ಯಾರಿಗೆ ಇರಲಿ ಬಿಡಲಿ, ಈ ಮೂರು ಜನರಿಗೆ ಮಾತ್ರ ಜೀವನ ಪೂರ್ತಿ ಶನಿ ದೇವನೇ ಕಾದು, ಒಳ್ಳೆಯದನ್ನು ಮಾಡುತ್ತಾನೆ. ಯಾರಿಗೆ ಗೊತ್ತೇ??
ಈ ಪ್ರಪಂಚದಲ್ಲಿ ಜನ್ಮ ಪಡೆಯುವ ಪ್ರತಿಯೊಬ್ಬ ಮನುಷ್ಯನಿಗೂ ಒಂದು ನಂಬರ್ ಇರುತ್ತದೆ, ಅದು ಅವರ ಹುಟ್ಟಿದ ದಿನದ ಸಂಖ್ಯೆ, ಈ ನಂಬರ್ ನೋಡಿ ಹಲವರು, ಆ ವ್ಯಕ್ತಿಯ ಜೀವನ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ. ಈ ನಂಬರ್ ಗಳ ವಿಚಾರದಲ್ಲಿ ಇಂದು ನಾವು ನಿಮಗೆ ಯಾವ ಸಂಖ್ಯೆಯಲ್ಲಿ ಹುಟ್ಟಿದವರ ಜೀವನ ಚೆನ್ನಾಗಿರುತ್ತದೆ, ಶನಿದೇವರ ಕೃಪೆಯನ್ನು ಹೆಚ್ಚು ಪಡೆಯುವ ನಂಬರ್ ಗಳು ಯಾವುವು ಎಂದು ತಿಳಿಸುತ್ತೇವೆ. ಬೇರೆ ಬೇರೆ ಸಂಖ್ಯೆಯಲ್ಲಿ ಜನಿಸಿದ ಜನರು ಬೇರೆ ಬೇರೆ ಗುಣಗಳನ್ನು ಹೊಂದಿರುತ್ತಾರೆ. 8ನೇ ಸಂಖ್ಯೆಯಲ್ಲಿ ಹುಟ್ಟಿದವರ ಬಗ್ಗೆ ನೋಡುವುದಾದರೆ, ಇವರು ತುಂಬಾ ಬುದ್ಧಿವಂತರು ಜೊತೆಗೆ ಶ್ರಮ ಹಾಕಿ ಕೆಲಸ ಮಾಡುತ್ತಾರೆ, ವಾದ ವಿದಾದ ನಡೆಯುವಾಗ ಬುದ್ಧಿವಂತಿಕೆ ಇಂದ ಯೋಚನೆ ಮಾಡುತ್ತಾರೆ. ಹಾಗೆಯೇ ಇವರು ಬಹಳ ಶಾಂತ ಸ್ವಭಾವ ಹೊಂದಿರುವವರು, ಒಳ್ಳೆಯ ಹಾಸ್ಯಪ್ರಜ್ಞೆ ಸಹ ಇವರಲ್ಲಿರುತ್ತದೆ. ಇವರ ಬಗ್ಗೆ ತಿಳಿಯಬೇಕಾದ ಮುಖ್ಯವಾದ ವಿಷಯ ಏನೆಂದರೆ, ಇವರು ತಮ್ಮ ಮನಸ್ಸಿನಲ್ಲಿ ಇರುವುದನ್ನು ಯಾರ ಜೊತೆಗು ಹೇಳಿಕೊಳ್ಳುವುದಿಲ್ಲ.
