ಕೊಹ್ಲಿ ರವರ ಪಾಕ್ ವಿರುದ್ದದ ಬ್ಯಾಟಿಂಗ್ ಅನ್ನು ಮರೆತರೇ ಗಂಭೀರ್?? ಸೌತ್ ಆಫ್ರಿಕಾ ಪಂದ್ಯ ಮುಗಿದ ಬಳಿಕ ಹೇಳಿದ್ದೇನು ಗೊತ್ತೇ??
ನಿನ್ನೆ ಭಾರತ ತಂಡ ಸೌತ್ ಆಫ್ರಿಕಾ ವಿರುದ್ಧ, ಟಿ20 ವಿಶ್ವಕಪ್ ನಲ್ಲಿ ತನ್ನ ಮೂರನೇ ಪಂದ್ಯವನನ್ನಾಡಿತು. ಆದರೆ ಭಾರತ ತಂಡ ಅಂದುಕೊಂಡ ಹಾಗೆ ಎಲ್ಲವೂ ನಡೆಯಲಿಲ್ಲ. ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿದ್ದ ಭಾರತ ತಂಡಕ್ಕೆ ಸೌತ್ ಆಫ್ರಿಕಾ ಬೌಲರ್ ಗಳು ಶಾಕ್ ನೀಡಿದರು. ಸೌತ್ ಆಫ್ರಿಕಾ ವೇಗಿಗಳ ಆರ್ಭಟಕ್ಕೆ ಭಾರತ ತಂಡ ಆರಂಭದಲ್ಲೇ ವಿಕೆಟ್ಸ್ ಕಳೆದುಕೊಳ್ಳಲು ಶುರು ಮಾಡಿತು. ಕೆ.ಎಲ್.ರಾಹುಲ್ ಅವರು 9 ರನ್ಸ್ ಗಳಿಸಿ ಔಟ್ ಆಗಿ ಮತ್ತೆ ವೈಫಲ್ಯ ಮುಂದುವರೆಸಿದರು. ಕ್ಯಾಪ್ಟನ್ ರೋಹಿತ್ ಶರ್ಮ ಅವರು 15 ರನ್ ಗಳಿಸಿ ಔಟ್ ಆದರೆ, ವಿರಾಟ್ ಕೋಹ್ಲಿ ಅವರು 12 ರನ್ ಗಳಿಸಿ ಔಟ್ ಆದರು. ಹಾರ್ದಿಕ್ ಪಾಂಡ್ಯ ಅವರು ಸಹ ಹೆಚ್ಚು ರನ್ಸ್ ಗಳಿಸಲು ಸಾಧ್ಯವಾಗಲಿಲ್ಲ.
ದಿನೇಶ್ ಕಾರ್ತಿಕ್ ಅವರು ಕೂಡ ಮ್ಯಾಜಿಕ್ ತೋರಿಸಲು ಆಗಲಿಲ್ಲ. ನಿನ್ನೆಯ ಪಂದ್ಯದಲ್ಲಿ ಭಾರತ ತಂಡವನ್ನು ಎತ್ತಿ ಹಿಡಿದವರು ಸೂರ್ಯಕುಮಾರ್ ಯಾದವ್ ಅವರು. ನಿನ್ನೆಯ ಪಂದ್ಯದಲ್ಲಿ ಎಷ್ಟೇ ಒತ್ತಡ ಇದ್ದರು ಸಹ, ಎದುರಾಳಿ ಬೌಲರ್ ಗಳು ಎಷ್ಟೇ ವೇಗವಾಗಿ ಬೌಲಿಂಗ್ ಮಾಡುತ್ತಿದ್ದರು ಕೂಡ, ಸ್ವಲ್ಪವೂ ಧೃತಿಗೆಡದೆ, ಆತ್ಮವಿಶ್ವಾಸ ಕುಗ್ಗದೆ, ಒಂಟಿಯಾಗಿ ತಂಡದ ಸ್ಕೋರ್ ಅನ್ನು ಹೆಚ್ಚಿಸುತ್ತಾ ಹೋದರು ಸೂರ್ಯಕುಮಾರ್. ಎಷ್ಟೇ ವೇಗದ ಬಾಲ್ ಆಗಿದ್ದರು ಕೂಡ, ಸೂರ್ಯಕುಮಾರ್ ಯಾದವ್ ಅವರು ಅದನ್ನು ತಮಗೆ ಸರಿಹೋಗುವ ಹಾಗೆ ಬಳಸಿಕೊಂಡು ಬೌಂಡರಿ ಸಿಕ್ಸರ್ ಭಾರಿಸುತ್ತಿದ್ದರು. ಸೂರ್ಯಕುಮಾರ್ ಯಾದವ್ ಅವರು ಈ ರೀತಿಯ ಪ್ರದರ್ಶನ ನೀಡಿದರಿಂದಲೇ ಭಾರತ ತಂಡದ ಸ್ಕೋರ್ 133 ರ ಗಡಿ ಮುಟ್ಟಲು ಸಾಧ್ಯವಾಯಿತು.
ಸೂರ್ಯಕುಮಾರ್ ಯಾದವ್ ಅವರ ಈ ಪ್ರಯತ್ನ ಇದ್ದರು ಕೂಡ, 2ನೇ ಇನ್ನಿಂಗ್ಸ್ ನಲ್ಲಿ ಆರಂಭದಲ್ಲಿ ಭಾರತ ತಂಡದ ಬೌಲಿಂಗ್ ಪ್ರದರ್ಶನ ಅದ್ಭುತವಾಗಿ ಶುರುವಾದರು ಕೂಡ, ಕೊನೆಯ ಓವರ್ ಗಳಲ್ಲಿ ಕಳಪೆ ಬೌಲಿಂಗ್ ಪ್ರದರ್ಶನ, ಮತ್ತು ಎದುರಾಳಿ ತಂಡದ ಬ್ಯಾಟ್ಸ್ಮನ್ ಗಳನ್ನು ಔಟ್ ಮಾಡುವ ಹಲವು ಅವಕಾಶಗಳನ್ನು ಕೈಚೆಲ್ಲಿದ ಭಾರತ ತಂಡ ಸೋತಿತು. ಆದರೆ ಸೂರ್ಯಕುಮಾರ್ ಯಾದವ್ ಅವರ ಆಟದ ಶೈಲಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಇದೀಗ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು, ಸೂರ್ಯಕುಮಾರ್ ಯಾದವ್ ಅವರ ಆಟದ ಶೈಲಿಯನ್ನು ಹಾಡಿ ಹೊಗಳಿದ್ದಾರೆ, “ಇದುವರೆಗೂ ನಾನು ಇದಕ್ಕಿಂತ ಅಟ್ಟುತ್ತಮವಾದ ಇನ್ನಿಂಗ್ಸ್ ನೋಡಿಲ್ಲ. ಒಬ್ಬ ಭಾರತೀಯ ಕ್ರಿಕೆಟ್ ಆಟಗಾರನ ಅತ್ಯುತ್ತಮ ಇನ್ನಿಂಗ್ಸ್ ಇದು. ವಿಕೆಟ್ ಗಳು ಬೀಳುತ್ತಾ ಹೋದರು, ಅಂತಹ ಈ ಪಿಚ್ ನಲ್ಲಿ ಆ ರೀತಿಯ ಬ್ಯಾಟಿಂಗ್ ಮಾಡಿದ್ದು ಶ್ರೇಷ್ಠ..” ಎಂದು ಹೇಳಿದ್ದಾರೆ ಗೌತಮ್ ಗಂಭೀರ್.