ದುಬೈ ನಲ್ಲಿ ಸಿಕ್ಕಿದ್ದ ಅನುಶ್ರೀ ಊಟ ಮಾಡಿರಲಿಲ್ಲ ಎಂದು ತಿಳಿದಾದ ಅಪ್ಪು ಏನು ಮಾಡಿದ್ದರಂತೆ ಗೊತ್ತೇ?? ಅನುಶ್ರೀ ಬಿಚ್ಚಿಟ್ಟ ಘಟನೆ ಏನು ಗೊತ್ತೇ??

55

Get real time updates directly on you device, subscribe now.

ಪುನೀತ್ ರಾಜ್ ಕುಮಾರ್ ಅವರು ಸರಳತೆಗೆ ಹೆಚ್ಚು ಪ್ರಸಿದ್ಧಿ ಹೊಂದಿರುವವರು. ಅವರ ಬಗ್ಗೆ ಎಷ್ಟು ಹೇಳುತ್ತಾ ಹೋದರು ಕಡಿಮೆಯೇ. ಅಪ್ಪು ಅವರಲ್ಲಿ ಇರುವ ಒಳ್ಳೆಯತನ ಎಲ್ಲರಿಗೂ ಬರುವುದಿಲ್ಲ. ಅದನ್ನು ತಿಳಿಸುವ ಹಲವು ಘಟನೆಗಳ ಬಗ್ಗೆ ನಾವು ಹಲವರು ಹೇಳುವುದನ್ನು ಕೇಳಿದ್ದೇವೆ. ಖ್ಯಾತ ನಿರೂಪಕಿ ಅನುಶ್ರೀ ಅವರು ಅಪ್ಪು ಅವರ ದೊಡ್ಡ ಅಭಿಮಾನಿ ಎಂದು ನಮಗೆಲ್ಲ ಗೊತ್ತಿದೆ, ಹಲವು ವೇದಿಕೆಗಳಲ್ಲಿ ಅನುಶ್ರೀ ಅವರು ಇದನ್ನು ಹೇಳಿಕೊಂಡಿದ್ದಾರೆ. ಅವರ ಯೂಟ್ಯೂಬ್ ಚಾನೆಲ್ ಲೋಗೋದಲ್ಲಿ ಸಹ ಅಪ್ಪು ಅವರ ಫೋಟೋ ಹಾಕಿದ್ದಾರೆ. ಜೀಕನ್ನಡ ವಾಹಿನಿಯ ಜೀಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅನುಶ್ರೀ ಅವರಿಗೆ ಫೇವರೇಟ್ ಆಂಕರ್ ಅವಾರ್ಡ್ ಸಿಕ್ಕಿತು, ಅದನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅನುಶ್ರೀ ಅವರಿಗೆ ನೀಡಿದರು.

ಈ ಸಮಯದಲ್ಲಿ ಅನುಶ್ರೀ ಅವರು ಅಶ್ವಿನಿ ಅವರಿಂದ ಅವಾರ್ಡ್ ಸ್ವೀಕರಿಸಿದ್ದಕ್ಕೆ ಬಹಳ ಸಂತೋಷ ಪಟ್ಟಿದ್ದಾರೆ. ಹಾಗೂ ಈ ಅವಾರ್ಡ್ ಅಭಿಮಾನಿಗಳು ಆಯ್ಕೆ ಮಾಡಿರುವ ಅವಾರ್ಡ್ ಎಂದು ಭಾವುಕರಾದ ಅನುಶ್ರೀ ಅವರು, ತಮ್ಮ ಅವಾರ್ಡ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಿದರು. ಆ ಸಮಯದಲ್ಲಿ ಅಪ್ಪು ಅವರ ಬಗ್ಗೆ ದುಬೈ ನಲ್ಲಿ ಒಂದು ಸ್ವಾರಸ್ಯಕರ ಘಟನೆಯನ್ನು ನಟ ನೆನಪಿರಲಿ ಪ್ರೇಮ್ ಹಂಚಿಕೊಂಡಿದ್ದಾರೆ. ಒಂದು ಅವಾರ್ಡ್ ಶೋಗೆ ಅನುಶ್ರೀ ಅವರು ನಿರೂಪಕಿಯಾಗಿ ಹೋಗಿದ್ದರು, ಅಲ್ಲಿ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಕಲಾವಿದರು ನೆರೆದಿದ್ದರು. “ಅವಾರ್ಡ್ ಸಮಾರಂಭದಲ್ಲಿ ಎಲ್ಲರೂ ಅವಾರ್ಡ್ ಪಡೆದು ತಮ್ಮ ಪಾಡಿಗೆ ತಾವು ಊಟ ಮಾಡಲು ಹೋಗುತ್ತಿದ್ದರು. ಅವಾರ್ಡ್ ಕಾರ್ಯಕ್ರಮ ಮುಗಿದಿದ್ದರು ಅನುಶ್ರೀ ಅವರು ಊಟ ಮಾಡಿರಲಿಲ್ಲ. ಅಪ್ಪು ಅವರು ಅನುಶ್ರೀ ಅವರನ್ನು ನೋಡಿ, ಮಾತನಾಡಿಸಿ, ಊಟ ಆಯ್ತಾ ಎಂದು ಕೇಳಿದರು.

ಅನುಶ್ರೀ ಆಗಿಲ್ಲ ಎಂದು ಹೇಳಿದ್ದಕ್ಕೆ, ಅನುಶ್ರೀ ಅವರನ್ನು ಜೊತೆಯಲ್ಲೇ ಕರೆದುಕೊಂಡು ಹೋಗಿ, ತಾವು ಕೂತು ಊಟ ಮಾಡಿದರು. ಅಂಥ ಗುಣ ಎಲ್ಲರಿಗೂ ಬರುವುದಿಲ್ಲ. ಎಲ್ಲರೂ ಅವರವರ ಪಾಡಿಗೆ ಬ್ಯುಸಿ ಆಗಿದ್ದಾಗ, ಅಪ್ಪು ಅವರು ನಮ್ಮೂರಿನ ಹುಡುಗಿ ಒಬ್ಬಳೇ ಇದ್ದಾಳೆ ಎಂದು ನೋಡಿ, ಊಟ ಆಯ್ತಾ ಎಂದು ಕೇಳಿ ಇದೆಲ್ಲವನ್ನು ಮಾಡಿದರು..” ಎಂದು ದಿನದ ಘಟನೆಯ ನೆನೆಪು ಮಾಡಿಕೊಂಡಿದ್ದಾರೆ ನಟ ಪ್ರೇಮ್. ಈ ಘಟನೆ ಅನುಶ್ರೀ ಅವರಿಗೂ ಬಹಳ ಸ್ಪೆಷಲ್ ಆದದ್ದು. ಅಪ್ಪು ಅವರು ಮತ್ತು ಅಶ್ವಿನಿ ಅವರು ಇಬ್ಬರು ಸಹ ಅನುಶ್ರೀ ಅವರೊಡನೆ ಬಹಳ ಆಪ್ತರಾಗಿದ್ದಾರೆ. ಅಪ್ಪು ಅವರ ಕುರಿತಾದ ಬಹುತೇಕ ಎಲ್ಲಾ ಕಾರ್ಯಕ್ರಮಗಳನ್ನು ಅನುಶ್ರೀ ಅವರೇ ಹೋಸ್ಟ್ ಮಾಡುತ್ತಾರೆ.

Get real time updates directly on you device, subscribe now.