸಿದ್ದಾನೆ. ಈ ಮಾಸದಲ್ಲಿ ರಾಮ ಸೀತೆಯ ಮದುವೆಯಾದ ಕಾರಣ, ಈ ಮಾಸದ ಮಹತ್ವ ಹೆಚ್ಚಾಗುತ್ತದೆ, ಈ ಮಾಸದಿಂದ ಹೊಸ ವರ್ಷ ಶುರುವಾಗುತ್ತದೆ. ಈ. ವರ್ಷ ನವೆಂಬರ್ 9ರಿಂದ ಮಾರ್ಗಶಿರಮಾಸ ಶುರುವಾಗುತ್ತದೆ. ಈ ಮಾಸದಲ್ಲಿ ಕೃಷ್ಣನ ಅನುಗ್ರಹ ಪಡೆಯಲು ಮಾಡುವ 3 ಕೆಲಸಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಪವಿತ್ರ ನದಿಯಲ್ಲಿ ಸ್ನಾನ :- ಶ್ರೀಕೃಷ್ಣನಿಗೆ ಪ್ರಿಯವಾದ ಈ ಮಾಸದಲ್ಲಿ, ಈ ಮಾಸದಲ್ಲಿ ಬೆಳಗ್ಗೆ ಎದ್ದು, ಪೂಜೆ ಮಾಡುವುದು ಒಳ್ಳೆಯದನ್ನು ಮಾಡುತ್ತದೆ. ಈ ಮಾಸದಲ್ಲಿ ಪುಣ್ಯ ನದಿಯಲ್ಲಿ ಸ್ನಾನ ಮಾಡುವುದಕ್ಕೆ, ಪ್ರಾಮುಖ್ಯತೆ ಇದೆ, ಒಂದು ವೇಳೆ ಪುಣ್ಯನದಿಯಲ್ಲಿ ಸ್ನಾನ ಮಾಡಲು ಆಗದೆ ಹೋದರೆ, ಸ್ನಾನ ಮಾಡುವ ನೀರಿಗೆ ಗಂಗಾಜಲ ಸೇರಿಸಿ, ಸ್ನಾನ ಮಾಡಬಹುದು. ಇದರಿಂದ ಶ್ರೀಕೃಷ್ಣನಿಗೆ ಸಂತೋಷವಾಗುತ್ತದೆ.
ಒಂದು ಹೊತ್ತು ಉಪವಾಸ :- ಮಾರ್ಗಶಿರ ಮಾಸದಲ್ಲಿ ಒಂದು ಹೊತ್ತು ಉಪವಾಸ ಮಾಡುವುದು ಒಳ್ಳೆಯದು ಎಂದು ಹೇಳಲಾಗಿದೆ. ಈ ಮಾಸದಲ್ಲಿ ಬ್ರಾಹ್ಮಣರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತಕ್ಕ ಹಾಗೆ ದಾನ ಮಾಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಪಾಪ ಕಡಿಮೆಯಾಗುತ್ತದೆ ಮತ್ತು ಆರೋಗ್ಯ ಸಮಸ್ಯೆ ಇಂದ ಮುಕ್ತಿ ಸಿಗುತ್ತದೆ. ಮಾರ್ಗಶಿರ ಮಾಸದಲ್ಲಿ ಉಪವಾಸ ಮಾಡುವುದರಿಂದ ಆ ವ್ಯಕ್ತಿಯು ಆರೋಗ್ಯವಾಗಿರುತ್ತಾನೆ, ಹಾಗೂ ಮುಂದಿನ ಜನ್ಮ ಚೆನ್ನಾಗಿರುತ್ತದೆ ಎನ್ನುತ್ತಾರೆ.
ಬೆಳ್ಳಿ ಮತ್ತು ಆಹಾರ ದಾನ :- ಈ ಸಮಯದಲ್ಲಿ ಬೆಳ್ಳಿ ಮತ್ತು ಆಹಾರ ದಾನ ಮಾಡುವುದರಿಂದ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ರೀತಿ ಮಾಡಿ, ಅನ್ನದಾನ ಮಾಡುವುದರಿಂದ, ನಿಮ್ಮ ಎಲ್ಲಾ ಇಷ್ಟಗಳು ಈಡೇರುತ್ತದೆ, ಹಾಗೂ ಎಲ್ಲಾ ನೋವುಗಳಿಂದ ಮುಕ್ತಿ ಪಡೆಯುತ್ತೀರಿ.