ಅಪ್ಪು ಕಾರ್ಯಕ್ರಮಕ್ಕೆ ಕೈ ಕೊಟ್ಟ ದರ್ಶನ್, ಮರುದಿನ ಹುಬ್ಬಳ್ಳಿಯಲ್ಲಿ ಹಾಜರ್. ಅಪ್ಪುಗಿಂತ ಹಣ ಮುಕ್ಯವಾಯಿತೇ?? ಶಿವಣ್ಣ ಹೇಳಿದ್ದೇನು ಗೊತ್ತೆ??

56

Get real time updates directly on you device, subscribe now.

ಅಪ್ಪು ಅವರ ಮೇಲೆ ಇಡೀ ಕರ್ನಾಟಕದ ಜನರಿಗೆ ಮತ್ತು ಕನ್ನಡ ಚಿತ್ರರಂಗದ ಕಲಾವಿದರಿಗೆ ಎಷ್ಟು ಗೌರವ ಎಂದು ಗೊತ್ತಾಗುತ್ತದೆ. ಪುನೀತಪರ್ವ ಕಾರ್ಯಕ್ರಮಕ್ಕೆ ನಮ್ಮ ಕನ್ನಡ ಚಿತ್ರರಂಗದ ಕಲಾವಿದರು ಮಾತ್ರವಲ್ಲ, ಬೇರೆ ಭಾಷೆಯ ಕಲಾವಿದರು ಸಹ ಬಂದಿದ್ದರು, ನಟ ರಾಣಾ ದಗ್ಗುಬಾಟಿ, ಅಖಿಲ್ ಅಕ್ಕಿನೇನಿ, ನಟ ಸೂರ್ಯ ಬಂದಿದ್ದರು. ಬರಲು ಆಗದೆ ಇದ್ದ ಕಾರಣದಿಂದ ಕಮಲ್ ಹಾಸನ್ ಅವರು ಮತ್ತು ಅಮಿತಾಭ್ ಬಚ್ಚನ್ ಅವರು ವಿಡಿಯೋ ಮೂಲಕ ಅಪ್ಪು ಅವರ ಬಗ್ಗೆ ಮಾತನಾಡಿದರು.

ಕನ್ನಡ ಚಿತ್ರರಂಗದ ಬಹಳಷ್ಟು ಜನ ಕಲಾವಿದರು ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ನಟ ದರ್ಶನ್ ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ, ಆದರೆ ಮರುದಿನ ಬನಾರಸ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಗೆ ಹುಬ್ಬಳ್ಳಿಗೆ ಬಂದಿದ್ದರು. ಇದರಿಂದಾಗಿ ದರ್ಶನ್ ಅವರ ಬಗ್ಗೆ ಪರ ವಿರೋಧದ ಚರ್ಚೆ ಆಗುತ್ತಿದೆ. ದರ್ಶನ್ ಅವರಿಗೆ ಹಣವೇ ಮುಖ್ಯವಾಯಿತೆ, ಅಪ್ಪು ಅವರ ಕಾರ್ಯಕ್ರಮಕ್ಕೆ ಸ್ವಲ್ಪ ಸಮಯ ಆದರು ಬಂದು ಹೋಗಬಹುದಿತ್ತು ಎನ್ನುತ್ತಿದ್ದಾರೆ. ದರ್ಶನ್ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವವರ ಸಂಖ್ಯೆಯೇ ಹೆಚ್ಚಾಗಿದೆ.

ದರ್ಶನ್ ಅವರ ಬಗ್ಗೆ ಈ ರೀತಿ ಮಾತನಾಡುತ್ತಿರುವವರಿಗೆ ಶಿವಣ್ಣ ತಕ್ಕ ಉತ್ತರ ನೀಡಿದ್ದಾರೆ, ಪುನೀತಪರ್ವ ಇವೆಂಟ್ ಗೆ ದರ್ಶನ್ ಅಬರು ಬರದೆ ಇದ್ದಿದ್ದಕ್ಕೆ ಕಾರಣ ಆ ದಿನ ದರ್ಶನ್ ಅವರಿಗೆ ಕ್ರಾಂತಿ ಸಿನಿಮಾ ಚಿತ್ರೀಕರಣ ಇತ್ತು, ರಾತ್ರಿ ಇಡೀ ಫೈಟ್ ದೃಶ್ಯ ಚಿತ್ರೀಕರಣ ಇದ್ದಿದ್ದಕ್ಕೆ ಅವರು ಬಂದಿಲ್ಲ, ಈ ವಿಷಯವನ್ನ ಶಿವಣ್ಣ ಅವರಿಗೆ ಕರೆಮಾಡಿ ಹೇಳಿದ್ದರಂತೆ, ಅದರ ಬಗ್ಗೆ ಹೇಳಿದ ಶಿವಣ್ಣ ಅವರು ದರ್ಶನ್ ಅವರ ಬಗ್ಗೆ ಇಲ್ಲ ಸಲ್ಲದನ್ನು ಹೇಳಬೇಡಿ ಎಂದು ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

Get real time updates directly on you device, subscribe now.