ಹೆಣ್ಣು ಮಗು ಜನಿಸುವ ಮುನ್ನ ಯಾವ ಮಗು ಬೇಕು ಎಂದಿದ್ದಕ್ಕೆ ಧ್ರುವ ಸರ್ಜಾ ಏನು ಹೇಳಿದ್ದರು ಗೊತ್ತೆ?? ರಾಯನ್ ಬಗ್ಗೆ ಹೇಳಿದ್ದೇನು ಗೊತ್ತೇ??
ನಟ ಧ್ರುವ ಸರ್ಜಾ ಚಂದನವನದ ಆಕ್ಷನ್ ಪ್ರಿನ್ಸ್ ಎಂದು ಹೆಸರು ಪಡೆದಿದ್ದಾರೆ. ಇತ್ತೀಚೆಗೆ ಧ್ರುವ ಅವರ ಕೆಡಿ ಸಿನಿಮಾ ಟೈಟಲ್ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಜೋಗಿ ಪ್ರೇಮ್ ಅವರು ನಿರ್ದೇಶನ ಮಾಡುತ್ತಿದ್ದು, ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಧ್ರುವ ಅವರು ಕೆರಿಯರ್ ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಮಾರ್ಟಿನ್ ಸಿನಿಮಾದ ಕೆಲಸಗಳು ಸಹ ಭರದಿಂದ ನಡೆಯುತ್ತಿದೆ. ಇತ್ತೀಚೆಗೆ ಧ್ರುವ ಅವರು ಹೆಣ್ಣುಮಗುವಿಗೆ ತಂದೆಯಾದರು. ಧ್ರುವ ಅವರು ಮಗು ಹುಟ್ಟುವ ಮುಂಚೆ ತಮಗೆ ಯಾವ ಮಗು ಬೇಕು ಎಂದು ಹೇಳಿದರು? ಅಣ್ಣನ ಮಗನ ಬಗ್ಗೆ ಏನು ಹೇಳಿದರು ಗೊತ್ತಾ?
ಧ್ರುವ ಅವರು ಪ್ರೇರಣಾ ಶಂಕರ್ ಅವರೊಡನೆ 2019ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಚಿಕ್ಕ ವಯಸ್ಸಿನಿಂದಲು ಪ್ರೀತಿ ಮಾಡುತ್ತಿದ್ದರು. ಎರಡು ಕುಟುಂಬದವರನ್ನು ಒಪ್ಪಿಸಿ ಅದ್ಧೂರಿಯಾಗಿ ಮದುವೆಯಾದರು. 2020ರಲ್ಲಿ ಅಣ್ಣ ಚಿರಂಜೀವಿ ಸರ್ಜಾ ಅವರು ಇಹಲೋಕ ತ್ಯಜಿಸಿದಾಗ, ಧ್ರುವ ಅವರು ತುಂಬಾ ನೋವಿನಲ್ಲಿದ್ದರು, ಆ ಸಮಯದಲ್ಲಿ ಅವರ ಕುಟುಂಬ ಬಹಳ ಸಂಕಷ್ಟವನ್ನು ಎದುರಿಸಿತು. ಬಳಿಕ ರಾಯನ್ ಹುಟ್ಟಿದಾಗ, ಅಣ್ಣನ ಮಗನನ್ನೇ ತಮ್ಮ ಮಗ ಎನ್ನುವ ಹಾಗೆ, ಅಣ್ಣನೆ ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಧ್ರುವ ಸರ್ಜಾ ಅವರು ರಾಯನ್ ರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವು ತಿಂಗಳುಗಳ ಹಿಂದೆಯಷ್ಟೇ ತಾವು ಮತ್ತು ಪ್ರೇರಣಾ ಅವರು ಮಗುವಿನ ನಿರೀಕ್ಷೆಯಲ್ಲಿರುವ ಸಂತೋಷದ ವಿಷಯ ಹಂಚಿಕೊಂಡಿದ್ದರು ಧ್ರುವ.
ಪ್ರೇರಣಾ ಅವರೊಡನೆ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿ ಅದನ್ನು ಶ್ವರ್ ಮಾಡುವ ಮೂಲಕ ಗುಡ್ ನ್ಯೂಸ್ ಹಂಚಿಕೊಂಡಿದ್ದರು. ವರಮಹಾಲಕ್ಷ್ಮಿ ಹಬ್ಬದ ದಿನವೇ ಪ್ರೇರಣಾ ಶಂಕರ್ ಅವರು ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದರು. ಮಗು ಹುಟ್ಟುವ ಮೊದಲು ಮಾತನಾಡಿದ್ದ ಧ್ರುವ, ತಮಗೆ ಹೆಣ್ಣುಮಗು ಬೇಕೆಂಬ ಆಸೆ ಎಂದು ಹೇಳಿಕೊಂಡಿದ್ದರು ಮನೆಗೊಬ್ಬ ಲಕ್ಷ್ಮಿ ಬೇಕು ಎಂದಿದ್ದ ಧ್ರುವ, ಮನೆಗೆ ಮಗನಾಗಿ ಅಣ್ಣನ ಮಗ ಇದ್ದಾನೆ, ಅಣ್ಣನ ಮಗನೇ ನನ್ನ ಮಗ ಎಂದು ರಾಯನ್ ಬಗ್ಗೆ ಹೇಳಿದ್ದರು. ಧ್ರುವ ಅವರಿಗೆ ಇಷ್ಟವಿದ್ದ ಹಾಗೆ ಹೆಣ್ಣು ಮಗುವೆ ಜನಿಸಿದ್ದು, ಮಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಧ್ರುವ.