ಶುರುವಾಯಿತು ಅಸಲಿ ಲೆಕ್ಕಾಚಾರ. ಗೆಲುವಿನ ಗುಂಗಿನಿಂದ ಹೊರ ಬಂದು, ಭಾರತದ ಇತರ ಆಟಗಾರರ ಪ್ರದರ್ಶನದ ಕುರಿತು ಚರ್ಚೆ. ಏನಾಗಿದೆ ಗೊತ್ತೇ??
ಟಿ20 ವಿಶ್ವಕಪ್ ನ ಮೊದಲ ಪಂದ್ಯವನ್ನು ಗೆದ್ದ ಸಂತೋಷದಲ್ಲಿದೆ ಭಾರತ ತಂಡ. ಭಾನುವಾರದ ಪಂದ್ಯದಲ್ಲಿ ಏಕಾಂಗಿಯಾಗಿ ಹೋರಾಟ ಮಾಡಿ, ಪಂದ್ಯ ಗೆದ್ದವರು ವಿರಾಟ್ ಕೋಹ್ಲಿ. 53 ಬಾಲ್ ಗಳಲ್ಲಿ 82 ರನ್ಸ್ ಭಾರಿಸಿ, ಅಜೇಯರಾಗಿ ಉಳಿದರು. ಇದು ಕೋಹ್ಲಿ ಅವರ ಬೆಸ್ಟ್ ಇನ್ನಿಂಗ್ಸ್ ಆಗಿತ್ತು ಎಂದೇ ಎಲ್ಲರೂ ಹೇಳುತ್ತಿದ್ದಾರೆ. ಆದರೆ 1983 ರಲ್ಲಿ ನಮ್ಮ ಭಾರತ ತಂಡ ವರ್ಲ್ಡ್ ಕಪ್ ಗೆದ್ದಾಗ, ತಂಡದಲ್ಲಿದ್ದ ಹಿರಿಯ ಆಟಗಾರ ಮದನ್ ಲಾಲ್ ಅವರು ಭಾರತ ತಂಡಕ್ಕೆ ಹೊಸ ಸಲಹೆಗಳನ್ನು ನೀಡಿದ್ದಾರೆ. ಮದನ್ ಲಾಲ್ ಅವರ ಹೊಸ ಲೆಕ್ಕಾಚಾರ ಏನು ಎಂದು ತಿಳಿಸುತ್ತೇವೆ ನೋಡಿ.
ಭಾರತ ತಂಡ ಎಲ್ಲಾ ಪಂದ್ಯಗಳಲ್ಲು ವಿರಾಟ್ ಕೋಹ್ಲಿ ಅವರ ಮೇಲೆ ಅವಲಂಬಿತವಾಗಿರಲು ಸಾಧ್ಯವಿಲ್ಲ. ಹಾಗಾಗಿ ಬೇರೆ ಆಟಗಾರರು ಕೂಡ ಚೆನ್ನಾಗಿ ಆಡಬೇಕು ಎಂದಿದ್ದಾರೆ ಮದನ್ ಲಾಲ್. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿಲ್ಲ ಅವರಿಬ್ಬರು ಕೂಡ ಮುಂದಿನ ಪಂದ್ಯಗಳಲ್ಲಿ ಚೆನ್ನಾಗಿ ಆಡಬೇಕು ಎಂದಿದ್ದಾರೆ. ಇದು ಟಿ20 ಪಂದ್ಯ ಆಗಿರುವುದರಿಂದ ಯಾವಾಗ ಏನಾಗುತ್ತದೆ ಎಂದು ಊಹಿಸಲು ಆಗುವುದಿಲ್ಲ, ಈ ಪಂದ್ಯದಲ್ಲಿ ಗೆದ್ದ ತಂಡ ಮುಂದಿನ ಪಂದ್ಯದಲ್ಲಿ ಸೋಲಬಹುದು,
ಮುಂದಿನ ಪಂದ್ಯಗಳಲ್ಲಿ ಸ್ಟ್ರಾಂಗ್ ಆಗಿರುವ ನೆದರ್ಲ್ಯಾನ್ಡ್ ತಂಡದ ವಿರುದ್ಧವಾಗಿ ಕೂಡ ಆಡಬೇಕು, ಹಾಗಾಗಿ ಎಲ್ಲಾ ಆಟಗಾರರು ಉತ್ತಮವಾಗಿ ಆಡಬೇಕು ಎಂದು ಮದನ್ ಲಾಲ್ ಸಲಹೇ ನೀಡಿದ್ದಾರೆ. ಜೊತೆಗೆ, ರಿಷಬ್ ಪಂತ್ ಅವರಿಗೆ ಅವಕಾಶ ಕೊಡಬೇಕು ಎಂದು ಸಹ ಹೇಳಿದ್ದಾರೆ. ರಿಷಬ್ ಪಂತ್ ಅವರು ಮ್ಯಾಚ್ ವಿನ್ನರ್, 5 ಮ್ಯಾಚ್ ಗಳನ್ನು ಆಡುವ ಅವಕಾಶ ಕೊಟ್ಟರೆ, ಅದರಲ್ಲಿ ಎರಡು ಮ್ಯಾಚ್ ಗಳನ್ನಾದರು ಗೆಲ್ಲಿಸಿ ಕೊಡುತ್ತಾರೆ ಎಂದು ಮದನ್ ಲಾಲ್ ಅವರು ಅಭಿಪ್ರಾಯ ಪಟ್ಟಿದ್ದು, ರಿಷಬ್ ಪಂತ್ ಅವರಿಗೆ ಅವಕಾಶ ಕೊಡಿ ಎಂದಿದ್ದಾರೆ ಮದನ್ ಲಾಲ್.