ಶುರುವಾಯಿತು ನಿಮ್ಮ ಅದೃಷ್ಟ; ನಿಮ್ಮನ್ನು ಯಾರು ಏನು ಮಾಡೋಕೆ ಆಗಲ್ಲ. ಎರಡು ತಿಂಗಳು, ಹಣವೊ ಹಣ. ಅದೃಷ್ಟವೋ ಅದೃಷ್ಟ. ಯಾವ ರಾಶಿಗಳಿಗೆ ಗೊತ್ತೆ??

94

Get real time updates directly on you device, subscribe now.

ಬುದ್ಧಿವಂತ ಗ್ರಹ ಎಂದು ಕರೆಲ್ಪಡುವ ಬುಧ ಗ್ರಹವು ಕನ್ಯಾ ರಾಶಿಗೆ ಪ್ರವೇಶ ಮಾಡಿದೆ, ಇದರಿಂದ ಕನ್ಯಾ ರಾಶಿ ಏಳಿಗೆ ಕಾಣುತ್ತದೆ. ನಂತರ ಶುಕ್ರಗ್ರಹವು ತುಲಾ ರಾಶಿಗೆ ಪ್ರವೇಶ ಮಾಡುತ್ತದೆ. ಜಾತಕದಲ್ಲಿ ಬುಧನ ಸ್ಥಾನ ಸ್ಟ್ರಾಂಗ್ ಆಗಿರುವ ವ್ಯಕ್ತಿಯ ತನ್ನ ಜೀವನದಲ್ಲಿ ಬಹಳ ಬುದ್ಧಿವಂತ ಆಗಿರುತ್ತಾನೆ, ಆತನ ನೆನಪಿನ ಶಕ್ತಿ ಬಹಳ ಚೆನ್ನಾಗಿರುತ್ತದೆ, ಜನರ ಜೊತೆಗೆ ಸುಲಭವಾಗಿ ಬೆರೆಯುತ್ತಾನೆ. ಬುಧನು ಕನ್ಯಾ ರಾಶಿಯಲ್ಲಿ ಸಂಚಾರ ಮಾಡುವುದರಿಂದ ಈ ಕೆಲವು ರಾಶಿಗಳಿಗೆ ಒಳ್ಳೆಯದಾಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಈ ರಾಶಿಯವರ ಕೌಟುಂಬಿಕ ಜೀವನ ಚೆನ್ನಾಗಿರುತ್ತದೆ, ಮನೆಯವರ ಜೊತೆಗೆ ಆತ್ಮೀಯವಾಗಿರುತ್ತೀರಿ. ವೃತ್ತಿ ಜೀವನದಲ್ಲಿ ನಿಮ್ಮ ಆಕರ್ಷಕ ಸ್ವಭಾವದ ಮೂಲಕ ನಿಮ್ಮ ಜೊತೆಯಲ್ಲಿ ಕೆಲಸ ಮಾಡುವವರನ್ನು ಮತ್ತು ಉನ್ನತ ಅಧಿಕಾರಿಗಳನ್ನು ಮೆಚ್ಚಿಸಿ, ಕೆಲದದಲ್ಲಿ ಯಶಸ್ಸು ಪಡೆಯುತ್ತೀರಿ.

ಕರ್ಕಾಟಕ ರಾಶಿ :- ನೀವು ಮಾತನಾಡುವ ಶೈಲಿ ಚೆನ್ನಾಗಿರುತ್ತದೆ, ಅದರಿಂದಾಗಿ ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆ ಅದ್ಭುತವಾಗಿರುತ್ತದೆ. ಮೀಡಿಯಾ, ನಟನೆ, ಬರವಣಿಗೆ, ನಿರ್ದೇಶನ, ನಿರೂಪಣೆ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಲಾಭ, ಪ್ರಯೋಜನ, ಯಶಸ್ಸು ಸಿಗುತ್ತದೆ.

ಸಿಂಹ ರಾಶಿ :- ನೀವು ಮಾತನಾಡುವ ಶೈಲಿ ಬದಲಾಗುತ್ತದೆ, ಮಧುರವಾಗಿ ಮಾತನಾಡುತ್ತೀರಿ. ಕುಟುಂಬದವರ ಜೊತೆಗೆ ಬಾಂಧವ್ಯ ಚೆನ್ನಾಗಿರುತ್ತದೆ, ಅವರ ಬೆಂಬಲ ಸಿಗುತ್ತದೆ. ಮನೆಯವರೊಡನೆ ಮತ್ತು ಸ್ನೇಹಿತರ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ.

ಕನ್ಯಾ ರಾಶಿ :- ಬುಧ ಗ್ರಹವು ಕನ್ಯಾ ರಾಶಿಗೆ ಪ್ರವೇಶ ಮಾಡುವುದರಿಂದ ಇವರಿಗೆ ಹೆಚ್ಚಿನ ಲಾಭವಾಗುತ್ತದೆ. ಉದ್ಯೋಗದಲ್ಲಿ ಯಶಸ್ಸು ಪಡೆಯುತ್ತೀರಿ, ಅಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಮೆಚ್ಚುಗೆ ಪಡೆಯುತ್ತೀರಿ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ತುಲಾ ರಾಶಿ :- ನೀವು ಮಾಡುವ ಕೆಲಸಗಳಿಂದ ಬೇರೆಯವರನ್ನು ಮೆಚ್ಚಿಸುತ್ತೀರಿ. ಒಳ್ಳೆಯ ವಿಷಯಗಳನ್ನು ಈ ಸಮಯದಲ್ಲಿ ಕೇಳುತ್ತೀರಿ, ಕಠಿಣ ಪರಿಶ್ರಮ ಹಾಕಿ ಮಾಡುವ ಕೆಲಸಕ್ಕೆ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತೀರಿ.

Get real time updates directly on you device, subscribe now.