ಪಾಕ್ ತಂಡಕ್ಕೆ ಅಕ್ಷರಸಹ ನರಕ ತೋರಿಸಿದ ಅರ್ಶದೀಪ್ ಬೌಲಿಂಗ್ ಮಾಡುವ ಅವರ ಅಮ್ಮ ಏನು ಮಾಡುತ್ತಿದ್ದರಂತೆ ಗೊತ್ತೇ??

28

Get real time updates directly on you device, subscribe now.

ಅರ್ಷದೀಪ್ ಸಿಂಗ್ ಈಗ ಭಾರತ ತಂಡದ ಉತ್ತಮ ಬೌಲರ್ ಗಳಲ್ಲಿ ಒಬ್ಬರಾಗಿದ್ದಾರೆ. ಮೊನ್ನೆ ನಡೆದ ಪಂದ್ಯದ ಮೂಲಕ ಅರ್ಷದೀಪ್ ಸಿಂಗ್ ಅವರು ಮೊದಲ ಬಾರಿಗೆ ವಿಶ್ವಕಪ್ ನಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದರು. ಪಾಕಿಸ್ತಾನ್ ವಿರುದ್ಧವೇ ಮೊದಲ ಪಂದ್ಯ ಆಡಿದ ಅರ್ಷದೀಪ್ ಸಿಂಗ್ ಭರ್ಜರಿ ಪ್ರದರ್ಶನ ನೀಡಿದರು, 32 ರನ್ ಬಿಟ್ಟುಕೊಟ್ಟು ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಅಂತಹ ಪ್ರಮುಖ ಆಟಗಾರರ ಮೂರು ವಿಕೆಟ್ಸ್ ಪಡೆದರು. ಭಾರತ ತಂಡ ಗೆಲ್ಲುವುದಕ್ಕೆ ಇವರು ಸಹ ಪ್ರಮುಖ ಕಾರಣ ಆಗಿದ್ದರು. ಅರ್ಷದೀಪ್ ಸಿಂಗ್ ಅವರು ಭಾರತಕ್ಕಾಗಿ ಬೌಲಿಂಗ್ ಮಾಡುವಾಗ ತಾಯಿ ಏನು ಮಾಡುತ್ತಾರಂತೆ ಗೊತ್ತಾ?

ಕೆಲವು ತಿಂಗಳುಗಳ ಹಿಂದೆ ಏಷ್ಯಾಕಪ್ ನಲ್ಲಿ ಅರ್ಷದೀಪ್ ಸಿಂಗ್ ಅವರು ಆಸಿಫ್ ಅಲಿ ಅವರ ಕ್ಯಾಚ್ ಬಿಟ್ಟಾಗಿನಿಂದ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದರು. ಇದರಿಂದ ಬಹಳ ಬೇಸರ ಕೂಡ ಆಗಿತ್ತು. ಆದರೆ ಈಗ ಟಿ20 ವಿಶ್ವಕಪ್ ಮೂಲಕ ಮತ್ತೆ ಸಿಡಿದು ಬಂದಿದ್ದಾರೆ, ಯಾವುದೇ ಸಮಯದಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿರುವ ಅರ್ಷದೀಪ್ ಅವರು ತಂಡಕ್ಕಾಗಿ ಆಡುವಾಗ ಅವರ ತಾಯಿ ಗುರುದ್ವಾರದಲ್ಲಿ ಇರುತ್ತಾರಂತೆ. 23 ವರ್ಷದ ಮಗನನ್ನು ಕಂಡರೆ ತಾಯಿ ಬಲ್ಜಿತ್ ಕೌರ್ ಅವರಿಗೆ ಬಹಳ ಪ್ರೀತಿ. ಭಾರತ ತಂಡಕ್ಕಾಗಿ ಮಗ ಬೌಲಿಂಗ್ ಮಾಡುವುದನ್ನು ಅಪರೂಪಕ್ಕೊಮ್ಮೆ ನೋಡುತ್ತೇವೆ ಎಂದಿದ್ದಾರೆ ಬಲ್ಜಿತ್ ಕೌರ್..

ಪಂದ್ಯಗಳು ನಡೆಯುವಾಗ, ಗುರುದ್ವಾರದಲ್ಲಿ ಕುಳಿತು, ವಿಶೇಷಾವಾಗಿ ಪೂಜೆ ಸಲ್ಲಿಸುತ್ತಾ, ಗುರು ನಾನಕ್ ಅವರಿಗೆ ಪ್ರಾರ್ಥನೆ ಮಾಡುತ್ತಾ ಇರುತ್ತಾರಂತೆ, ಇದರ ಬಗ್ಗೆ ಮಾತನಾಡಿ, “ಅರ್ಷದೀಪ್ ಭಾರತ ತಂಡಕ್ಕೆ ಆಡಲು ಆರಂಭ ಮಾಡಿದಾಗಿನಿಂದಲು ನಾನು ಹೀಗೆ ಮಾಡುತ್ತಿದ್ದೇನೆ.ಈ ಆಟದ ಬಗ್ಗೆ ನನಗೆ ಅಷ್ಟಾಗಿ, ನನ್ನ ಮಗ ಕಠಿಣವಾಗಿ ಬೌಲಿಂಗ್ ಮಾಡುತ್ತಾನೆ. ಬ್ಯಾಟ್ಸ್ಮನ್ ಗಳಿಂದ ನನ್ನ ಮಗ ದಂಡನೆಗೆ ಒಳಗಾಗುವುದನ್ನು ನೋಡಲು ನನ್ನಿಂದ ಆಗುವುದಿಲ್ಲ..”ಎಂದು ಬಲ್ಜಿತ್ ಕೌರ್ ಅವರು ಹೇಳಿದ್ದಾರೆ. ಮಗ ಎಷ್ಟೇ ಎತ್ತರಕ್ಕೆ ಏರಿದರು ತಾಯಿಯ ಹೃದಯ ಹೇಗಿರುತ್ತದೆ ಎಂದು ಈ ಮಾತಿನಲ್ಲಿ ಗೊತ್ತಾಗುತ್ತದೆ.

Get real time updates directly on you device, subscribe now.