Kannada News: ಟೀಚರ್ ಆಗಿದ್ದಾಗ ಅಂಬಾನಿ ಮದುವೆಯಾದರು ಕೂಡ ಕೆಲಸ ಮಾಡುತ್ತಿದ್ದ ನೀತು ಅಂಬಾನಿ. ಆಗಿನ ಸಂಬಳ ಕೇಳಿದರೆ ನಿಜಕ್ಕೂ ಭೇಷ್ ಅಂತೀರಾ.
Kannada News: ನಮ್ಮ ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು ಮುಖೇಶ್ ಅಂಬಾನಿ (Mukesh Ambani), ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಅವರ ಪತ್ನಿಯ ಹೆಸರು ನೀತಾ ಅಂಬಾನಿ ಅವರು ಎಲ್ಲರಿಗೂ ಗೊತ್ತಿರುತ್ತಾರೆ, ಆದರೆ ಅವರ ಗುಣಗಳ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ರಿಲಯನ್ಸ್ ಕಂಪನಿಯ ಅಧ್ಯಕ್ಷೆ ನೀತಾ ಅಂಬಾನಿ (Neeta Ambani) ಅವರು, ಧೀರೂಭಾಯ್ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯ ಓನರ್, ಮುಂಬೈ ಇಂಡಿಯನ್ಸ್ (Mumai Indians) ತಂಡದ ಓನರ್ ಸಹ ಇವರೇ. ಗಂಡನ ಎಲ್ಲಾ ಬ್ಯುಸಿನೆಸ್ ಗಳಲ್ಲಿ ನೀತಾ ಅಂಬಾನಿ ಅವರು ಮುಖ್ಯ ಪಾತ್ರ ವಹಿಸಿದಾರೆ. ವ್ಯಕ್ತಿತ್ವದಲ್ಲಿ ಇವರು ಬಹಳ ಒಳ್ಳೆಯ ಮನಸ್ಸು ಹೊಂದಿದ್ದಾರೆ.
ಗಂಡನಿಗೆ ತಕ್ಕ ಹೆಂಡತಿ, ತಮ್ಮ ಕಂಪನಿಗೆ ತಕ್ಕ ಮುಖ್ಯಸ್ಥೆ, ಮಗನಿಗೆ ಅತ್ಯುತ್ತಮ ತಾಯಿ, ಮಗ ದೇಹದ ತೂಕ ಇಳಿಸಲು ಕೂಡ ನೀತಾ ಅಂಬಾನಿ ಅವರು ಸಹಾಯ ಮಾಡಿದ್ದರು. ನೀತಾ ಅಂಬಾನಿ ಮುಂಬೈ ನ ಮಧ್ಯಮ ವರ್ಗದ ಗುಜರಾತ್ ಕುಟುಂಬದಲ್ಲಿ ಹುಟ್ಟಿ ಬೆಳೆದ ಹುಡುಗಿ, ಚಿಕ್ಕ ವಯಸ್ಸಿನಿಂದ ಇವರಿಗೆ ಭರತನಾಟ್ಯ ಕಲಿಯುವ ಆಸಕ್ತಿ ಇತ್ತು, ನಾಟ್ಯ ಕಲಿತು, ಅದರಲ್ಲಿ ಸಹ ಪಾರಂಗತ ಹೊಂದಿದ್ದಾರೆ ನೀತಾ ಅಂಬಾನಿ. ಇವರು ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದರು, ಸೇಂಟ್ ಫ್ಲವರ್ ನರ್ಸರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು, ಕಾರ್ಯಕ್ರಮ ಒಂದರಲ್ಲಿ ನೀತಾ ಅವರ ಡ್ಯಾನ್ಸ್ ನೋಡಿ, ಧಿರುಬಾಯಿ ಅಂಬಾನಿ (Dheerubhai Ambani) ಅವರು ಇವರೆ ತಮ್ಮ ಸೊಸೆ ಎಂದು ನಿರ್ಧಾರ ಮಾಡಿದ್ದರಂತೆ. ಹಾಗೆಯೇ ಮುಖೇಶ್ ಅಂಬಾನಿ ಅವರು, ಸಿನಿಮಾ ಸ್ಟೈಲ್ ನಲ್ಲಿ ನೀತಾ ಅವರಿಗೆ ಪ್ರೊಪೋಸ್ ಮಾಡಿದ್ದರು. ಅದಕ್ಕೆ ತಕ್ಷಣವೇ ಒಪ್ಪಿಕೊಂಡ ನೀತಾ ಅವರು ಒಂದು ಕಂಡೀಷನ್ ಹಾಕಿದ್ದರು.
ಮದುವೆ ನಂತರ ಕೂಡ ತಾವು ಕೆಲಸ ಮುಂದುವರೆಸುವುದಾಗಿ ಹೇಳಿದ್ದರು ನೀತಾ, ಅದೇ ರೀತಿ ಶಾಲೆಯಲ್ಲಿ ಕೆಲಸ ಮಾಡುತ್ತಾ, ಬರುವ 800 ರೂಪಾಯಿ ಸಂಬಳವನ್ನು ಮುಖೇಶ್ ಅಂಬಾನಿ ಅವರಿಗೆ ಕೊಡುತ್ತಿದ್ದರಂತೆ. ಆ ಹಣವನ್ನು ಮನೆಯಲ್ಲಿ ರಾತ್ರಿ ಅಡುಗೆಗೆ ಬಳಸಲಾಗುತ್ತಿತ್ತಂತೆ. ಅಂತಹ ಶ್ರೀಮಂತ ಕುಟುಂಬದ ಮನೆಯ ಸೊಸೆ, ನರ್ಸರಿ ಶಾಲೆ ಶಿಕ್ಷಕಿ ಎಂದು ಹಲವರು ಟೀಕೆ ಮಾಡಿದ್ದರಂತೆ. ಆದರೆ ಅದ್ಯಾವುದಕ್ಕೂ ನೀತಾ ಅವರು ತಲೆಕೆಡಿಸಿಕೊಳ್ಳದೆ ಕೆಲಸಕ್ಕೆ ಹೋಗುತ್ತಿದ್ದರು, ಅದಕ್ಕೆ ಕಾರಣ ನೀತಾ ಅವರಿಗೆ ಆ ಕೆಲಸದಿಂದ ಮನಸ್ಸಿಗೆ ತೃಪ್ತಿ ಸಿಗುತ್ತಿತ್ತು. ಇದರ ಬಗ್ಗೆ ಮಾತನಾಡಿದ್ದ ನೀತಾ ಅಂಬಾನಿ ಅವರು, “ಅಂತಸ್ತು ಮತ್ತು ಅಧಿಕಾರ ಎರಡು ಜೊತೆಯಾಗಿ ಸಾಗುವುದಿಲ್ಲ. ನನಗೆ ಅಧಿಕಾರ ಜವಾಬ್ದಾರಿಯಂತೆ. ಅದನ್ನು ನಾನು ನನ್ನ ಕುಟುಂಬ, ನನ್ನ ಕೆಲಸ, ನನ್ನ ಉತ್ಸಾಹ ಮತ್ತು ನನ್ನ ಮಧ್ಯಮ ವರ್ಗದ ಮೌಲ್ಯಗಳಿಂದ ಪಡೆದುಕೊಂಡಿದ್ದೇನೆ.” ಎಂದು ಹೇಳಿದ್ದಾರೆ.