ಕನ್ಯಾ ಕುಮಾರಿ ಧಾರಾವಾಹಿಯನ್ನು ಬೇಗ ಬೇಗ ಮುಗಿಸಿದರು, ಚರಣ್ ಗೆ ಒಲಿದು ಬಂದ ಅದೃಷ್ಟ. ಯಶವಂತ್ ಗೌಡ ಗೆ ಅದೃಷ್ಟ ಕುಲಾಯಿಸಿದ್ದು ಹೇಗೆ ಗೊತ್ತೇ??

36

Get real time updates directly on you device, subscribe now.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರವಾಹಿ ಕನ್ಯಾಕುಮಾರಿ, ಇತ್ತೀಚೆಗೆ ಈ ಧಾರವಾಹಿ ಮುಕ್ತಾಯವಾಯಿತು. ಕನ್ಯಾಕುಮಾರಿ ಧಾರವಾಹಿಯಲ್ಲಿ ನಾಯಕ ನಾಯಕಿಯಾಗಿ ನಟಿಸಿದ್ಧವರು ಹೊಸ ಪ್ರತಿಭೆಗಳು. ನಾಯಕ ಚರಣ್ ಪಾತ್ರದಲ್ಲಿ ಹೊಸ ಪ್ರತಿಭೆ ಯಷ್ವಂತ್ ಗೌಡ ನಟಿಸಿದ್ದರು. ಬಡವರ ಮನೆಯಲ್ಲಿ ಹುಟ್ಟಿ ಬೆಳೆದ ಸ್ವಾಭಿಮಾನಿ ಹುಡುಗನ ಪಾತ್ರ, ಕನ್ನಿಕಾಳನ್ನು ಬಹಳ ಪ್ರೀತಿಸುವ ಗಂಡನ ಪಾತ್ರದಲ್ಲಿ ನಟಿಸಿದ್ದರು ಚರಣ್. ಬಿಗ್ ಬಾಸ್ ಶೋ ಶುರುವಾಗಬೇಕಿದ್ದ ಕಾರಣ ಮುಕ್ತಾಯವಾದ ಧಾರವಾಹಿಗಳಲ್ಲಿ ಕನ್ಯಾಕುಮಾರಿ ಸಹ ಒಂದಾಗಿದೆ.

ಈ ಧಾರವಾಹಿ ಮುಗಿಯುತ್ತಿದ್ದ ಹಾಗೆ ಯಶವಂತ್ ಗೌಡ ಅವರಿಗೆ ಭರ್ಜರಿಯಾದ ಹೊಸ ಅವಕಾಶ ಸಿಕ್ಕಿದೆ. ಯಶವಂತ್ ಅವರು ಈಗ ತೆಲುಗು ಧಾರವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ತೆಲುಗಿನ ಅಮ್ಮಾಯಿಗಾರು ಧಾರವಾಹಿಯಲ್ಲಿ ಯಶವಂತ್ ನಾಯಕನಾಗಿದ್ದು, ಈಗಾಗಲೇ ತೆಲುಗು ಚಾನಲ್ ನಲ್ಲಿ ಪ್ರೋಮೋಗಳು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಧಾರವಾಹಿಯಲ್ಲಿ ಯಶವಂತ್ ಅವರಿಗೆ ನಾಯಕಿಯಾಗಿ ಗಟ್ಟಿಮೇಳ ಧಾರವಾಹಿ ಖ್ಯಾತಿಯ ನಟಿ ನಿಶಾ ಮಿಲನ ಅಭಿನಯಿಸುತ್ತಿದ್ದಾರೆ.

ಕನ್ನಡ ಧಾರವಾಹಿ ಮುಗಿಯುತ್ತಿದ್ದ ಹಾಗೆ ತೆಲುಗಿನಲ್ಲಿ ಅವಕಾಶ ಸಿಕ್ಕಿರುವುದು ಯಶವಂತ್ ಅವರಿಗೆ ಬಹಳ ಸಂತೋಷವಾಗಿದೆ, ಕನ್ನಡದ ಒಂದು ಧಾರವಾಹಿ ನಟನೆಯಿಂದ ತೆಲುಗಿನಲ್ಲಿ ಅವಕಾಶ ಸಿಕ್ಕಿರುವುದಕ್ಕೆ ಸಂತೋಷ ಪಟ್ಟಿರುವ ಯಶವಂತ್ ಅವರು, ನನಗೆ ತೆಲುಗು ಬರುವುದಿಲ್ಲ, ಕಲಿಯಬೇಕು ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ನಟಿಸುವ ಅವಕಾಶ ಸಿಕ್ಕರೆ ಖಂಡಿತವಾಗಿಯೂ ನಟಿಸುತ್ತೇನೆ ಎಂದು ಕೂಡ ಹೇಳಿದ್ದಾರೆ. ಈಗಾಗಲೇ ಕನ್ನಡದ ಸಾಕಷ್ಟು ಕಲಾವಿದರು ತೆಲುಗಿನಲ್ಲಿ ಹೆಸರು ಮಾಡುತ್ತಿದ್ದು, ಯಶವಂತ್ ಸಹ ಇದೇ ಸಾಲಿಗೆ ಸೇರಲಿದ್ದಾರೆ.

Get real time updates directly on you device, subscribe now.