ಮೊಮ್ಮಗಳಿಗೆ ಮಗು ಮಾಡಿಕೊಳ್ಳುವ ಬಗ್ಗೆ ಬಂಪರ್ ಆಫರ್ ಕೊಟ್ಟ, ಅಮಿತಾಬ್ ಪತ್ನಿ. ಯಾವಾಗ ಮಗು ಮಾಡಿಕೊಳ್ಳಬಹುದಂತೆ ಗೊತ್ತೆ??

43

Get real time updates directly on you device, subscribe now.

ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಅವರು ತಮ್ಮ ಮೊಮ್ಮಗಳಿಗೆ ನೀಡಿರುವ ಸಲಹೆ ಈಗ ವೈರಲ್ ಆಗುತ್ತಿದೆ. ನವ್ಯಾ ನಂದ ಅವರ ವಾಟ್ ದಿ ಹೆಲ್ ನವ್ಯಾ ಪಾಡ್ ಕ್ಯಾಸ್ಟ್ ನಲ್ಲಿ ಜಯಾ ಬಚ್ಚನ್ ಅವರು ಮೊಮ್ಮಗಳ ಜೊತೆಗೆ ಮಾತನಾಡಿ, ದೈಹಿಕ ಆಕರ್ಷಣೆಯ ಬಗ್ಗೆ ಸಲಹೆ ನೀಡಿದ್ದಾರೆ. ಯುವ ಪೀಳಿಗೆಗೂ ಸಲಹೆ ನೀಡಿದ್ದಾರೆ. ತಮ್ಮ ಮೊಮ್ಮಗಳು ಮದುವೆಯಾಗದೆ ಮಗು ಪಡೆದರೆ ತಮಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ ಜಯಾ ಬಚ್ಚನ್. ಇವರ ಈ ಹೇಳಿಕೆಗಳು ಈಗ ಭಾರಿ ಚರ್ಚೆಗೆ ಕಾರಣವಾಗುತ್ತಿದೆ.

“ನಮ್ಮ ಸಮಯದಲ್ಲಿ ಪ್ರಯೋಗಗಳನ್ನು ಮಾಡುವ ಅವಕಾಶ ಇರಲಿಲ್ಲ. ದೈಹಿಕ ಆಕರ್ಷಣೆ ಈಗ ತುಂಬಾ ಮುಖ್ಯ. ಒಂದು ಸಂಬಂಧ ಪ್ರೀತಿ ಮತ್ತು ಹೊಂದಾಣಿಕೆಯ ಮೇಲೆ ನಿಲ್ಲುತ್ತದೆ ಎನ್ನುವ ಮಾತನ್ನು ನಾನು ನಂಬೋದಿಲ್ಲ. ನವ್ಯ ನವೇಲಿ ನಂದಾ ಮುಂದಿನ ದಿನಗಳಲ್ಲಿ ಮದುವೆಯಾಗದೆ ಮಗು ಪಡೆದರೆ ನನಗೆ ಸಮಸ್ಯೆ ಇಲ್ಲ. ನಾನು ಹೇಳೋದು ಕೆಲವರಿಗೆ ಇಷ್ಟ ಆಗದೆ ಇರಬಹುದು, ಆದರೆ ದೈಹಿಕ ಆಕರ್ಷಣೆ ಮತ್ತು ಹೊಂದಾಣಿಕೆ ಬಹಳ ಮುಖ್ಯ ಎಂದು ನಾವು ಅರ್ಥಮಾಡಿಕೊಳ್ಳಬೇಕು. ನಮ್ಮ ಕಾಲದ ಹಾಗೆ ಈಗಿಲ್ಲ, ಈಗಿನವರು ಪ್ರಯೋಗ ಮಾಡುತ್ತಾರೆ, ಹೊಸ ಪ್ರಯೋಗ ಯಾಕೆ ಮಾಡಬಾರದು ಎಂದು ನಾವು ಕೇಳುವುದು ತಪ್ಪು. ಅದು ಬಹಳ ಕಾಲದ ಸಂಬಂಧದ ಮೇಲೆ ನಿಲ್ಲುತ್ತದೆ, ದೈಹಿಕ ಆಕರ್ಷಣೆ ಇಲ್ಲದೆ, ಪ್ರೀತಿ ಮತ್ತು ಹೊಂದಾಣಿಕೆ ಮಾತ್ರದಿಂದ ಸದಾ ಕಾಲ ಜೊತೆಯಾಗಿರಲು ಆಗುವುದಿಲ್ಲ, ಒಂದು ಸಂಬಂಧ ನಿಲ್ಲಲು ದೈಹಿಕ ಆಕರ್ಷಣೆ ಬಹಳ ಮುಖ್ಯ..

ಇದು ಕರುಣಾಜನಕ ಎಂದು ಅನ್ನಿಸಬಹುದು. ಆದರೆ ನಮ್ಮ ನಂತರದ ಜೆನೆರೇಷನ್, ಶ್ವೇತಾ ಅವರ ಜೆನೆರೇಷನ್, ನವ್ಯ ಅವರ ಜೆನೆರೇಷನ್ ನಲ್ಲಿ ಎಲ್ಲವೂ ಬದಲಾಗಿದೆ. ಈ ಜೆನೆರೇಷನ್ ನವರು ಆ ಅನುಭವ ಹೊಂದುವುದನ್ನು ಅಪರಾಧ ಎಂದುಕೊಳ್ಳುತ್ತಾರೆ. ಆದರೆ ಅದು ತಪ್ಪು ಎನ್ನುವುದು ನನ್ನ ಭಾವನೆ..” ಎಂದು ಮೊಮ್ಮಗಳ ಬಗ್ಗೆ ಮಾತನಾಡಿ ಈಗಿನ ಜೆನೆರೇಷನ್ ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. “ಆ ವಿಷಯಗಳನ್ನು ಮುಚ್ಚುಮರೆ ಮಾಡದೆ ನಾನು ಕ್ಲಿನಿಕಲ್ ಆಗಿ ಮಾತನಾಡುತ್ತಿದ್ದೇನೆ. ಭಾವನೆಯ ಸಮಸ್ಯೆ ಇಂದ ನೀವು ಒಳ್ಳೆಯ ಸ್ನೇಹಿತನ ಜೊತೆಗೆ ಮದುವೆಯಾಗಬೇಕು. ಆ ಹುಡುಗನ ಜೊತೆಗೆ ಮಾತನಾಡಿ, ಇಷ್ಟಕಷ್ಟಗಳನ್ನು ಹಂಚಿಕೊಂಡು, ಮಗು ಹೊಂದುವ ಬಗ್ಗೆ ಚರ್ಚಿಸಿ ನಿರ್ಧಾರ ಮಾಡಿ. ಮುಂದೆ ಮದುವೆ ಮಾಡಿಕೊಳ್ಳಿ..” ಎಂದು ಸಲಹೆ ನೀಡಿದ್ದಾರೆ ಜಯಾ ಬಚ್ಚನ್.

Get real time updates directly on you device, subscribe now.