ಅತಿ ಹೆಚ್ಚು ವೇಗವಾಗಿ ರನ್ ಗಳಿಸಲು ಧೋನಿ ತಂತ್ರವನ್ನು ಅಳವಡಿಸಿಕೊಂಡ ಪಾಂಡ್ಯ: ಅದೇಗೆ ಹೆಚ್ಚು ರನ್ ಗಳಿಸುತ್ತಿದ್ದಾರೆ ಗೊತ್ತೇ?

18

Get real time updates directly on you device, subscribe now.

ಟಿ20 ಪಂದ್ಯಗಳು ಬಹಳ ಬೇಗ ಮುಗಿಯುವ ಪಂದ್ಯಗಳು ಮೂರೂವರೆ ಗಂಟೆಯೊಳಗೆ ಮುಗಿದು ಹೋಗುವ ಈ ಪಂದ್ಯಗಳು ವೀಕ್ಷಕರಿಗೆ ಬಹಳಷ್ಟು ಮನರಂಜನೆ ನೀಡುತ್ತದೆ. ಟಿ20 ಕ್ರಿಕೆಟ್ ನಲ್ಲಿ ಎಂ.ಎಸ್.ಧೋನಿ ಅವರು ಬೆಸ್ಟ್ ಕ್ರಿಕೆಟಿಗ ಎಂದು ಹೆಸರು ಪಡೆದುಕೊಂಡಿದ್ದಾರೆ. ಧೋನಿ ಅವರ ಬ್ಯಾಟ್ ಇಂದ ರನ್ ಗಳು ಸರಾಗವಾಗಿ ಹರಿದು ಬರುತ್ತಿದ್ದವು. ಈಗಿನ ಕ್ರಿಕೆಟರ್ ಗಳಿಗೆ ಅವರು ಇನ್ಸ್ಪಿರೇಷನ್. ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಲು ಕೋಹ್ಲಿ ಅವರು ಕೆಲವು ತಂತ್ರಗಳನ್ನು ಅನುಸರಿಸುತ್ತಿದ್ದರು. ಅವುಗಳಿಂದಲೆ ಧೋನಿ ಅವರು ಅತಿಹೆಚ್ಚು ರನ್ಸ್ ಗಳಿಸುತ್ತಿದ್ದರು. ಟಿ20 ಯಲ್ಲಿ ಧೋನಿ ಅವರ ಯಶೋ ಮಂತ್ರ ಇದೆ.

ಅದನ್ನು ಅನುಸರಿಸಿದರೆ ಆಟಗಾರರು ಯಶಸ್ವಿಯಾಗುವುದು ಖಂಡಿತ. ಇದೀಗ ಹಾರ್ದಿಕ್ ಪಾಂಡ್ಯ ಅವರು ಸಹ ಧೋನಿ ಅವರ ಮಂತ್ರವನ್ನು ಅನುಸರಿಸುತ್ತಿದ್ದು, ಇದರಿಂದಲೇ ಅವರು ಹೆಚ್ಚು ರನ್ಸ್ ಗಳಿಸಲು ಸಾಧ್ಯವಾಗುತ್ತಿದೆ. ಧೋನಿ ತಮ್ಮ ಇನ್ಸ್ಪಿರೇಷನ್ ಎಂದು ಪಾಂಡ್ಯ ಹಲವು ಬಾರಿ ಹೇಳಿಕೊಂಡಿದ್ದಾರೆ. ಧೋನಿ ಅವರ ನೆರಳಿನಲ್ಲಿ ಬೆಳೆದ ಪಾಂಡ್ಯ ಇಂದು ಅವರ ತಂತ್ರವನ್ನು ಅನುಸರಿಸಲಿದ್ದಾರೆ. ಅದೇನೆಂದರೆ, ಹಾರ್ದಿಕ್ ಪಾಂಡ್ಯ ಅವರು ಬಳಸುವ ಬ್ಯಾಟ್ ತುದಿ ನೋಡಿದರೆ ಅದು ರೌಂಡ್ ಶೇಪ್ ನಲ್ಲಿರುತ್ತದೆ, ಮೊದಲಿಗೆ ಪಾಂಡ್ಯ ಅವರು ಬಳಸುತ್ತಿದ್ದ ಬ್ಯಾಟ್ ನ ತುದಿ ಸ್ಕ್ವೇರ್ ಶೇಪ್ ಇರುತ್ತಿತ್ತು, ಈಗ ರೌಂಡ್ ಶೇಪ್ ಇದೆ.

ಇದು ಟಿ20 ಪಂದ್ಯಗಳಲ್ಲಿ ಹೆಚ್ಚು ರನ್ಸ್ ಗಳಿಸಲು ಸಹಾಯವಾಗಲಿ ಎಂದು ವಿಶೇಷವಾಗಿ ತಯಾರಿಸುವ ಬ್ಯಾಟ್ ಆಗಿದೆ. ಧೋನಿ ಅವರು 2019ರ ವಿಶ್ವಕಪ್ ಗಿಂತ ಮುಂಚಿನ ಸಮಯದಿಂದ ಇಂಥದ್ದೇ ಬ್ಯಾಟ್ ಬಳಸುತ್ತಿದ್ದರು. ಧೋನಿ ಅವರೇ ಈ ಬ್ಯಾಟ್ ಬಳಸಲು ಪಾಂಡ್ಯ ಅವರಿಗೆ ಸಲಹೆ ನೀಡಿದ್ದು, ಇಂಥದ್ದೇ ಬ್ಯಾಟ್ ಅನ್ನು ಕೆ.ರಾಹುಲ್ ಮತ್ತು ರಿಷಬ್ ಪಂತ್ ಅವರು ಸಹ ಇದೇ ರೀತಿಯ ಬ್ಯಾಟ್ ಬಳಸುತ್ತಾರೆ. ಬ್ಯಾಟ್ಸ್ಮನ್ ಆಡುವ ಗ್ರೌಂಡ್ ನಲ್ಲಿ ಎಲ್ಲಾ ಕಡೆಗಳಿಗೆ ಚೆಂಡನ್ನು ಭಾರಿಸಲು ಈ ಬ್ಯಾಟ್ ಸಹಾಯ ಮಾಡುತ್ತದೆ. ಬ್ಯಾಟಿಂಗ್ ಸ್ಟನ್ಸ್ ನಲ್ಲಿ ಫ್ಲೆಕ್ಸಿಬಿಲಿಟಿ ಸಿಗುವ ಹಾಗೆ ಮಾಡುವ ವಿಶೇಷತೆ ಹೊಂದಿರುವ ಬ್ಯಾಟ್ ಇದಾಗಿದೆ.

Get real time updates directly on you device, subscribe now.