Cricket news: ಬಿಸಿಸಿಐ ವಿರುದ್ಧ ತಿರುಗಿ ಬಿದ್ದ ಭಾರತದ ಯುವ ಕ್ರಿಕೆಟಿಗರು. ಯಾಕೆ ಗೊತ್ತೇ?

98

Get real time updates directly on you device, subscribe now.

Cricket news: ಪ್ರಸ್ತುತ ಭಾರತ ತಂಡವು ಅಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ. ನವೆಂಬರ್ 13ರಂದು ವಿಶ್ವಕಪ್ ಮುಗಿದ ನಂತರ, ಭಾರತ ತಂಡವು ನ್ಯೂಜಿಲೆಂಡ್ (Newzealand) ಮತ್ತು ಬಾಂಗ್ಲಾದೇಶ್ (Bangladesh) ಗೆ ಪ್ರವಾಸ ಬೆಳೆಸಲಿದೆ. ಮೊದಲಿಗೆ ನ್ಯೂಜಿಲೆಂಡ್ ನಲ್ಲಿ 5 ಟಿ20 ಪಂದ್ಯಗಳು ಮತ್ತು 3 ಏಕದಿನ ಸರಣಿ ಪಂದ್ಯಗಳನ್ನು ಆಡಲಿದೆ. ಅದಾದ ಬಳಿಕ ಬಾಂಗ್ಲಾದೇಶ್ ಗೆ ಪ್ರವಾಸಕ್ಕೆ ಹೋಗಿ, 3 ಏಕದಿನ ಸರಣಿ ಪಂದ್ಯಗಳನ್ನು ಆಡಲಿದೆ. ಇದಕ್ಕಾಗಿ ಸೋಮವಾರ ಸಂಜೆ ಬಿಸಿಸಿಐ ತಂಡವನ್ನು ಘೋಷಣೆ ಮಾಡಿದ್ದು, ಉತ್ತಮ ಪ್ರದರ್ಶನ ಕೊಡುತ್ತಿದ್ದ ಕೆಲವು ಆಟಗಾರರು ಆಯ್ಕೆ ಆಗಿಲ್ಲ. ರವಿ ಬಿಶ್ನೋಯ್ (Ravi Bishnoi), ಉಮೇಶ್ ಯಾದವ್ (Umesh Yadav), ಪೃಥ್ವಿ ಶಾ (Prithvi Shaw), ನಿತೀಶ್ ರಾಣಾ (Nitish Rana), ಸರ್ಫಾರಾಜ್ ಖಾನ್ (Sarfaraz Khan), ಹನುಮ ವಿಹಾರಿ (Hanuma Vihari) ಇವರು ಎರಡು ಮಾದರಿಯ ಪಂದ್ಯಗಳಿಗೆ ಆಯ್ಕೆ ಆಗಿಲ್ಲದ ಕಾರಣ ಬೇಸರಗೊಂಡಿದ್ದಾರೆ.

ಬಿಸಿಸಿಐ (BCCI) ವಿರುದ್ಧ ನಿರಾಶೆಗೊಂಡಿರುವ ಆಟಗಾರರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯ ಮೂಲಕ ಬೇಸರ ವ್ಯಕ್ತ ಪಡಿಸಿದ್ದಾರೆ. ಪೃಥ್ವಿ ಶಾ (Prithvi Shaw) ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಾಯಿ ಬಾಬಾ ಫೋಟೋ ಶೇರ್ ಮಾಡಿ, “ನೀವು ಎಲ್ಲವನ್ನು ನೋಡುತ್ತಿದ್ದೀರಾ ಎಂದು ನಂಬಿದ್ದೇನೆ ಸಾಯಿ ಬಾಬಾ..” ಎಂದು ಬರೆದುಕೊಂಡಿದ್ದಾರೆ. ಇವರಷ್ಟೇ ಅಲ್ಲದೆ, ನಿತೀಶ್ ರಾಣಾ (Nitish Rana) ಅವರು ಸಹ ಇದೇ ರೀತಿ ಇನ್ಸ್ಟಾಗ್ರಾಮ್ ಸ್ಟೋರಿ ಅಪ್ಡೇಟ್ ಮಾಡಿದ್ದಾರೆ, “ಭರವಸೆ.. ನನ್ನನ್ನು ನಂಬಿ, ನೋವು ದೂರವಾಗುತ್ತದೆ..” ಎಂದು ಬರೆದಿರುವ ಫೋಟೋ ಶೇರ್ ಮಾಡಿದ್ದಾರೆ ನಿತೀಶ್ ರಾಣಾ. ಇದನ್ನು ಓದಿ..Puneeth: ತಂದೆಯ ಸಿನೆಮಾ ನೋಡುವ ವೇಳೆ ಅಪ್ಪು ಹಿರಿಯ ಮಗಳಿಗೆ ಆಗಿದ್ದೇನು ? ಕಣ್ಣೀರಿಟ್ಟ ಧೃತಿ ಅರ್ಧಕ್ಕೆ ಹೋಗಿದ್ದೇಕೆ ?

ಇನ್ನು ರವಿ ಬಿಶ್ನೋಯ್ (Ravi Bishnoi) ಅವರು ಸಹ ಇಂಥದ್ದೇ ಫೋಟೋ ಒಂದನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ, “ಕಂಬ್ಯಾಕ್ ಇನ್ನು ಸ್ಟ್ರಾಂಗ್ ಆಗಿರುತ್ತದೆ..” ಎಂದು ಬರೆದುಕೊಂಡಿದ್ದಾರೆ. ಇನ್ನು ಉಮೇಶ್ ಯಾದವ್ (Umesh Yadav) ಅವರು, “ನೀವು ನನ್ನನ್ನು ಮೂರ್ಖರನ್ನಾಗಿ ಮಾಡುತ್ತಿದ್ದೀರಿ, ಆದರೆ ದೇವರು ನಿಮ್ಮನ್ನು ನೋಡುತ್ತಿದ್ದಾನೆ..ಎಚ್ಚರಿಕೆಯಿಂದ ಇರಿ..”ಎಂದು ಬರೆದಿರುವ ಫೋಟೋ ಶೇರ್ ಮಾಡಿದ್ದಾರೆ. ಈ ಮೂಲಕ ಈ ಎಲ್ಲಾ ಆಟಗಾರರು ಬಿಸಿಸಿಐ ಗೆ ಟಾಂಗ್ ಕೊಟ್ಟಿದ್ದಾರೆ. ಭವಿಷ್ಯದಲ್ಲಿ, 2024ರಲ್ಲಿ ನಡೆಯುವ ವಿಶ್ವಕಪ್ ಗೆ ಭರವಸೆಯ ತಂಡ ಕಟ್ಟುವ ಸಲುವಾಗಿ ಬಿಸಿಸಿಐ ಟೀಮ್ ಅನೌನ್ಸ್ ಮಾಡಿದೆ. ಆದರೆ ಈ ಕೆಲವು ಆಟಗಾರರು ತಿರುಗಿ ಬಿದ್ದಿದ್ದಾರೆ. ಇದನ್ನು ಓದಿ..Kannada Bigg boss: ಅದೊಂದು ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿ ಭಯ ಪಡ್ತಿದ್ರು ನೇಹಾ ಗೌಡ. ಯಾಕೆ ಅಂತೇ ಗೊತ್ತೇ??

Get real time updates directly on you device, subscribe now.