ಅಪ್ಪುವಿನ ಕೊನೆ ಸಿನೆಮಾಗೆ ಸಾಲು ಸಾಲು ಸವಾಲುಗಳು; ಕೊನೆಯ ಚಿತ್ರವಾದರೂ ಮೂರು ದಿನಗಳಲ್ಲಿ ಗಳಿಸಿದ ಚಿಲ್ಲರೆ ಹಣ ಎಷ್ಟು ಗೊತ್ತೇ??
ಗಂಧದಗುಡಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕರ್ನಾಟಕದ ಮನೆಮಗ, ಕರ್ನಾಟಕ ರತ್ನ ಅಪ್ಪು ಅವರ ಕೊನೆಯ ಸಿನಿಮಾ. ಈ ಸಿನಿಮಾವನ್ನು ನೋಡಲು ಎಲ್ಲಾ ಕುಟುಂಬಗಳು, ಕರ್ನಾಟಕದ ಪ್ರತಿಯೊಬ್ಬರು ಸಹ ಥಿಯೇಟರ್ ಗೆ ಬರುತ್ತಿದ್ದಾರೆ. ಇದು ಪುನೀತ್ ಅವರ ಪಯಣ, ಒಂದು ಪಾತ್ರವಾಗಿ ಅಲ್ಲದೆ೦, ಪವರ್ ಸ್ಟಾರ್ ಆಗಿ ಅಲ್ಲದೆ, ಪ್ರಕೃತಿಯ ಮೇಲೆ ಪ್ರೀತಿ ಇರುವ ಒಬ್ಬ ಸಾಮಾನ್ಯ ಮನುಷ್ಯನ ಹಾಗೆ ಅಪ್ಪು ನಿಜ ಜೀವನದಲ್ಲಿ ತಾವಿರುವ ಹಾಗೆ ಕಾಣಿಸಿಕೊಂಡಿದ್ದಾರೆ. ಗಂಧದಗುಡಿಯ ಮೂಲಕ ಅಪ್ಪು ಅವರನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಥಿಯೇಟರ್ ಗೆ ಧಾವಿಸಿ ಬರುತ್ತಿರುವುದು ಖಂಡಿತ. ಬಿಡುಗಡೆಯಾದ ಮೂರು ದಿನದಲ್ಲಿ ಅಪ್ಪು ಅವರ ಸಿನಿಮಾ ಗಳಿಸಿದ್ದು ಎಷ್ಟು ಗೊತ್ತಾ?
ಗಂಧದಗುಡಿ ರಾಜ್ಯದಲ್ಲೋ 223 ಕ್ಕಿಂತ ಹೆಚ್ಚು ಚಿತ್ರಮಂದಿರದಲ್ಲಿ ತೆರೆಕಂಡಿತು. ಸಾಮಾನ್ಯವಾಗಿ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ 4 ಶೋ ಇರುತ್ತದೆ, ಆದರೆ ಗಂಧದಗುಡಿ ಸಿನಿಮಾದ ಅವಧಿ ಒಂದೂವರೆ ಗಂಟೆ ಆಗಿರುವ ಕಾರಣ, ದಿನಕ್ಕೆ 5 ರಿಂದ 6 ಶೋಗಳು ನಡೆಯುತ್ತಿವೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಇನ್ನು ಹೆಚ್ಚಿನ ಶೋಗಳು ನಡೆಯುತ್ತಿದ್ದು, ಶುಕ್ರವಾರದ ದಿನ ಬೆಳಗ್ಗೆ 7 ಗಂಟೆ ಇಂದಲೇ ಶೋಗಳು ಶುರುವಾಗಿದೆ. ಒಟ್ಟಾರೆಯಾಗಿ ಎರಡು ದಿನಗಳಲ್ಲಿ 4000 ಸಾವಿರಕ್ಕಿಂತ ಹೆಚ್ಚು ಸಾರಿ ಗಂಧದಗುಡಿ ಪ್ರದರ್ಶನಗೊಂಡಿದೆ ಎಂದು ಮಾಹಿತಿ ಸಿಕ್ಕಿದೆ. ಶುಕ್ರವಾರ ಮತ್ತು ಶನಿವಾರದ ಎರಡು ದಿನಗಳ ಒಟ್ಟು ಗಳಿಕೆ 18 ರಿಂದ 20 ಕೋಟಿ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ.
ಭಾನುವಾರದ ದಿನ ಹೆಚ್ಚು ಜನರು ಥಿಯೇಟರ್ ಗೆ ಬಂದು ಸಿನಿಮಾ ನೋಡಿರುವುದು ಖಂಡಿತ. ಹಾಗಾಗಿ ಭಾನುವಾರದ ದಿನ ಕಲೆಕ್ಷನ್ ಹೆಚ್ಚಾಗಿದ್ದು, ಒಟ್ಟಾರೆಯಾಗಿ ಮೂರು ದಿನಗಳಲ್ಲಿ 30 ಕೋಟಿ ರೂಪಾಯಿ ಗಳಿಸಿದೆ ಎಂದು ಮಾಹಿತಿ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಗಳಿಕೆ ಮಾಡುವ ನಿರೀಕ್ಷೆ ಇದೆ. ಅಪ್ಪು ಅವರ ಗಂಧದಗುಡಿ ಹಿಂದಿನ ಎಲ್ಲಾ ರೆಕಾರ್ಡ್ ಗಳನ್ನು ಬ್ರೇಕ್ ಮಾಡುತ್ತದೆ. ಭರ್ಜರಿ ಕಲೆಕ್ಷನ್ ಮಾಡುತ್ತದೆ ಎಂದು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು, ಆದರೆ ನಿರೀಕ್ಷೆಯ ಮಟ್ಟದ ಕಲೆಕ್ಷನ್ ತಲುಪಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.