ಕೊಹ್ಲಿ ಗೆಲ್ಲಿಸಿದ ಪಂದ್ಯವನ್ನು ಕಳಪೆ ಬಾಲ್ ವೇಸ್ಟ್ ಮಾಡಿದ್ದ ಪಾಂಡ್ಯ ಅರ್ಪಿಸಿದ್ದು ಯಾರಿಗೆ ಗೊತ್ತೇ?? ಆ ವಿಶೇಷ ವ್ಯಕ್ತಿ ಯಾರು ಗೊತ್ತೇ??
ಟಿ20 ವಿಶ್ವಕಪ್ ನಲ್ಲಿ ನಿನ್ನೆ ನಡೆದ ಭಾರತ ಮತ್ತು ಪಾಕಿಸ್ತಾನ್ ಪಂದ್ಯದಲ್ಲಿ ಭಾರತ ತಂಡ ಅದ್ಭುತವಾದ ಗೆಲುವು ಸಾಧಿಸಿದೆ. ಪಾಕಿಸ್ತಾನ್ ಗಳಿಸಿದ 159 ರನ್ ಅನ್ನು ಭಾರತ ಚೇಸ್ ಮಾಡುತ್ತಾ ಸಾಗಿತು, ಶುರುವಿನಲ್ಲಿ ನಮ್ಮ ಭಾರತ ತಂಡ ಬಹಳ ಬೇಗನೆ ವಿಕೆಟ್ಸ್ ಕಳೆದುಕೊಂಡಿತು, ಪವರ್ ಪ್ಲೇ ಮುಗಿಯುವುದರೊಳಗೆ 4 ವಿಕೆಟ್ ಕಳೆದುಕೊಂಡಿತ್ತು. 3ನೇ ಕ್ರಮಾಂಕದಲ್ಲಿದ್ದ ವಿರಾಟ್ ಕೋಹ್ಲಿ ಅವರು ಉತ್ತಮ ಪ್ರದರ್ಶನ ನೀಡುತ್ತಾ ಕ್ರೀಸ್ ನಲ್ಲಿದ್ದರು, ಬಳಿಕ ಬಂದ ಹಾರ್ದಿಕ್ ಪಾಂಡ್ಯ ಅವರು ವಿರಾಟ್ ಅವರಿಗೆ ಒಳ್ಳೆಯ ಜೊತೆಯಾಟ ನೀಡಿದರು.
ಹಾರ್ದಿಕ್ ಪಾಂಡ್ಯ ಅವರು ವಿರಾಟ್ ಕೋಹ್ಲಿ ಅವರ ಜೊತೆಗೆ ಸಪೋರ್ಟ್ ಮಾಡಿ, ಇವರಿಬ್ಬರ ಜೊತೆಯಾಟದಲ್ಲಿ ಬರೋಬ್ಬರಿ 113 ರನ್ ಗಳು ಬಂದವು. ಪಾಂಡ್ಯ ಅವರು ವೈಯಕ್ತಿಕವಾಗಿ 40 ರನ್ ಗಳನ್ನು ಗಳಿಸಿ, ತಂಡದ ಗೆಲುವಿಗೆ ಸಹಾಯ ಮಾಡಿದರು. ಬೇರೆ ಯಾವ ಪ್ಲೇಯರ್ ಗಳ ಜೊತೆಯಲ್ಲೂ ಉತ್ತಮ ಜೊತೆಯಾಟ ನಿರ್ಮಾಣವಾಗಲು ಸಾಧ್ಯವಾಗಿರಲಿಲ್ಲ, ಆ ಸಮಯದಲ್ಲಿ ಪಾಂಡ್ಯ ಮತ್ತು ವಿರಾಟ್ ಜೊತೆಯಾಟ ತಂಡವನ್ನು ಗೆಲುವಿನ ಕಡೆಗೆ ತೆಗೆದುಕೊಂಡು ಹೋಗುವಲ್ಲಿ ಬಹಳ ಸಹಾಯವಾಯಿತು. ನಿನ್ನೆಯ ಪಂದ್ಯ ಗೆದ್ದ ನಂತರ ಹಾರ್ದಿಕ್ ಪಾಂಡ್ಯ ಭಾವುಕರಾಗಿದ್ದರು, ಈ ಗೆಲುವನ್ನು ತಮ್ಮ ತಂದೆಗೆ ಅರ್ಪಿಸಿದರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ ಅವರು, “ನಾನು ಯೋಚನೆ ಮಾಡುತ್ತಾ ಇದ್ದದ್ದು ನನ್ನ ತಂದೆಯ ಬಗ್ಗೆ ಮಾತ್ರ, ಅವರ ಬಗ್ಗೆ ಯೋಚಿಸಿ ನಾನು ಅಳಲಿಲ್ಲ. ನನ್ನ ಮಗನನ್ನು ನಾನು ತುಂಬಾ ಪ್ರೀತಿಸುತ್ತೇನೆ. ನನ್ನ ತಂದೆ ನನಗಾಗಿ ಏನೆಲ್ಲಾ ಮಾಡಿದ್ದರೋ, ಆ ರೀತಿ ನಾನು ನನ್ನ ಮಗನಿಗೆ ಮಾಡಲು ಸಾಧ್ಯವಾಗುತ್ತಾ ಎಂದು ನನಗೆ ಗೊತ್ತಿಲ್ಲ. ನನಗೋಸ್ಕರ ಅವರು 6 ಸಾರಿ ಊರುಗಳನ್ನು ಬದಲಾಯಿಸಿದರು. ಈ ಗೆಲುವನ್ನ ನಾನು ನನ್ನ ತಂದೆಗೆ ಅರ್ಪಿಸುತ್ತೇವೆ..” ಎಂದು ಭಾವುಕರಾಗಿದ್ದಾರೆ ಪಾಂಡ್ಯ. ಕ್ಯಾಪ್ಟನ್ ರೋಹಿತ್ ಶರ್ಮ ಅವರು ಕೂಡ ಪಾಂಡ್ಯ ಮತ್ತು ಕೋಹ್ಲಿ ಜೊತೆಯಾಟ ಮತ್ತು ಕೋಹ್ಲಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.