ಅಂದುಕೊಂಡಂತೆ ತಮಿಳಿನಲ್ಲಿ ಭರ್ಜರಿ ಎಂಟ್ರಿ ಕೊಟ್ಟ ಕನ್ನಡತಿ: ಸೊಂಟ ಬಳುಕಿಸಿದನ್ನು ನೋಡಿ ಎಲ್ಲರೂ ಒಮ್ಮೆಲೇ ಶಾಕ್.
ನಟಿ ರಶ್ಮಿಕಾ ಮಂದಣ್ಣ ಇಂದು ನ್ಯಾಷನಲ್ ಕ್ರಶ್, ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಬಾಲಿವುಡ್ ನಲ್ಲಿ ಇವರು ಅಮಿತಾಭ್ ಬಚ್ಚನ್ ಅವರ ಜೊತೆಗೆ ನಟಿಸಿದ ಗುಡ್ ಬೈ ಸಿನಿಮಾ ಬಿಡುಗಡೆಯಾಗಿ, ರಶ್ಮಿಕಾ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ಇನ್ನು ರಶ್ಮಿಕಾ ಅಭಿನಯದ ಮಿಷನ್ ಮಜ್ನು ಸಿನಿಮಾ ತೆರೆಕಾಣಲು ಸಿದ್ಧವಾಗಿದೆ. ಬೇರೆ ಭಾಷೆಯ ಸಿನಿಮಾಗಳಲ್ಲೂ ರಶ್ಮಿಕಾ ಅವರು ಬ್ಯುಸಿ ಆಗಿದ್ದು, ಪುಷ್ಪ2, ವಾರಿಸು, ಹಾಗೂ ಕಾರ್ತಿಕ್ ಆರ್ಯನ್ ನಾಯಕನಾಗಲಿರುವ ಆಶಿಕಿ3 ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ರಶ್ಮಿಕಾ ಮಂದಣ್ಣ.
ರಶ್ಮಿಕಾ ರಣಬೀರ್ ಕಪೂರ್ ಅವರು ನಾಯಕನಾಗಿರುವ ಅನಿಮಲ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ರಶ್ಮಿಕಾ ಮಂದಣ್ಣ. ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ರಶ್ಮಿಕಾ ಅವರಿಗೆ ಬಹುಬೇಡಿಕೆ ಶುರುವಾಯಿತು, ಎಲ್ಲ ಚಿತ್ರರಂಗದಲ್ಲೂ ಈಗ ರಶ್ಮಿಕಾ ಅವರದ್ದೇ ಹವಾ. ಎಲ್ಲಾ ಸ್ಟಾರ್ ಹೀರೋಗಳ ಸಿನಿಮಾಗು ಆಯ್ಕೆಯಾಗಿ, ಚಿತ್ರೀಕರಣಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ ರಶ್ಮಿಕಾ. ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಅವರೊಡನೇ ವಾರಿಸು ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುವುದು ಗೊತ್ತಿರುವ ವಿಷಯ. 2023 ಸಂಕ್ರಾಂತಿ, ಪೊಂಗಲ್ ಹಬ್ಬಕ್ಕೆ ಈ ಸಿನಿಮಾ ಬಿಡುಗಡೆ ಆಗುತ್ತಿದೆ.

ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ನಿನ್ನೆಯಷ್ಟೇ ವಾರಿಸು ಸಿನಿಮಾದ ರಂಜಿತಮೆ ಹಾಡು ಬಿಡುಗಡೆ ಆಗಿದ್ದು, ಈ ಹಾಡಿನಲ್ಲಿ ರಶ್ಮಿಕಾ ಅವರು ಸೊಂಟ ಬಳುಕಿಸುವ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿಜಯ್ ಅವರೊಡನೇ ನಟಿಸುವುದು ರಶ್ಮಿಕಾ ಅವರ ಬಗಳ ದೊಡ್ಡ ಕನಸಾಗಿತ್ತು, ಇದೀಗ ಆ ಕನಸು ನನಸಾಗಿದ್ದು, ರಶ್ಮಿಕಾ ಅವಯು ಬಹಳ ಸಂತೋಷವಾಗಿದ್ದಾರೆ. ದಳಪತಿ ವಿಜಯ್ ಅವರ ಅಭಿಮಾನಿಗಳು, ಈ ಹಾಡು ನೋಡಿ ಫುಲ್ ಖುಷಿಯಾಗಿದ್ದು, ಯೂಟ್ಯೂಬ್ ನಲ್ಲಿ ರಂಜಿತಮೆ ಹಾಡು ಮಿಲಿಯನ್ ಗಟ್ಟಲೇ ವೀಕ್ಷಣೆ ಗಳಿಸಿ ಮುನ್ನುಗ್ಗುತ್ತಿದೆ.