ದಿನೇಶ್ ಕಾರ್ತಿಕ್ ರವರನ್ನು ಹೊರದಬ್ಬಿದ ಟೀಮ್ ಇಂಡಿಯಾ: ಮತ್ತೊಬ್ಬ ಆರ್ಸಿಬಿ ಆಟಗಾರನಿಗೆ ಸಿಕ್ತು ಚಾನ್ಸ್. ಯಾರು ಗೊತ್ತೇ ಆ ಕಿಲಾಡಿ??
ಪ್ರಸ್ತುತ ಟಿ20 ವಿಶ್ವಕಪ್ ಪಂದ್ಯಗಳು ಆಸ್ಟ್ರೇಲಿಯಾದಲ್ಲಿ ಭರದಿಂದ ನಡೆಯುತ್ತಿದ್ದು, ಇದಾದ ಬಳಿಕ ಬಾಂಗ್ಲಾದೇಶ್ ವಿರುದ್ಧ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಪಂದ್ಯಗಳು ಏಕದಿನ ಸರಣಿ ಪಂದ್ಯಗಳನ್ನು ಭಾರತ ತಂಡ ಆಡಲಿದೆ. ನ್ಯೂಜಿಲೆಂಡ್ ಗೆ ಭಾರತ ತಂಡ ಪ್ರವಾಸಕ್ಕೆ ಹೋಗಲಿದ್ದು, ನವೆಂಬರ್ 18ರಿಂದ ಈ ಪ್ರವಾಸ ಶುರುವಾಗಲಿದೆ. ಡಿಸೆಂಬರ್ ಮೂರನೇ ವಾರದಲ್ಲಿ ಬಾಂಗ್ಲಾದೇಶ್ ವಿರುದ್ಧದ ಸರಣಿ ಪಂದ್ಯಗಳು ಶುರುವಾಗಲಿದೆ. ಇವುಗಳಿಗೆ ಬಿಸಿಸಿಐ ನಿನ್ನೆಯಷ್ಟೇ ಬಲಿಷ್ಠ ಭಾರತ ತಂಡವನ್ನು ರಚನೆ ಮಾಡಿ, ಘೋಷಣೆ ಮಾಡಿದೆ.
ಈ ಎರಡು ಸರಣಿಗಳಲ್ಲಿ ಅದ್ಭುತ ಫಿನಿಷರ್ ದಿನೇಶ್ ಕಾರ್ತಿಕ್ ಅವರು ಆಯ್ಕೆ ಆಗದೆ ಇರುವುದು ಆಶ್ಚರ್ಯ ಅನ್ನಿಸಿದೆ. ದಿನೇಶ್ ಕಾರ್ತಿಕ್ ಅವರು ಐಪಿಎಲ್ ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಕಾರಣ ನ್ಯಾಷನಲ್ ಟೀಮ್ ಗೆ ಆಯ್ಕೆಯಾದರು. ಏಷ್ಯಾಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ದಿನೇಶ್ ಕಾರ್ತಿಕ್ ಅವರಿಗೆ ವಿಶ್ವಕಪ್ ನಲ್ಲಿ ಹೆಚ್ಚಾಗಿ ಆಡುವ ಅವಕಾಶ ಸಿಕ್ಕಿಲ್ಲ. ಅದೇ ಕಾರಣದಿಂದಲೋ ಎಂದು ದಿನೇಶ್ ಕಾರ್ತಿಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಇವರ ಬದಲಾಗಿ ಆರ್.ಸಿ.ಬಿ ತಂಡದ ಇನ್ನಿಬ್ಬರು ಆಟಗಾರರಿಗೆ ಸ್ಥಾನ ಸಿಕ್ಕಿದೆ.
ನಮ್ಮ ಆರ್ಸಿಬಿ ತಂಡದ ಆಟಗಾರ ರಜತ್ ಪಾಟಿದಾರ್ ಅವರಿಗೆ ಬಾಂಗ್ಲಾದೇಶ್ ವಿರುದ್ಧದ ಏಕದಿನ ಸೀರೀಸ್ ನಲ್ಲಿ ಸ್ಥಾನ ನೀಡಲಾಗಿದ್ದು, ಮತ್ತೊಬ್ಬ ಆಟಗಾರ ಶಾಬಾಜ್ ಅಹ್ಮದ್ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಒನ್ ಡೇ ಸೀರೀಸ್ ಗೆ ಆಯ್ಕೆ ಮಾಡಲಾಗಿದೆ. ಅರ್ಸಬಿ ತಂಡದ ಇಬ್ಬರು ಆಟಗಾರರು ನ್ಯಾಷನಲ್ ಟೀಮ್ ಗೆ ಆಯ್ಕೆಯಾಗಿರುವುದು ಸಂತೋಷದ ವಿಷಯ ಆಗಿದ್ದು, ತಂಡದ ಹಿರಿಯ ಆಟಗಾರರಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ. ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ವಿಶ್ರಾಂತಿ ಪಡೆಯಲಿದ್ದಾರೆ.