ಅಪ್ಪು ಗಂಧದಗುಡಿಗೆ ಡಬಲ್ ಶಾಕ್, ಅಬ್ಬರಿಸುತ್ತಿರುವಾಗಲೇ ಕಿಡಿಗೇಡಿಗಳು ಅದೆಂತಹ ಕೆಲಸ ಮಾಡಿದ್ದಾರೆ ಗೊತ್ತೇ?? ಇನ್ನು ಥಿಯೇಟರ್ ಗೆ ಜನ ಬರಲ್ವಾ?

188

Get real time updates directly on you device, subscribe now.

ಗಂಧದಗುಡಿ ಇದು ದೊಡ್ಮನೆಗೆ ಬಹಳ ಆಪ್ತವಾದ ಟೈಟಲ್ ಎಂದರೆ ತಪ್ಪಾಗುವುದಿಲ್ಲ. 70ರ ದಶಕದಲ್ಲಿ ಅಣ್ಣಾವ್ರು ಇದೇ ಹೆಸರಿನಲ್ಲಿ ಸಿನಿಮಾ ಮಾಡಿ, ಕಾಡನ್ನು ಉಳಿಸುವ ಸಂದೇಶ ಸಾರಿದ್ದರು. 90ರ ದಶಕದಲ್ಲಿ ಶಿವಣ್ಣ ಅವರು ಗಂಧದಗುಡಿ2 ಸಿನಿಮಾದಲ್ಲಿ ಸಹ ಅದೇ ರೀತಿಯ ಪಾತ್ರ ಮಾಡಿದ್ದರು. ಇದೀಗ ಅಪ್ಪು ಅವರು ಗಂಧದಗುಡಿಯನ್ನು ತಮ್ಮ ಶೈಲಿಯಲ್ಲಿ ಕನ್ನಡಿಗರ ಮುಂದಿಟ್ಟಿದ್ದಾರೆ. ಇದೊಂದು ಡಾಕ್ಯುಮೆಂಟರಿ ಆಗಿದ್ದರು, ಯಾವುದೇ ಕಮರ್ಷಿಯಲ್ ಸಿನಿಮಾಗೆ ಗೆ ಕಡಿಮೆ ಇಲ್ಲ ಎನ್ನುವ ಹಾಗೆ ಬಹಳ ಅದ್ಭುತವಾಗಿ ಚಿತ್ರೀಕರಣ ಮಾಡಲಾಗಿದೆ.

ಅಮೋಘವರ್ಷ ಅವರೊಡನೆ ಅಪ್ಪು ಅವರ ಪ್ರಯಾಣ ಮತ್ತು ಮಾತುಕತೆ ಎಲ್ಲವೂ ನಮಗೆ ಬಹಳ ಹತ್ತಿರ ಎನ್ನಿಸುತ್ತದೆ, ಇದು ಅಪ್ಪು ಅವರ ಸಿನಿಮಾ ಅಲ್ಲ, ನಾವು ಕೂಡ ಅಪ್ಪು ಅವರ ಜೊತೆಗೆ ಪ್ರಯಾಣ ಮಾಡುತ್ತಿದ್ದೇವೆ, ಅವರೊಡನೆ ಕರ್ನಾಟಕ ನೋಡುತ್ತಿದ್ದೇವೆ ಎಂದು ಅನ್ನಿಸುತ್ತದೆ. ಅಪ್ಪು ಅವರ ಈ ವಿಶೇಷವಾದ ಜರ್ನಿ ನೋಡಲು, ಅವರ ಅಭಿಮಾನಿಗಳು ಮತ್ತು ಕನ್ನಡ ಸಿನಿಮಾಪ್ರಿಯರು ಥಿಯೇಟರ್ ಗೆ ಬರುತ್ತಿದ್ದಾರೆ, ಮೂರು ದಿನಗಳಿಂದ ಗಂಧದಗುಡಿ ಬುಕಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಹಾಗೂ ಅಭಿಮಾನಿಗಳು ಸಹ ಥಿಯೇಟರ್ ಗೆ ಬಂದು ನೋಡುತ್ತಿದ್ದಾರೆ.

ಆದರೆ ಇನ್ನು ಮುಂದೆ ಜನರು ಬರುವುದು ಸ್ವಲ್ಪ ಕಷ್ಟವೇ ಆಗಿದೆ, ಏಕೆಂದರೆ ಪೈರೆಸಿ ಕಾಟ ಗಂಧದಗುಡಿ ಸಿನಿಮಾವನ್ನು ಕೂಡ ಬಿಟ್ಟಿಲ್ಲ. ಈಗಾಗಲೇ ಗಂಧಗುಡಿ ಪೈರೇಟೆಡ್ ಕಾಪಿ ಕೆಲವು ವೆಬ್ಸೈಟ್ ಗಳಲ್ಲಿ ಹರಿದಾಡುತ್ತಿದೆ, ಪೂರ್ತಿ ಸಿನಿಮಾ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಇನ್ನು ಕೆಲವು ಕಿಡಿಗೇಡಿಗಳು ಗಂಧದಗುಡಿ ಪೂರ್ತಿ ಸಿನಿಮಾವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಈ ಕಾರಣಗಳಿಂದ ಗಂಧದಗುಡಿ ಸಿನಿಮಾ ಸುಲಭವಾಗಿ ಮೊಬೈಲ್ ನಲ್ಲಿ ಸಿಗುತ್ತಿರುವುದರಿಂದ ಜನರು ಥಿಯೇಟರ್ ಗೆ ಬರುವುದು ಕಷ್ಟ ಎಂದು ಹೇಳಲಾಗುತ್ತಿದೆ.

Get real time updates directly on you device, subscribe now.