Kannada News: ಗೃಹಪ್ರವೇಶ ಮುಗಿಸಿದ ಮಿಲನ ಹಾಗೂ ಡಾರ್ಲಿಂಗ್ ಕೃಷ್ಣ: ಮನೆಗೆ ಇಟ್ಟಿರುವ ಹೆಸರೇನು ಗೊತ್ತೇ??
Kannada News: ಸ್ಯಾಂಡಲ್ ವುಡ್ ನಲ್ಲಿ ಪ್ರಸ್ತುತ ಎಲ್ಲರ ಫೇವರೇಟ್ ಜೋಡಿ ಡಾರ್ಲಿಂಗ್ ಕೃಷ್ಟ ಮತ್ತು ಮಿಲನಾ ನಾಗರಾಜ್ ಎಂದು ಹೇಳಬಹುದು. ಲವ್ ಮಾಕ್ಟೇಲ್ ಸಿನಿಮಾದಿಂದ ಈ ಜೋಡಿ ನಿಜ ಜೀವನದಲ್ಲೂ ಪ್ರೀತಿ ಮಾಡುತ್ತಿದ್ದಾರೆ ಎಂದು ಗೊತ್ತಾಯಿತು. ಸಿನಿಮಾ ಯಶಸ್ಸಿನ ಜೊತೆಗೆ ಮದುವೆಯಾಗಿ, ಈಗ ಬಹಳ ಸಂತೋಷದ ಜೀವನ ನಡೆಸುತ್ತಿದ್ದಾರೆ ಕೃಷ್ಣ ಮತ್ತು ಮಿಲನಾ ದಂಪತಿ. ಇವರಿಬ್ಬರು ಹೊಸ ಮನೆಯೊಂದನ್ನು ಕಟ್ಟಿಸಿ, ಗೃಹಪ್ರವೇಶ ಮಾಡಿ, ಅದರ ಫೋಟೋಗಳನ್ನು ಶೇರ್ ಮಾಡಿದ್ದರು. ಕೃಷ್ಣ ಮಿಲನಾ ಜೋಡಿ ತಮ್ಮ ಮನೆಗೆ ಇಟ್ಟಿರುವ ಮುದ್ದಾದ ಹೆಸರು ಏನು ಗೊತ್ತಾ? ತಿಳಿಸುತ್ತೇವೆ ನೋಡಿ..
ನಟ ಡಾರ್ಲಿಂಗ್ ಕೃಷ್ಣ ಅವರು ಬಹಳ ಕಷ್ಟಪಟ್ಟು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು, ಮೊದಲಿಗೆ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ನಂತರ ಹೀರೋ ಆದ ಕೃಷ್ಣ ಅವರು, ತಾವೇ ಸಿನಿಮಾ ನಿರ್ಮಾಣ ಮಾಡಿ, ಸಿನಿಮಾ ಫ್ಲಾಪ್ ಆಗಿ ಕೈಸುಟ್ಟುಕೊಂಡರು. ಸಾಲ ಮಾಡಿ ಅದನ್ನು ತೀರಿಸಲು ಕಷ್ಟಪಡುತ್ತಿದ್ದ ಸಮಯದಲ್ಲಿ ಕೃಷ್ಣ ಅವರಿಗೆ ಸಾಥ್ ಕೊಟ್ಟಿದ್ದು ಮಿಲನಾ ಅವರು. ಈ ಜೋಡಿ ಜೊತೆಯಾಗಿ ನಟಿಸಿ, ಕೃಷ್ಣ ಅವರು ನಿರ್ದೇಶನ ಮಾಡಿ, ನಿರ್ಮಾಣ ಕೂಡ ಮಾಡಿದ ಸಿನಿಮಾ ಲವ್ ಮಾಕ್ಟೇಲ್, ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು, ಇದಾದ ಬಳಿಕ ಈ ಜೋಡಿ ಹಿಂದಿರುಗಿ ನೋಡಿದ್ದೇ ಇಲ್ಲ. ಇಬ್ಬರು ಒಳ್ಳೆಯ ಹಂತಕ್ಕೆ ಬೆಳೆದು ನಿಂತರು. ಇದನ್ನು ಓದಿ.. ಈಗ ಬಿಡಿ, ಆದರೆ ಆ ಕಾಲದಲ್ಲಿಯೇ ಪವಿತ್ರ ಲೋಕೇಶ್ ರವರಿಗೆ ಕೈ ಕೊಟ್ಟಿದ್ದರು ಸ್ಟಾರ್ ನಟ. ನಟಿಯ ಬಾಳಲ್ಲಿ ಏನಾಗಿತ್ತು ಗೊತ್ತೇ??
ಲವ್ ಮಾಕ್ಟೇಲ್2 ಸಿನಿಮಾವನ್ನು ಸಹ ತಯಾರಿಸಿ, ಸಕ್ಸಸ್ ಕಂಡರು. ಈ ಜೋಡಿ ಇಂದು ಕಷ್ಟಪಟ್ಟು ಬೆಳೆದು, ಒಂದು ಮನೆ ಕಟ್ಟಿಸಿದ್ದಾರೆ. ತಮ್ಮ ಮನೆಗೆ ಕ್ರಿಸ್ಮಿ ನೆಸ್ಟ್ ಎಂದು ಹೆಸರಿಟ್ಟಿದ್ದಾರೆ. ಕ್ರಿಸ್ಮಿ ಎಂದರೆ, ಕೃಷ್ಣ ಮತ್ತು ಮಿಲನಾ, ಇವರಿಬ್ಬರ ಹೆಸರಿನ ಮೊದಲ ಅಕ್ಷರಗಳನ್ನು ತೆಗೆದುಕೊಂಡು, ಕ್ರಿಸ್ಮಿ ಎಂದು ಮುದ್ದಾಗಿ ಇಟ್ಟು, ಕೃಷ್ಣ ಮಿಲನಾ ಗೂಡು ಎನ್ನುವ ಅರ್ಥದಲ್ಲಿ ಕ್ರಿಸ್ಮಿ ನೆಸ್ಟ್ ಎಂದು ಹೆಸರಿಟ್ಟಿದ್ದು, ಅಭಿಮಾನಿಗಳು ಇವರಿಬ್ಬರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಮಿಲನಾ ಅವರು ಮತ್ತು ಕೃಷ್ಣ ಅವರು ಇಬ್ಬರು ಕೂಡ ತಮ್ಮ ಮನೆಯ ಗೃಹಪ್ರವೇಶದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಓದಿ.. Kannada News: ಅಲ್ಲೂ ಅರ್ಜುನ್ ಹಾಗೂ ಪುಷ್ಪ ಡೈರೆಕ್ಟರ್ ಅನ್ನು ಸಂಕಷ್ಟಕ್ಕೆ ಸಿಲುಕಿಸಿದ ರಶ್ಮಿಕಾ ಮಂದಣ್ಣ. ತಿರುಗೇಟು ನೀಡಲು ಸಿದ್ಧವಾಗಿದ್ದಾರೆಯೇ ಅಲ್ಲೂ??