ಬಿಸಿಸಿಐ ಅಧ್ಯಕ್ಷನ ಸ್ಥಾನ ಸಿಕ್ಕ ಕೂಡಲೇ ಕನ್ನಡಿಗರಿಗೆ ಹಾಗೂ ಆರ್ಸಿಬಿ ಫ್ಯಾನ್ಸ್ ಗೆ ಸಿಹಿ ಸುದ್ದಿ ಕೊಟ್ಟ ರೋಜರ್ ಬಿನ್ನಿ. ಏನು ಗೊತ್ತೇ??
ಬಿಸಿಸಿಐ ಗೆ ಈಗ ಹೊಸ ಅಧ್ಯಕ್ಷರು ಆಯ್ಕೆಯಾಗಿದ್ದಾರೆ. ಇಷ್ಟು ದಿವಸ ಭಾರತ ತಂಡದ ಮಾಜಿ ಆಟಗಾರ ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಿದ್ದರು, ಆದರೆ ಈಗ ಅವರಿಗಿಂತ ಹಿರಿಯ ಕ್ರಿಕೆಟ್ ಆಟಗಾರ, ನಮ್ಮ ಹೆಮ್ಮೆಯ ಕನ್ನಡಿಗ ರೋಜರ್ ಬಿನ್ನಿ ಅವರು ಬಿಸಿಸಿಐ ನೂತನ ಅಧ್ಯಕ್ಷರಾಗಿದ್ದಾರೆ. ನಮ್ಮ ಕನ್ನಡದ ಪ್ಲೇಯರ್ ಬಿಸಿಸಿಐ ಅಧ್ಯಕ್ಷರಾಗಿರುವುದು, ಕನ್ನಡಿಗರಾಗಿ ನಮ್ಮೆಲ್ಲರಿಗು ಹೆಮ್ಮೆ ತರುವ ವಿಚಾರ ಎಂದೆ ಹೇಳಬಹುದು. ಬಿಸಿಸಿಐ ಅಧ್ಯಕ್ಷರಾದ ತಕ್ಷಣವೇ ಬಿನ್ನಿ ಅವರು ಆರ್.ಸಿ.ಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಪ್ರತಿ ವರ್ಷ ಐಪಿಎಲ್ ಪಂದ್ಯಗಳು ಹೋಮ್ ಅಂಡ್ ಅವೆ ಮಾದರಿಯಲ್ಲಿ ನಡೆಯುತ್ತಿತ್ತು, ಆದರೆ ಕರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಯುಎಇ ನಲ್ಲಿ ಐಪಿಎಲ್ ಪಂದ್ಯಗಳು ನಡೆಯುತ್ತಿದ್ದವು, ಆದರೆ 2023ರಿಂದ ಮತ್ತೆ ಹೋಮ್ ಅಂಡ್ ಅವೆ ಮಾದರಿಯಲ್ಲಿ ಪಂದ್ಯಗಳು ನಡೆಯಲಿದೆ. ಹಾಗಾಗಿ ಆರ್.ಸಿ.ಬಿ ಪಂದ್ಯಗಳು ನಮ್ಮ ಬೆಂಗಳೂರಿನಲ್ಲಿ ನಡೆಯುವುದು ಪಕ್ಕಾ ಆಗಿದೆ. ಆದರೆ ಮುಂಬರುವ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಮಾತ್ರವಲ್ಲ, ಕರ್ನಾಟಕದ ಬೇರೆ ಊರುಗಳಲ್ಲೂ ಐಪಿಎಲ್ ಪಂದ್ಯಗಳನ್ನು ನಡೆಸಲಾಗುತ್ತದೆ.
ಈ ಸಿಹಿ ಸುದ್ದಿಯನ್ನು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ತಿಳಿಸಿದ್ದಾರೆ, ಮೈಸೂರು, ಹುಬ್ಬಳ್ಳಿ ಮತ್ತು ಬೆಳಗಾಂ ನಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ತಕ್ಕದಾದ ಗ್ರೌಂಡ್ ಕಟ್ಟು ಫೆಸಿಲಿಟಿ ಎರಡು ಕೂಡ ಇದೆ, ಮುಂಬರುವ ವರ್ಷಗಳಲ್ಲಿ ಮೈಸೂರು, ಹುಬ್ಬಳ್ಳಿ ಮತ್ತು ಬೆಳಗಾಂ ನಲ್ಲಿ ಸಹ ಐಪಿಎಲ್ ಪಂದ್ಯಗಳನ್ನು ನಡೆಸುವ ಏರ್ಪಾಡು ಮಾಡುತ್ತೇವೆ ಎಂದು ಬಿನ್ನಿ ಅವರು ತಿಳಿಸಿದ್ದಾರೆ, ಬಿಸಿಸಿಐ ಅಧ್ಯಕ್ಷರಾದ ಬಳಿಕ ಬಿನ್ನಿ ಅವರು ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ನಡೆಸಿದರು, ಆಗ ಈ ಸಂತೋಷದ ವಿಚಾರವನ್ನು ತಿಳಿಸಿದ್ದಾರೆ. ಈ ವಿಷಯ ಆರ್.ಸಿ.ಬಿ ಅಭಿಮಾನಿಗಳು ಫುಲ್ ಖುಶ್ ಆಗಿದ್ದಾರೆ.