ಈಗ ಬಿಡಿ, ಆದರೆ ಆ ಕಾಲದಲ್ಲಿಯೇ ಪವಿತ್ರ ಲೋಕೇಶ್ ರವರಿಗೆ ಕೈ ಕೊಟ್ಟಿದ್ದರು ಸ್ಟಾರ್ ನಟ. ನಟಿಯ ಬಾಳಲ್ಲಿ ಏನಾಗಿತ್ತು ಗೊತ್ತೇ??

125

Get real time updates directly on you device, subscribe now.

ಇಷ್ಟು ದಿನಗಳು ಪವಿತ್ರಾ ಲೋಕೇಶ್ ಅಂದ್ರೆ ಯಾರಿಗೂ ಹೆಚ್ಚಾಗಿ ಗೊತ್ತಿರಲಿಲ್ಲ. ಆದರೆ ಈಗ ಪವಿತ್ರಾ ಲೋಕೇಶ್ ಅವರ ಹೆಸರು ಪ್ರತಿಯೊಬ್ಬರಿಗು ಗೊತ್ತಿರುವ ಹೆಸರು, ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಲೋಕೇಶ್ ಅವರ ಹೆಸರು ಭಾರಿ ಜನಪ್ರಿಯವಾಗಿದೆ. ಇದಕ್ಕೆ ಕಾರಣ ತೆಲುಗು ಚಿತ್ರರಂಗದ ಸೀನಿಯರ್ ನಟ ನರೇಶ್ ಅವರೊಡನೆ ಪವಿತ್ರಾ ಲೋಕೇಶ್ ಅವರು ಡೇಟಿಂಗ್ ಮಾಡುತ್ತಿದ್ದರು. ಪವಿತ್ರಾ ಲೋಕೇಶ್ ಅವರು ಮೂಲತಃ ಕರ್ನಾಟಕದವರು, ಕನ್ನಡ ಸಿನಿಮಾದಲ್ಲಿ ಬಾಲನಟಿಯಾಗಿ ಮೊದಲು ನಟಿಸಿದರು, ನಂತರ ಹೀರೋಯಿನ್ ಆಗಿ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದರು, ಆದರೆ ನಾಯಕಿಯಾಗಿ ಪವಿತ್ರಾ ಲೋಕೇಶ್ ಅವರು ಹೆಚ್ಚು ಸಕ್ಸಸ್ ಪಡೆಯಲಿಲ್ಲ, ಹಾಗಾಗಿ ಪವಿತ್ರಾ ಲೋಕೇಶ್ ಅವರು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡರು. ಪೋಷಕ ಪಾತ್ರಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಪವಿತ್ರಾ ಲೋಕೇಶ್ ಅವರು, ಕನ್ನಡ ಮಾತ್ರವಲ್ಲದೆ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಹ ಗುರುತಿಸಿಕೊಂಡರು.

