ಮಾಡ್ರನ್ ಬೆಡಗಿ ಸೀರಿಯಲ್ಲಿ ಮಿಂಚಲು ಆರಂಭ; ಇದ್ದಕ್ಕಿದ್ದ ಹಾಗೆ ಸೀರೆ ಉಟ್ಟಿದ್ದು ಯಾಕೆ ಗೊತ್ತೇ?? ಶಾರುಖ್ ಮಗಳಿಗೆ ಸೀರೆಉಡಿಸಿದ್ದು ಯಾರು ಗೊತ್ತೇ??

16

Get real time updates directly on you device, subscribe now.

ಇಡೀ ಪ್ರಪಂಚದಲ್ಲಿ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು ಶಾರುಖ್ ಖಾನ್. ಬಾಲಿವುಡ್ ಬಾದ್ ಶಾ ಎಂದೇ ಇವರನ್ನು ಕರೆಯುತ್ತಾರೆ. ಶಾರುಖ್ ಖಾನ್ ಅವರು ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಸಹ ಒಬ್ಬರು. ಇವರ ಸಿನಿಮಾಗಳೆಂದರೆ ಸಿನಿಪ್ರಿಯರು ಮಿಸ್ ಮಾಡದೆ ನೋಡುತ್ತಾರೆ. 3 ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶಾರುಖ್ ಖಾನ್ ಅವರು ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಾರುಖ್ ಖಾನ್ ಅವರು ಹಲವಾರು ಜಾಹೀರಾತುಗಳಲ್ಲಿ ಸಹ ನಟಿಸಿದ್ದಾರೆ. ಹಲವಾರು ಬ್ರ್ಯಾಂಡ್ ಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.

ಇವರ ವಯಸ್ಸು 56, ಆದರೆ ಈಗಲೂ ಫಿಟ್ ಅಂಡ್ ಫೈನ್ ಆಗಿದ್ದಾರೆ ಬಾದ್ ಶಾ. ಶಾರುಖ್ ಖಾನ್ ಅವರು ಗೌರಿ ಖಾನ್ ಅವರನ್ನು ಪ್ರೀತಿಸಿ ಮದುವೆಯಾದರು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಮಗ ಆರ್ಯನ್ ಖಾನ್, ಮಗಳು ಸುಹಾನ ಮತ್ತು ಚಿಕ್ಕ ಮಗ ಅಬ್ರಮ್. ಶಾರುಖ್ ಖಾನ್ ಅವರ ಮಗಳು ಸುಹಾನ ಅವರು ಎಷ್ಟು ಸುಂದರವಾಗಿದ್ದಾರೆ ಎಂದು ನಾವೆಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಸುಹಾನ ಅವರು ಅನೇಕ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಸುಹಾನ ಅವರು ದೀಪಾವಳಿ ಹಬ್ಬದ ವಿಶೇಷವಾಗಿ, ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ.

ಗೋಲ್ಡ್ ಬಣ್ಣದ ಟ್ರಾನ್ಸ್ಪರೆಂಟ್ ಸೀರೆಯಲ್ಲಿ ಮಿಂಚಿರುವ ಸುಹಾನ ಅವರ ಫೋಟೋಗೆ, ತಂದೆ ಶಾರುಖ್ ಖಾನ್ ಅವರು ಕಮೆಂಟ್ ಮಾಡಿದ್ದಾರೆ, ನೀನೇ ಸೀರೆ ಉಟ್ಟುಕೊಂಡೆಯಾ ಅಥವಾ ಬೇರೆ ಯಾರಾದ್ರೂ ಉಡಿಸಿದ್ರಾ ಎಂದು ಕಮೆಂಟ್ ಮಾಡಿದ್ದಾರೆ, ಅದಕ್ಕೆ ತಮಾಷೆಯಾಗಿ ಉತ್ತರ ಕೊಟ್ಟಿರುವ ಸುಹಾನ, ಓಹ್ ಇಲ್ಲಾ.. ಅಮ್ಮ ಸೀರೆ ಉಡಿಸಿದರು ಎಂದು ರಿಪ್ಲೈ ಮಾಡಿದ್ದಾರೆ ಸುಹಾನಾ.. ಸುಹಾನ ಅವರಿಗೆ ಸೀರೆ ಉಡಿಸಿ ಅಲಂಕಾರ ಮಾಡಿರುವುದು ಮತ್ಯಾರು ಅಲ್ಲ ಅವರ ತಾಯಿ ಗೌರಿ ಖಾನ್. ಈ ಫ್ಯಾನ್ಸಿ ಸೀರೆಯಲ್ಲಿ ಅಮ್ಮನ ಹಾಗೆ ಸುಂದರವಾಗಿ ಕಾಣಿಸುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ಸ್ ಬರೆಯುತ್ತಿದ್ದಾರೆ. ಶಾರ್ಟ್ ಡ್ರೆಸ್ ಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಸುಹಾನ, ದೀಪಾವಳಿ ಹಬ್ಬಕ್ಕೆ ಸೀರೆ ಧರಿಸಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

Get real time updates directly on you device, subscribe now.