ದೀಪಾವಳಿ ಹಬ್ಬಕ್ಕೆ ಸೌಂದರ್ಯ ಎಂಬ ಪಟಾಕಿಯನ್ನು ಹಚ್ಚಿ, ಎಲ್ಲರ ತಲೆ ಕೆಡಿಸುವಂತಹ ಫೋಟೋ ಹಾಕಿದ ರಶ್ಮಿಕಾ. ಹೇಗಿವೆ ಗೊತ್ತೇ ಫೋಟೋಸ್??
ನಟಿ ರಶ್ಮಿಕಾ ಮಂದಣ್ಣ ಇಂದು ನ್ಯಾಷನಲ್ ಕ್ರಶ್, ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಬಾಲಿವುಡ್ ನಲ್ಲಿ ಇವರು ಅಮಿತಾಭ್ ಬಚ್ಚನ್ ಅವರ ಜೊತೆಗೆ ನಟಿಸಿದ ಗುಡ್ ಬೈ ಸಿನಿಮಾ ಬಿಡುಗಡೆಯಾಗಿ, ರಶ್ಮಿಕಾ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ಇನ್ನು ರಶ್ಮಿಕಾ ಅಭಿನಯದ ಮಿಷನ್ ಮಜ್ನು ಸಿನಿಮಾ ತೆರೆಕಾಣಲು ಸಿದ್ಧವಾಗಿದೆ. ಬೇರೆ ಭಾಷೆಯ ಸಿನಿಮಾಗಳಲ್ಲೂ ರಶ್ಮಿಕಾ ಅವರು ಬ್ಯುಸಿ ಆಗಿದ್ದು, ಪುಷ್ಪ2, ವಾರಿಸು, ಹಾಗೂ ಕಾರ್ತಿಕ್ ಆರ್ಯನ್ ನಾಯಕನಾಗಲಿರುವ ಆಶಿಕಿ3 ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ರಶ್ಮಿಕಾ ಮಂದಣ್ಣ.
ರಶ್ಮಿಕಾ ರಣಬೀರ್ ಕಪೂರ್ ಅವರು ನಾಯಕನಾಗಿರುವ ಅನಿಮಲ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ರಶ್ಮಿಕಾ ಮಂದಣ್ಣ. ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ರಶ್ಮಿಕಾ ಅವರಿಗೆ ಬಹುಬೇಡಿಕೆ ಶುರುವಾಯಿತು, ಎಲ್ಲ ಚಿತ್ರರಂಗದಲ್ಲೂ ಈಗ ರಶ್ಮಿಕಾ ಅವರದ್ದೇ ಹವಾ. ಎಲ್ಲಾ ಸ್ಟಾರ್ ಹೀರೋಗಳ ಸಿನಿಮಾಗು ಆಯ್ಕೆಯಾಗಿ, ಚಿತ್ರೀಕರಣಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ ರಶ್ಮಿಕಾ. ಚಿತ್ರೀಕರಣಗಳೆಲ್ಲಾ ಹೇಗೆ ಇದ್ದರು, ರಶ್ಮಿಕಾ ಅವರು ಹೆಚ್ಚಾಗಿ ಫೋಟೋಶೂಟ್ ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಅಭಿಮಾನಿಗಳಿಗೆ ಸೌಂದರ್ಯದ ರಸದೌತಣ ನೀಡುತ್ತಾರೆ.
ಇದೀಗ ರಶ್ಮಿಕಾ ಅವರು ದೀಪಾವಳಿ ಹಬ್ಬಕ್ಕಾಗಿ ಸೀರೆಯಲ್ಲಿ ಹೊಸದಾದ ಫೋಟೋಶೂಟ್ ಮಾಡಿಸಿದ್ದು, ಸೀರೆಯಲ್ಲಿ ರಶ್ಮಿಕಾ ಅವರ ಹಾಟ್ ಲುಕ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಸೀರೆ ಧರಿಸಿ ಇಷ್ಟರ ಮಟ್ಟಿಗೆ ಹಾಟ್ ಆಗಿ ಕಾಣಿಸಿಕೊಳ್ಳಲು ಹೇಗೆ ಸಾಧ್ಯ ಎಂದು ತಲೆಕೆಡಿಸಿಕೊಂಡಿದ್ದಾರೆ ನೆಟ್ಟಿಗರು. ಈ ಸೀರೆಯ ಫೋಟೋಶೂಟ್ ನಲ್ಲಿ ರಶ್ಮಿಕಾ ಅವರು ತಮ್ಮ ಸೌಂದರ್ಯ, ಮೈಮಾಟದ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ವೈರಲ್ ಆಗುತ್ತಿರುವ ಈ ಫೋಟೋಗಳನ್ನು ನೀವು ಕೂಡ ಒಮ್ಮೆ ನೋಡಿ..