ಡಿ ಬಾಸ್ ಸಿಂಪಲ್ ಅಂದುಕೊಂಡಿದ್ದೀರಾ?? ಮಗನ ಶಾಲೆ ಫೀಸ್ ಕೇಳಿದರೆ ನಿಮ್ಮ ತಲೆ ತಿರುಗುತ್ತದೆ, ಎಷ್ಟು ಲಕ್ಷ ಗೊತ್ತೇ??
ನಟ ದರ್ಶನ್ ಅವರ ರಾಬರ್ಟ್ ಸಿನಿಮಾ ತೆರೆಕಂಡು ಒಂದೂವರೆ ವರ್ಷ ಆಗುತ್ತಿದೆ, ರಾಬರ್ಟ್ ಬಳಿಕ ದರ್ಶನ್ ಅವರು ಕ್ರಾಂತಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ಅವರಿಗೆ ನಾಯಕಿ ಬುಲ್ ಬುಲ್ ರಚಿತಾ ರಾಮ್ ಅವರು, ಕ್ರಾಂತಿ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟ ರವಿಚಂದ್ರನ್ ಅವರು, ನಟಿ ಸುಮಲತಾ ಅವರು ಮತ್ತು ಇನ್ನಿತರರು ನಟಿಸಿದ್ದಾರೆ. ಕ್ರಾಂತಿ ಸಿನಿಮಾವನ್ನು ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರು ನಿರ್ದೇಶನ ಮಾಡಿದ್ದು, ಯಜಮಾನ ಸಿನಿಮಾ ನಿರ್ಮಾಣ ಮಾಡಿದ್ದ ಶೈಲಜಾ ನಾಗ್ ಅವರೇ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಕ್ರಾಂತಿ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಯಾವುದು ಸಿಕ್ಕಿಲ್ಲ ಎಂದು ದರ್ಶನ್ ಅವರ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. ಕ್ರಾಂತಿಯಲ್ಲಿ ಅಕ್ಷರ ಕ್ರಾಂತಿ ಬಗ್ಗೆ ಕಥೆ ಹೆಣೆಯಲಾಗಿದೆ. ವಿದ್ಯಾರ್ಥಿಹಳ ಶಿಕ್ಷಣ, ಕನ್ನಡ ಸರ್ಕಾರಿ ಶಾಲೆಗಳ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿರುವ ಈ ಸಿನಿಮಾ, ಈ ವರ್ಷ ಕನ್ನಡ ರಜ್ಯೋತ್ಸವಕ್ಕೆ ಬಿಡುಗಡೆ ಆಗುತ್ತಡ ಎಂದು ಅಭಿಮಾನಿಗಳು ಭಾವಿಸಿದ್ದರು, ಆದರೆ ಬಿಡುಗಡೆ ತಡವಾಯಿತು, ಕ್ರಾಂತಿ ಹೊಸ ಅಪ್ಡೇಟ್ ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ನಿನ್ನೆ ಹೊಸ ಅಪ್ಡೇಟ್ ಸಿಕ್ಕಿದೆ, ನಿನ್ನೆ ಕ್ರಾಂತಿ ಸಿನಿಮಾದ ಪ್ರೆಸ್ ಮೀಟ್ ನಡೆಸಿದ್ದು, ದರ್ಶನ್ ಅವರು ಸಿನಿಮಾ ಬಗ್ಗೆ ಅನೇಕ ವಿಚಾರಗಳನ್ನು ಹೇಳಿದ್ದಾರೆ..
ಸರ್ಕಾರಿ ಶಾಲೆ, ಖಾಸಗಿ ಶಾಲೆಗಳ ಬಗ್ಗೆ ಮಾತನಾಡಿದ ದರ್ಶನ್ ಅವರು, “ಕೆನಡಿಯನ್ ಶಾಲೆ ಅಂತ ಇದೆಯಂತೆ, ಅಲ್ಲಿ ವರ್ಷಕ್ಕೆ 26 ಲಕ್ಷ ತಗೋತಾರೆ. ನನ್ನ ಮಗ ಓದ್ತಾ ಇರೋ ಸ್ಕೂಲ್ ನಲ್ಲಿ ವರ್ಷಕ್ಕೆ 9 ಲಕ್ಷ ತಗೋತಾರೆ. ನಾವು ಓದೋವಾಗ 40, 50 ರೂಪಾಯಿ ಇರ್ತಾ ಇತ್ತು. ನಾನು 10ನೇ ತರಗತಿ ಓದೋವಾಗಲು 60 ರೂಪಾಯಿ ಕಟ್ಟಿದ್ವಿ ಅಷ್ಟೇ. ಆದರೆ ಈಗ ಇಷ್ಟು ಲಕ್ಷ ಹೇಗಾಯ್ತು? ಸರ್ ಎಂ.ವಿಶ್ವೇಶ್ವರಯ್ಯ ಅವರು ಸರ್ಕಾರಿ ಶಾಲೆಯಲ್ಲಿ ಓದಿ ಅಷ್ಟು ದೊಡ್ಡ ಅಣೆಕಟ್ಟು ಕಟ್ಟಿಸಿದ್ರು, ದೊಡ್ಡ ದೊಡ್ಡ ಡಾಕ್ಟರ್ ಗಳು, ಇಂಜಿನಿಯರ್ ಗಳು ಓದಿದ್ದು ಸರ್ಕಾರಿ ಶಾಲೆಯಲ್ಲೇ. ನಮ್ಮ ಶಾಲೆಗಳ ಬಗ್ಗೆ ಹೇಳುವ ಒಂದು ಒಳ್ಳೆಯ ಸಿನಿಮಾ ಮಾಡಿದ್ದೀವಿ..” ಎಂದಿದ್ದಾರೆ ನಟ ದರ್ಶನ್. ದರ್ಶನ್ ಅವರ ಮಗನ ಶಾಲೆಗೆ ಒಂದು ತಿಂಗಳಿಗೆ ಕಟ್ಟುವ ಸ್ಕೂಲ್ ಫೀಸ್ ವಿಷಯ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.