ಸಂಖ್ಯಾಶಾಸ್ತ್ರದಲ್ಲಿ ಗೊತ್ತಾಗು ಹಾಗೆ, ಸಂಖ್ಯೆ 8 ಶನಿದೇವರಿಗೆ ಸೇರಿದ್ದು, ಹಾಗಾಗಿ 8, 17 ಮತ್ತು 26 ನಂಬರ್ ನಲ್ಲಿ ಹುಟ್ಟಿದವರು ಶನಿದೇವರ ಆಶೀರ್ವಾದ ಇರುತ್ತದೆ. ಈ ನಂಬರ್ ಗಳಲ್ಲಿ ಜನಿಸಿದವರು ಬಗ್ಗೆ ಇಂದು ಕೆಲವು ವಿಷಯಗಳನ್ನು ತಿಳಿಯೋಣ. ಇವರ ಮಾತು ಕಡಿಮೆ, ತಮ್ಮ ಬಗ್ಗೆ ತಾವು ಹೆಚ್ಚು ಹೊಗಳಿಕೆ ಇಷ್ಟಪಡುವುದಿಲ್ಲ. ಇವರು ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಶನಿದೇವರು ನಿಧಾನವಾಗಿ ಚಲನೆ ಮಾಡುವ ಹಾಗೆ, ಇವರು ಕೂಡ ನಿಧಾನವಾಗಿ ಸಾಗುತ್ತಾ ಏಳಿಗೆ ಹೊಂದುತ್ತಾರೆ. ಆರ್ಥಿಕ ವಿಚಾರದಲ್ಲಿ ಇವರು ಹೆಚ್ಚು ಸ್ಥಿರವಾಗಿರುತ್ತಾರೆ, ಏಕೆಂದರೆ ಇವರು ಖರ್ಚು ಮಾಡುವುದು ಕಡಿಮೆ, ಹಣ ಉಳಿಸುತ್ತಾರೆ. ಹೂಡಿಕೆ ಮಾಡಲು ಇವರಿಗೆ ಆಸಕ್ತಿ ಹೆಚ್ಚು, ಈ ಮೂರು ಸಂಖ್ಯೆಯಲ್ಲಿ ಜನಿಸಿದವರಿಗೆ, ಶನಿ ದೇವದ ಆಶೀರ್ವಾದ ಯಾವಾಗಲೂ ಇರುತ್ತದೆ, ಹೆಚ್ಚಿನ ಸಂಪತ್ತು ಗಳಿಸುತ್ತಾರೆ.
ಇದಕ್ಕೆ ಕಾರಣ ಏನೆಂದರೆ, 8ನೇ ಮನೆ ಗೆ ಶನಿದೇವರೇ ಅಧಿಪತಿ, ಹಾಗಾಗಿ ನೀವು ಎಲ್ಲಾ ಕೆಲಸಗಳಲ್ಲೂ ಯಶಸ್ಸು ಪಡೆಯುತ್ತೀರಿ. ಈ ಸಂಖ್ಯೆ ಇರುವವರು ಇಂಜಿನಿಯರಿಂಗ್ ಅಥವಾ ಎಲೆಕ್ಟ್ರಾನಿಕ್ಸ್ ಫೀಲ್ಡ್ ನಲ್ಲಿ ಕೆರಿಯರ್ ಕಟ್ಟಿಕೊಳ್ಳುತ್ತಾರೆ. ಇವರು ಒಳ್ಳೆಯ ಬ್ಯುಸಿನೆಸ್ ಮ್ಯಾನ್ ಅಥವಾ ಬ್ಯುಸಿನೆಸ್ ವುಮನ್ ಸಹ ಆಗಬಹುದು. ಇಂನ, ತೈಲ, ಕಬ್ಬಿಣದ ಸರಕುಗಳ ಪೂರೈಕೆಯ ಬ್ಯುಸಿನೆಸ್ ಮಾಡಿದರೆ, ನಿಮಗೆ ಒಳ್ಳೆಯ ಲಾಭ ಸಿಗುತ್ತದೆ. ಶನಿದೇವರಿಗೆ ಅನುಕೂಲ ಆಗುವ,8 ನೇ ಸಂಖ್ಯೆಯ ತಿಳಿಸುತ್ತೇವೆ… ಈ ಸಂಖ್ಯೆಯವರು, ಕಠಿಣ ಪರಿಶ್ರಮ, ಅತ್ಯಂತ ನಿರ್ಣಾಯಕ, ಹಠಮಾರಿ ಆಗಿದ್ದು, ನೆಗಟಿವ್ ಗುಣಲಕ್ಷಣ ಹೊಂದಿರುತ್ತಾರೆ. ಕಠಿಣ ಜನರು, ಹೆಚ್ಚು ಸ್ಟ್ರಾಂಗ್ ಆಗಿರುತ್ತಾರೆ. ಇವರು ಯಾವಾಗಲೂ ಹಣಕ್ಕೆ ಆದ್ಯತೆ ನೀಡುತ್ತಿದ್ದಾರೆ, ಹಾಗೆಯೇತ ಕೋಪ ಕೂಡ ಹೆಚ್ಚಾಗಿ ಬರುತ್ತದೆ. 8 ಕರ್ಮದ ಸಂಖ್ಯೆ ಆಗಿದ್ದು, ಈ ಸಂಖ್ಯೆಯಲ್ಲಿ ಜನಿಸಿರುವರು ಅದನ್ನು ಪ್ರತಿನಿಧಿಸುತ್ತಾರೆ.