ಒಂದು ಕಾಲದಲ್ಲಿ ಪಾಕ್ ಅನ್ನು ಅಟ್ಟಾಡಿಸಿ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಸೆಹ್ವಾಗ್, ನಿನ್ನೆ ಪಂದ್ಯ ನೋಡಿ ಹೇಳಿದ್ದೇನು ಗೊತ್ತೇ??
ನಿನ್ನೆ ಭಾನುವಾರ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ, ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ ವಿರಾಟ್ ಕೋಹ್ಲಿ ಅವರ ಅದ್ಭುತ ಇನ್ನಿಂಗ್ಸ್ ಗೆ ಸಾಕ್ಷಿಯಾಯಿತು. ನಿನ್ನೆ ನಡೆದ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮಾಡುವಾಗ, ಪಾಕಿಸ್ತಾನ್ ಬೌಲರ್ ಗಳ ಆಕ್ರಮಣಕಾರಿ ಬೌಲಿಂಗೆ ಭಾರತ ತಂಡ ವಿಕೆಟ್ ಕಳೆದುಕೊಳ್ಳುತ್ತಿತ್ತು, ಆರಂಭದಲ್ಲೇ 4 ವಿಕೆಟ್ ಕಳೆದುಕೊಂಡು ಕಷ್ಟದಲ್ಲಿದ್ದಾಗ, ತಂಡದ ಪರವಾಗಿ ನಿಧಾನವಾಗಿ ರನ್ ಗಳಿಸುತ್ತಾ, ಜೊತೆಯಾಗಿ ನಿಂತದ್ದು ವಿರಾಟ್ ಕೋಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅವರು. ಇವರಿಬ್ಬರು ರನ್ ಗಳಿಸುತ್ತಾ, ಆಗಾಗ ಬೌಂಡರಿ ಸಿಕ್ಸರ್ ಭಾರಿಸುತ್ತಾ, ಭಾರತ ತಂಡವನ್ನು ಸೋಲಿನ ಅಂಚಿನಿಂದ ಹೊರಗೆ ತರುತ್ತಾ ಮುಂದಕ್ಕೆ ಸಾಗಿಸಿದರು.
ವಿರಾಟ್ ಮತ್ತು ಪಾಂಡ್ಯ ಜೊತೆಯಾಟದಲ್ಲಿ ಬರೋಬ್ಬರಿ 113 ರನ್ ಗಳು ತಂಡಕ್ಕೆ ಬಂದವು, ಪಾಂಡ್ಯ ಅವರು 40 ರನ್ ಗಳಿಸಿ ಔಟ್ ಆದರೆ, ವಿರಾಟ್ ಕೋಹ್ಲಿ ಅವರು 53 ಎಸೆತಗಳಲ್ಲಿ 82 ರನ್ ಗಳಿಸಿ, ತಂಡವನ್ನು ಗೆಲ್ಲಿಸಿ ಅಜೇಯರಾಗಿ ನಿಂತರು. ಕೋಹ್ಲಿ ಅವರ ಈ ಇನ್ನಿಂಗ್ಸ್ ವಿಶ್ವಕಪ್ ಇತಿಹಾಸದಲ್ಲೇ ಬೆಸ್ಟ್ ಇನ್ನಿಂಗ್ಸ್ ಗಳಲ್ಲಿ ಒಂದು ಎನ್ನಿಸಿಕೊಂಡಿದೆ. ವಿರಾಟ್ ಅವರ ಈ ಅದ್ಭುತ ಇನ್ನಿಂಗ್ಸ್ ಗೆ ಸ್ಟೇಡಿಯಂ ನಲ್ಲಿ ನೆರೆದಿದ್ದ 90,000 ಅಭಿಮಾನಿಗಳು ಸಾಕ್ಷಿಯಾದರು. ವಿರಾಟ್ ಅವರಿಗೆ ಮತ್ತು ಭಾರತ ತಂಡಕ್ಕೆ ಇದು ಬಹಳ ಭಾವುಕವಾದ ಕ್ಷಣವಾಗಿತ್ತು. ತಂಡದ ಎಲ್ಲರು ಕೋಹ್ಲಿ ಅವರನ್ನು ಅಪ್ಪಿ ಶುಭಾಶಯ ಹೇಳಿದರು. ಎಲ್ಲರಿಂದಲೂ ಕೋಹ್ಲಿ ಅವರಿಗೆ ಮೆಚ್ಚುಗೆ ಸಿಗುತ್ತಿದೆ.
ಆಗಿನ ಕಾಲದಲ್ಲಿ ಪಾಕಿಸ್ತಾನ್ ವಿರುದ್ಧದ ಪಂದ್ಯಗಳಲ್ಲಿ ಸಿಂಹಸ್ವಪ್ನವಾಗಿದ್ದ, ವೀರೇಂದ್ರ ಸೆಹ್ವಾಗ್ ಅವರು ನಿನ್ನೆ ನಡೆದ ಪಂದ್ಯ ನೋಡಿ ಥ್ರಿಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, “Yayyyy.. Happpyyy.. ದೀಪಾವಳಿ ಹಬ್ಬಕ್ಕೆ ಇದು ಎಂಥಹ ಅದ್ಭುತವಾದ ಆಟ.. ನಮ್ಮ ಭಾವನೆಗಳು ಬಹಳ ಹೆಚ್ಚಾಗಿದ್ದವು.. ಭಾರತದ ಚೇಸಿಂಗ್ ನಲ್ಲಿ ಇದುವರೆಗೂ ನಾನು ನೋಡಿರುವ ಅದ್ಭುತವಾದ ಇನ್ನಿಂಗ್ಸ್ ಗಳಲ್ಲಿ ಇದು ಕೂಡ ಒಂದು, ವಿರಾಟ್ ಕೋಹ್ಲಿ ಅವರಿಗೆ ಸಲ್ಯೂಟ್.. ಚಕ್ ದೇ ಇಂಡಿಯಾ..” ಎಂದು ಬರೆಯುವ ಮೂಲಕ ತಮ್ಮ ಸಂತೋಷ ವ್ಯಕ್ತಪಡಿಸಿ, ವಿರಾಟ್ ಕೋಹ್ಲಿ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ ವೀರೇಂದ್ರ ಸೆಹ್ವಾಗ್.