ರಜನಿಕಾಂತ್ ಭೇಟಿಯಾದ ರಿಷಬ್ ಶೆಟ್ಟಿ ರವರು ದುಬಾರಿ ಉಡುಗೊರೆ ಕೊಟ್ಟ ತಲೈವಾ. ಏನು ಗೊತ್ತೇ?? ಸಿನಿಮಾ ಜೊತೆ ಉಡುಗೊರೆ ಕೂಡ.

325

Get real time updates directly on you device, subscribe now.

ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿ, ಇಂದಿಗೂ ನಂಬರ್ 1 ಸಿನಿಮಾ ಆಗಿ ಮುಂದುವರೆಯುತ್ತಿದೆ. ದೀಪಾವಳಿ ಹಬ್ಬಕ್ಕೆ ಹೊಸ ಸಿನಿಮಾಗಳು ಬಿಡುಗಡೆ ಆದರೂ ಕೂಡ, ಕಾಂತಾರ ಸಿನಿಮಾದ ಹವಾ ಮುಗಿಯುವುದಿಲ್ಲ, ಇಂದಿಗೂ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ಕಥೆ, ಸಂಭಾಷಣೆ, ಅಭಿನಯ ಎಲ್ಲವನ್ನು ಜನರು ಇಷ್ಟಪಟ್ಟಿದ್ದಾರೆ. ಸಿನಿಮಾ ಹಾಡುಗಳು ಸಹ ಸೂಪರ್ ಹಿಟ್ ಆಗಿವೆ, ಸಿಂಗಾರ ಸಿರಿಯೇ ಮತ್ತು ವಾರಹ ರೂಪಂ ಹಾಡಿನ ಟ್ರಾನ್ಸ್ ಇಂದ ಹೊರಬರಲು ಆಗುತ್ತಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.

ಸಿನಿಮಾ ನೋಡಿದ ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳು ಸಹ ಮೆಚ್ಚಿಕೊಂಡು ಹಾಡಿ ಹೊಗಳುತ್ತಿದ್ದಾರೆ. ಚಿತ್ರರಂಗದ ಸ್ಟಾರ್ ನಟನಟಿಯರು, ತೆಲುಗಿನ ನಟ ಪ್ರಭಾಸ್, ರಾಣಾ ದಗ್ಗುಬಾಟಿ, ತಮಿಳು ನಟ ಧನುಷ್, ಕಾರ್ತಿ ಸೇರಿದಂತೆ ಎಲ್ಲರು ಕಾಂತಾರ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಇವರಷ್ಟೇ ಅಲ್ಲದೆ, ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಿನಿಮಾ ನೋಡಿ ಮೆಚ್ಚಿಕೊಂಡು ಟ್ವೀಟ್ ಮಾಡಿ, ಮರುದಿನ ರಿಷಬ್ ಅವರನ್ನು ಮನೆಗೆ ಕರೆಸಿ ಮಾತನಾಡಿದ್ದಾರೆ, ರಿಷಬ್ ಅವರಿಗೆ ಸನ್ಮಾನ ಸಹ ಮಾಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿ, ಸಂತೋಷ ವ್ಯಕ್ತಪಡಿಸಿದ್ದರು. ರಜನಿಕಾಂತ್ ಅವರು ಸನ್ಮಾನ ಮಾಡುವುದು ಮಾತ್ರವಲ್ಲದೆ ರಿಷಬ್ ಅವರಿಗೆ ಚಿನ್ನದ ಚೈನ್ ಗಿಫ್ಟ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ಫೋಟೋದಲ್ಲಿ ರಿಷಬ್ ಅವರ ಕುತ್ತಿಗೆಯಲ್ಲಿ ಚಿನ್ನದ ಚೈನ್ ಇರಲಿಲ್ಲ, ಬೇರೆ ಫೋಟೋಗಳಲ್ಲಿ ಇದ್ದಿದ್ದನ್ನು ನೋಡಿ ರಿಷಬ್ ಅವರಿಗೆ ಅಭಿಮಾನಿಗಳು ಪ್ರಶ್ನೆ ಮಾಡಿದ್ದು, ರಿಷಬ್ ಅವರು ಥಂಬ್ಸ್ ಅಪ್ ಉತ್ತರ ನೀಡಿದ್ದಾರೆ. ಹಾಗೆಯೇ ರಜನಿಕಾಂತ್ ಅವರು ರಿಷಬ್ ಅವರೊಡನೆ ಯಾವ ಭಾಷೆಯಲ್ಲಿ ಮಾತನಾಡಿದರು, ಕನ್ನಡದಲ್ಲೊ ತಮಿಳಿನಲ್ಲೊ ಎಂದು ಪ್ರಶ್ನೆ ಕೇಳಿದ್ದು, ಕನ್ನಡದಲ್ಲಿ ಎಂದಿದ್ದಾರೆ ರಿಷಬ್. ಕಾಂತಾರ ಸಿನಿಮಾ ತಮ್ಮನ್ನು ರೋಮಾಂಚನ ಗೊಳಿಸಿತು ಎಂದು ರಜನಿಕಾಂತ್ ಅವರು ಹೇಳಿದರು. ಸೂಪರ್ ಸ್ಟಾರ್ ರನ್ನು ಭೇಟಿ ಮಾಡಿದ ಬಳಿಕ ರಿಷಬ್ ಅವರು ಫೋಟೋ ಶೇರ್ ಮಾಡಿ, ರಜನಿ ಅವರ ಡೈಲಾಗ್ ಅನ್ನು ಸೆಪ ಬದಲಾಯಿಸಿ, “ನೀವು ಒಂದು ಸಾರಿ ಹೊಗಳಿದರೆ, ನಮಗೆ ನಮಗೆ ನೂರು ಸಾರಿ ಹೊಗಳಿದಂಗೆ..” ಎಂದು ಬರೆದುಕೊಂಡಿದ್ದಾರೆ.

Get real time updates directly on you device, subscribe now.