ಪುನೀತ್ ರವರ ಹಾಡಿರುವ ಕೊನೆಯ ಹಾಡು ಯಾವುದು ಗೊತ್ತೇ?? ಹಾಡಿನ ವಿಡಿಯೋ ಹೇಗಿದೆ ಗೊತ್ತೇ??

25

Get real time updates directly on you device, subscribe now.

ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ತಂದೆಯ ನೆರಳಿನಲ್ಲಿ ಬದುಕದೆ, ಪವರ್ ಸ್ಟಾರ್ ಆಗಿ ತಮ್ಮ ಅಭಿನಯದ ಮೂಲಕ ಕರ್ನಾಟಕದ ಜನರ ಮನಸ್ಸಿನಲ್ಲಿ ಸ್ಥಾನ ಪಡೆದವರು ಪುನೀತ್ ರಾಜ್ ಕುಮಾರ್. ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಅಪ್ಪು ಎಂದೇ ಕರೆಯುತ್ತಾರೆ. ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅಪ್ಪು ಅವರು, ನಟನೆ ಮಾತ್ರವಲ್ಲ, ಗಾಯನದಿಂದಲು ಹೆಸರು ಮಾಡಿದ್ದಾರೆ. ಬಾಲ್ಯದಿಂದಲೂ ತಾವು ಅಭಿನಯಿಸಿದ ಸಿನಿಮಾದ ಹಾಡುಗಳಿಗೆ ತಾವೇ ಹಾಡುವುದು ಅಪ್ಪು ಅವರ ಅಭ್ಯಾಸ.

ನಾಯಕನಾದ ಮೇಲು ಕೂಡ ಅಪ್ಪು ಅವರು ತಮ್ಮ ಹಲವು ಸಿನಿಮಾಗಳಲ್ಲಿ ಒಂದು ಹಾಡನ್ನು ಹಾಡುತ್ತಿದ್ದರು. ತಾಲಿಬಾನ್ ಅಲ್ಲ ಅಲ್ಲ, ಮಜಾ ಮಾಡು, ಸಿಂಪಲ್ಲಾಗ್ ಹೇಳ್ತಿನ್ ಕೇಳೇ, ಜೊತೆ ಜೊತೆಯಲಿ, ಅಭಿಮಾನಿಗಳೆ ನಮ್ಮನೆ ದೇವ್ರು.. ಹೀಗೆ ತಮ್ಮ ಸಿನಿಮಾಗೆ ಮಾತ್ರವಲ್ಲದೆ, ಕನ್ನಡದ ಬೇರೆ ಬೇರೆ ಸಿನಿಮಾಗಳಿಗೂ ಅಪ್ಪು ಅವರು ಹಾಡು ಹಾಡಿದ್ದಾರೆ, ಅಪ್ಪು ಅವರ ವಾಯ್ಸ್ ಅಂದ್ರೆ ಒಂದು ಪಟ್ಟು ಎನರ್ಜಿ, ಜೋಶ್ ಜಾಸ್ತಿಯೇ ಇರುತ್ತಿತ್ತು. ಅಂತಹ ಅಪ್ಪು ಅವರು ಶಿವಣ್ಣ ಅವರ ಮೈಲಾರಿ ಸಿನಿಮಾದ ಮೈಲಾಪುರ ಮೈಲಾರಿ ಹಾಡು, ಅಧ್ಯಕ್ಷ ಸಿನಿಮಾದ ಟೈಟಲ್ ಟ್ರ್ಯಾಕ್ ಸೇರಿದಂತೆ ಹಲವು ನಾಯಕರ ಸಿನಿಮಾಗಳಿಗೆ ಹಾಡುಗಳನ್ನು ಹಾಡಿದ್ದಾರೆ. ಅಪ್ಪು ಅವರು ಗಾಯಕನಾಗಿ ಹಾಡಿದ ಕೊನೆಯ ಹಾಡು ಯಾವುದು ಗೊತ್ತಾ?

ಅಪ್ಪು ಅವರು ಕನ್ನಡದಲ್ಲಿ ಯುವಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದವರು, ಹೊಸಬರಿಗೆ ಅವಕಾಶ ಕೊಡಲು ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಸಹ ಶುರು ಮಾಡಿದರು. ಹಾಗೆಯೇ ಯುವ ಪ್ರತಿಭೆಗಳು ಸೇರಿ ತಯಾರಿಸಿರುವ ಓ ಎನ್ನುವ ಸಿನಿಮಾಗೆ ಅಪ್ಪು ಅವರು ಒಂದು ಹಾಡನ್ನು ಹಾಡಿದ್ದಾರೆ. ಜೀಕನ್ನಡ ವಾಹಿನಿಯ ಪಾರು ಧಾರವಾಹಿಯಲ್ಲಿ ಪ್ರೀತು ಪಾತ್ರದಲ್ಲಿ ನಟಿಸುತ್ತಿರುವ ನಟ ಈ ಸಿನಿಮಾದ ಹೀರೋ ಆಗಿದ್ದು, ಈ ಸಿನಿಮಾಗೆ ಹಾಡಿರುವ ಹಾಡೇ ಅಪ್ಪು ಅವರು ಹಾಡಿರುವ ಕೊನೆಯ ಹಾಡಾಗಿದೆ. ಈ ಹಾಡಿನ ವಿಡಿಯೋ ಈಗ ವೈರಲ್ ಆಗಿದ್ದು, ನೀವು ಕೂಡ ಒಮ್ಮೆ ಈ ವಿಡಿಯೋ ನೋಡಿ..

Get real time updates directly on you device, subscribe now.