ಜೈಪುರ್ ಪಿಂಕ್ ಪ್ಯಾಂಥರ್ಸ್ ಗೆ ಸರಿಯಾಗಿಯೇ ಗುಮ್ಮಿದ ಬೆಂಗಳೂರು ಬುಲ್ಸ್, ಜೊತೆ ದಾಖಲೆಗಳ ಮೇಲೆ ದಾಖಲೆ. ಏನೆಲ್ಲಾ ಸಾಧನೆ ಮಾಡಿದ್ದಾರೆ ಗೊತ್ತೇ??
ವಿವಿ ಪ್ರೊ ಕಬಡ್ಡಿ ಲೀಗ್ ನಲ್ಲಿ ನಮ್ಮ ಬೆಂಗಳೂರು ಬುಲ್ಸ್ ತಂಡ ಪ್ರಮುಖವಾದ ತಂಡಗಳಲ್ಲಿ ಒಂದು. ಹಲವು ಅತ್ಯುತ್ತಮ ಪ್ರದರ್ಶನ ನೀಡಿರುವ ನಮ್ಮ ತಂಡ, ಈ ವರ್ಷ ಕೆಲವು ಬದಲಾವಣೆಗಳೊಂದಿಗೆ ಅಖಾಡಕ್ಕೆ ಎಂಟ್ರಿ ಕೊಟ್ಟು, ಪಂದ್ಯಗಳನ್ನು ಗೆಲ್ಲುತ್ತಾ ಸ್ಟ್ರಾಂಗ್ ಟೀಮ್ ಆಗಿ ಉಳಿದುಕೊಂಡಿದೆ. ನಿನ್ನೆ ನಡೆದ ಜೈಪುರ್ ಪ್ಯಾಂಥರ್ಸ್ ತಂಡಕ್ಕೆ ಗೂಸಾ ಕೊಟ್ಟ ಬೆಂಗಳೂರು ಬುಲ್ಸ್ ತಂಡ ಇದೀಗ ಹೊಸದೊಂದು ದಾಖಲೆ ಬರೆದಿದೆ. ಆ ದಾಖಲೆ ಏನು ಎಂದು ತಿಳಿಸುತ್ತೇವೆ ನೋಡಿ..
ನಮ್ಮ ಬೆಂಗಳೂರು ಬುಲ್ಸ್ ತಂಡದ ಆಟಗಾರರು, ಒಂದಲ್ಲಾ ಒಂದು ದಾಖಲೆಗಳನ್ನು ಬರೆಯುತ್ತಲೇ ಬಂದಿದ್ದಾರೆ. ನಮ್ಮ ತಂಡ ಪಂದ್ಯವನ್ನು ಸೋತರು ಅಥವಾ ಗೆದ್ದರು, ದಾಖಲೆಗಳು ಮಾತ್ರ ನಮ್ಮ ಹೆಸರಿನಲ್ಲೇ ಇದೆ ಎಂದು ಹೇಳಬಹುದು. ನಿನ್ನೆ ನಡೆದ ಪಂದ್ಯದಲ್ಲಿ ಸಹ ನಮ್ಮ ಬೆಂಗಳೂರು ಬುಲ್ಸ್ ತಂಡದ ಆಟಗಾರರು ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಪಂದ್ಯ ಮುಗಿದ ಬಳಿಕ ಈ ದಾಖಲೆಗಳ ಬಗ್ಗೆ ತಿಳಿದುಬಂದಿದೆ. ನಮ್ಮ ತಂಡದ ಭರತ್ ಹೂಡ ಅವರು ವಿವೋ ಪ್ರೊ ಕಬಡ್ಡಿ ಲೀಗ್ ಸೀಸನ್9 ರಲ್ಲಿ 100 ರೈಡ್ ಪಾಯಿಂಟ್ಸ್ ಗಳನ್ನು ಕಂಪ್ಲೀಟ್ ಮಾಡಿದ್ದಾರೆ. ಇದನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ.
ಇಷ್ಟೇ ಅಲ್ಲದೆ, ಸೌರಭ್ ನಂದಲ್ ಅವರು ತಮ್ಮ ಪಿಕೆಎಲ್ ಕೆರಿಯರ್ ನಲ್ಲಿ ಬರೋಬ್ಬರಿ 150 ಟ್ಯಾಕಲ್ ಪಾಯಿಂಟ್ಸ್ ಗಳನ್ನು ನಿನ್ನೆ ಕಂಪ್ಲೀಟ್ ಮಾಡಿದರು. 150 ಟ್ಯಾಕಲ್ ಪಾಯಿಂಟ್ಸ್ ಗಳಿಸುವುದು ಬಹಳ ಕಷ್ಟದ ವಿಷಯ, ಇದು ಬೆಂಗಳೂರು ಬುಲ್ಸ್ ತಂಡದ ಮತ್ತೊಂದು ದೊಡ್ಡ ಸಾಧನೆ ಎಂದು ಹೇಳಬಹುದು. ಹಿರಿಯ ಆಟಗಾರರೆ ಮಾಡದ ಈ ಸಾಧನೆಗಳನ್ನು ನಮ್ಮ ಯುವ ಆಟಗಾರರು ಮಾಡುತ್ತಿದ್ದಾರೆ. ನಿನ್ನೆಯ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧದ ಪಂದ್ಯದಲ್ಲಿ ನಮ್ಮ ತಂಡ ಅದ್ಭುತ ಪ್ರದರ್ಶನ ನೀಡಿತು. ವಿಕಾಸ್ ಕಂಡೋಲ ಅವರು ಪಂದ್ಯವನ್ನು ನಮ್ಮ ಕಡೆಗೆ ಬದಲಾಯಿಸಿದರು. ಆದರೆ ಬೆಂಗಳೂರು ಬುಲ್ಸ್ ತಂಡದ ಡಿಫೆನ್ಸ್ ಇನ್ನು ಸ್ವಲ್ಪ ಇಂಪ್ರೂವ್ ಆಗಬೇಕಿದೆ, ಒಂದು ವೇಳೆ ಡಿಫೆನ್ಸ್ ಚೆನ್ನಾಗಿ ಇದ್ದಿದ್ದರೆ, ನಿನ್ನೆಯ ಪಂದ್ಯದಲ್ಲಿ ಇನ್ನು 5 ಅಂಕಗಳು ಹೆಚ್ಚಾಗಿ ಬರುತ್ತಿದ್ದವು