ನಾಯಕರಿಗೆ ತಾಯಿ ಅಥವಾ ಅತ್ತೆಯ ಪಾತ್ರದಲ್ಲಿ ನಟಿಸಿ ಯಶಸ್ಸು ಗಳಿಸಿಕೊಂಡರು ಪವಿತ್ರಾ ಲೋಕೇಶ್. ತೆಲುಗಿನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಪವಿತ್ರಾ ಲೋಕೇಶ್ ಅವರು, ತೆಲುಗಿನಲ್ಲಿ ಮಳ್ಳಿ ಮಳ್ಳಿ ಇದಿ ರಾನಿ ರೋಜು ಸಿನಿಮಾ ಮೂಲಕ ಪೋಷಕ ಪಾತ್ರಗಳಲ್ಲಿ ನಟಿಸಲು ಶುರು ಮಾಡಿದರು. ಹೀಗೆ ಪೋಷಕ ಪಾತ್ರಗಳಲ್ಲಿ ಯಶಸ್ಸು ಪಡೆದ ವರ್ಷಗಳ ನಂತರ ಪವಿತ್ರಾ ಲೋಕೇಶ್ ಅವರು ತೆಲುಗು ನಟ ನರೇಶ್ ಅವರೊಡನೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಷಯ ಹೊರಬಂತು. ಈ ವಿಷಯ ವೈರಲ್ ಆಗಿದ್ದು ಮಾತ್ರವಲ್ಲದೆ, ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು, ಮೈಸೂರಿನ ಹೋಟೆಲ್ ಒಂದರಲ್ಲಿ ನರೇಶ್ ಮತ್ತು ಪವಿತ್ರಾ ಜೊತೆಯಾಗಿದ್ದಾಗ ರೆಡ್ ಹ್ಯಾಂಡ್ ಆಗಿ ಕಂಡುಹಿಡಿದಿದ್ದರು. ಇದರಿಂದ ಇವರಿಬ್ಬರ ಮಧ್ಯೆ ಇರುವ ನಿಜವಾದ ವಿಷಯ ಹೊರಬಂದಿತು. ಈಗಾಗಲೇ ಇಬ್ಬರು ಹೆಂಡತಿಯರಿಗೆ ವಿಚ್ಚೇದನ ನೀಡಿ, ಮೂರನೇ ಮದುವೆ ಆಗಿರುವ ನರೇಶ್ ಅವರು, ಮೂರನೇ ಹೆಂಡತಿಗೂ ವಿಚ್ಛೇದನ ನೀಡಿ, ಪವಿತ್ರಾ ಲೋಕೇಶ್ ಅವರನ್ನು ಮದುವೆಯಾಗಬೇಕು ಎಂದುಕೊಂಡಿದ್ದಾರೆ.

ಆ ಘಟನೆ ನಂತರ ಇವರಿಬ್ಬರು ಒಂದು ವಿಡಿಯೋ ಕೂಡ ಶೇರ್ ಮಾಡಿದರು. ಈ ವಿಡಿಯೋ ಹೊರಬಂದ ನಂತರ ಇವರಿಬ್ಬರದ್ದು ಬಿಡಿಸಲಾಗದ ಬಂಧ ಎಂದು ಎಲ್ಲರಿಗೂ ಅರ್ಥವಾಯಿತು. ಈ ವಿಷಯಗಳ ನಡುವೆ, ಬಹಳ ಹಿಂದೆ ಪವಿತ್ರಾ ಲೋಕೇಶ್ ಅವರು ಕನ್ನಡ ವಾಹಿನಿಯೊಂದಕ್ಕೆ ನೀಡಿದ ಇಂಟರ್ವ್ಯೂ ನಲ್ಲಿ ಕೊಟ್ಟಿದ್ದ ಹೇಳಿಕೆ ಈಗ ವೈರಲ್ ಆಗುತ್ತಿದೆ, “ಈಗ ಪರವಾಗಿಲ್ಲ. ಮೊದಲೆಲ್ಲಾ ಅವಕಾಶ ಕೊಟ್ಟವರನ್ನು ನೋಡಿದರೆ ಭಯ ಆಗ್ತಿತ್ತು. ನನ್ನಿಂದ ಬೇರೆ ಥರ ನಿರೀಕ್ಷೆ ಇಟ್ಟುಕೊಂಡಿದ್ದಾರ ಅಂತ ಅನ್ನಿಸುತ್ತಿತ್ತು..” ಎಂದು ಪವಿತ್ರಾ ಲೋಕೇಶ್ ಹೇಳಿದ್ದರು. ಅಷ್ಟೇ ಅಲ್ಲದೆ, ಆಗಿನ ಸಮಯದಲ್ಲಿ ಪವಿತ್ರಾ ಲೋಕೇಶ್ ಅವರನ್ನು ಒಬ್ಬ ಸಿನಿಮಾ ನಟ ಬಳಸಿಕೊಂಡಿದ್ದರಂತೆ. ಈ ವಿಷಯ ಸಹ ಬಹಿರಂಗವಾಗಿತ್ತು. ಆದರೆ ಆ ನಟ ಯಾರು ಎನ್ನುವುದು ಮಾತ್ರ ಇನ್ನೂ ತಿಳಿದುಬಂದಿಲ್ಲ.

Get real time updates directly on you device, subscribe now.