ಈ ಬಾರಿ ಸೆಮಿ ಫೈನಲ್ ತಲುಪಲಿರುವ ಟಾಪ್ 4 ತಂಡಗಳನ್ನು ಹೆಸರಿಸಿದ ಗಂಗೂಲಿ. ಅಚ್ಚರಿಯಾಗಿ ಆಯ್ಕೆಯಾದ ತಂಡಗಳು ಯಾವುವು ಗೊತ್ತೇ??
2022ರ ಟಿ20 ವಿಶ್ವಕಪ್ ಪಂದ್ಯಗಳು ಆಸ್ಟ್ರೇಲಿಯಾದಲ್ಲಿ ಭರದಿಂದ ನಡೆಯುತ್ತಿದೆ. ಪ್ರಸ್ತುತ ಸೂಪರ್ 12 ಹಂತದ ಪಂದ್ಯಗಳು ನಡೆಯುತ್ತಿದ್ದು, ನಮ್ಮ ಭಾರತ ತಂಡ ಉತ್ತಮ ಪ್ರದರ್ಶನ ನೀಡಿ ಲೀಡಿಂಗ್ ನಲ್ಲಿದ್ದರು ಸಹ, ಬೇರೆ ತಂಡಗಳ ಫಲಿತಾಂಶ ನಿರೀಕ್ಷೆಯ ಮಟ್ಟದಲ್ಲಿಲ್ಲ. ಟಿ20 ಪಂದ್ಯಗಳಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಭಾರತ ತಂಡ ಆಡಿದ ಎರಡು ಪಂದ್ಯಗಳು ಪಾಕಿಸ್ತಾನ್ ವಿರುದ್ಧ ಒಂದು ಪಂದ್ಯ ಹಾಗೂ ನೆದರ್ಲ್ಯಾನ್ಡ್ ವಿರುದ್ಧ ಮತ್ತೊಂದು ಪಂದ್ಯ, ಎರಡರಲ್ಲೂ ಭಾರತ ಗೆದ್ದಿದೆ.
ಇಂದು ಸೌತ್ ಆಫ್ರಿಕಾ ವಿರುದ್ಧ ಮೂರನೇ ಪಂದ್ಯ ನಡೆಯಲಿದೆ. ಇನ್ನು ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದ ಪಾಕಿಸ್ತಾನ್, ಎರಡು ಪಂದ್ಯಗಳನ್ನು ಸೋತು ಹಿನ್ನಡೆ ಅನುಭವಿಸಿದೆ. ಗ್ರೂಪ್ ಎ ನಲ್ಲಿ 3 ತಂಡಗಳು ಆಡಿದ್ದರು ಸಹ ಯಾವ ತಂಡ ಸೆಮಿಫೈನಲ್ ಗೆ ಹೋಗುತ್ತದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ ಎನ್ನುವ ಹಾಗೆ ಆಗಿದೆ. ಒಟ್ಟಿನಲ್ಲಿ ಸೂಪರ್ 12 ಹಂತದ ಪಂದ್ಯಗಳು ನಡೆಯುವಾಗ, ಕ್ರಿಕೆಟ್ ತಜ್ಞರು ಯಾವ ತಂಡ ಸೆಮಿಫೈನಲ್ ಗೆ ತಲುಪಬಹುದು ಎನ್ನುವ ಗೆಸ್ ಮಾಡುತ್ತಿದ್ದು, ನಮ್ಮ ಭಾರತ ತಂಡದ ಮಾಜಿ ಆಟಗಾರ ಸೌರವ್ ಗಂಗೂಲಿ ಅವರು ಕೂಡ ಟಾಪ್ ನಾಲ್ಕು ತಂಡಗಳನ್ನು ಆಯ್ಕೆ ಮಾಡಿದ್ದಾರೆ.
ಗಂಗೂಲಿ ಅವರು ಹೇಳಿರುವ ಹಾಗೆ, ಟಿ20 ಪಂದ್ಯಗಳಲ್ಲಿ ಯಾವ ತಂಡ ಗೆಲ್ಲುತ್ತದೆ ಎಂದು ಹೇಳುವುದು ಕಷ್ಟ. ಯಾವ ತಂಡ ಯಾವ ತಂಡವನ್ನಾದರು ಸೋಲಿಸಬಹುದು. ಟಿ20 ಚುಟುಕು ಪಂದ್ಯಗಳು ನಡೆಯುವುದು ಹೀಗೆ, ಅದರಲ್ಲೂ ಕೆಲವು ಬಲಿಷ್ಠ ಮತ್ತು ಫೇವರೆಟ್ ತಂಡಗಳಿವೆ ಆ ತಂಡಗಳು ಸೆಮಿ ಫೈನಲ್ಸ್ ತಲುಪಬಹುದು ಎಂದು ಹೇಳಿರುವ ಗಂಗೂಲಿ ಅವರು, ಇಂಗ್ಲೆಂಡ್, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಭಾರತ ತಂಡವನ್ನು ಸೆಮಿಫೈನಲ್ಸ್ ತಲುಪಬಹುದಾರ ತಂಡಗಳು ಎಂದು ಆಯ್ಕೆ ಮಾಡಿದ್ದಾರೆ.