ನಿಮ್ಮ ಮನೆಯ ಸಿಲಿಂಡರ್ ಒಂದು ವರ್ಷ ಬಂದರೆ, ನಿವೇದಿತಾ ಗೌಡ ಮನೆಯಲ್ಲಿ 1.5 ವರ್ಷ ಬರುತ್ತದೆ. ಅದು ಹೇಗೆ ಅಂತೇ ಗೊತ್ತೇ?? ನೀವು ಟ್ರೈ ಮಾಡ್ತೀರಾ??
ನಿವೇದಿತಾ ಗೌಡ ಅವರು ಫೇಮಸ್ ಆಗಿದ್ದು ಬಿಗ್ ಬಾಸ್ ಮೂಲಕ, ಬಿಬಿಕೆ5ಕ್ಕೆ ಟಿಕ್ ಟಾಕ್ ವಿಡಿಯೋಗಳ ಮೂಲಕ ಫೇಮಸ್ ಆಗಿದ್ದ ನಿವೇದಿತಾ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಫೇಮಸ್ ಆಗಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ನಂತರ ಕನ್ನಡ ರಾಪರ್ ಚಂದನ್ ಶೆಟ್ಟಿ ಅವರನ್ನು ಮದುವೆಯಾಗಿ, ಕಲರ್ಸ್ ಕನ್ನಡ ವಾಹಿನಿಯ ರಾಜಾ ರಾಣಿ ಶೋನಲ್ಲಿ ಕಾಣಿಸಿಕೊಂಡರು. ಬಳಿಕ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಕೂಡ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಉತ್ತಮ ಮನರಂಜನೆ ನೀಡಿದರು ನಿವೇದಿತಾ.
ಇನ್ನು ಈಗಷ್ಟೇ ಶುರುವಾಗಿರುವ ನನ್ನಮ್ಮ ಸೂಪರ್ ಸ್ಟಾರ್ ಸೀಸನ್2 ದೀಪಾವಳಿ ಹಬ್ಬದ ಸಂಭ್ರಮದ ಎಪಿಸೋಡ್ ಗೆ ನಿವೇದಿತಾ ಗೌಡ ಅವರು ಎಂಟ್ರಿ ಕೊಟ್ಟಿದ್ದು, ಈ ಎಪಿಸೋಡ್ ನಲ್ಲಿ ಸೃಜನ್ ಅವರು ನಿವೇದಿತಾ ಗೌಡ ಅವರ ಅಡುಗೆ ಮನೆ ಸೀಕ್ರೆಟ್ ಅನ್ನು ರಿವೀಲ್ ಮಾಡಿದ್ದಾರೆ, ನಿವೇದಿತಾ ಗೌಡ ಅವರು ಹೊಸ ಮನೆಗೆ ಶಿಫ್ಟ್ ಆಗಿ 1.5ವರ್ಷ ಕಳೆಯಿತು, ಮೊನ್ನೆಯಷ್ಟೇ ಮೊದಲ ಸಿಲಿಂಡರ್ ಖಾಲಿ ಆಗಿದೆ ಎಂದಿದ್ದಾರೆ ಸೃಜನ್ ಲೋಕೇಶ್. ಅದಕ್ಕೆ ಉತ್ತರ ಕೊಟ್ಟ ನಿವೇದಿತಾ ಗೌಡ, ಮಾತು ಕೇಳಿ ಅಲ್ಲಿದ್ದ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.

ನಮ್ಮ ಮಮ್ಮಿ ಕೆಲವು ದಿನ ಅಡುಗೆ ಮಾಡಿದ್ದಕ್ಕೆ ಬೇಗ ಖಾಲಿ ಆಗಿದೆ, ಇಲ್ಲ ಅಂದಿದ್ರೆ ಇನ್ನು ಕೆಲವು ದಿನ ಬರ್ತಿತ್ತು, ನಮ್ಮ ಮನೆಯಲ್ಲಿ ಒಂದು ಸಿಲಿಂಡರ್ 1.5 ವರ್ಷ ಬರುತ್ತದೆ ಎಂದಿದ್ದಾರೆ ನಿವೇದಿತಾ, ಈ ಮಾತು ಕೇಳಿ ಸೃಜನ್ ಅವರೇ ಶೇಕ್ ಆಗಿ ಹೋಗಿದ್ದಾರೆ.. ತಾರಾ ಅವರು ಕೂಡ ಶಾಕ್ ಆಗಿ, ನೀನು ಮನೆಯಲ್ಲಿ ಅಡುಗೆ ಮಾಡೋದಿಲ್ಲವ ಎಂದು ಕೇಳಿದ್ದಾರೆ, ನಿರೂಪಕ ನಿರಂಜನ್ ಅವರು, ಈ ಶತಮಾನದ ಸಾಹಸಿ ಹೆಣ್ಣು ಎಂದು ನಿವೇದಿತಾ ಅವರನ್ನು ತಮಾಷೆ ಮಾಡಿದ್ದಾರೆ.