ಬಾಲಿವುಡ್ ಅನ್ನು ಶೇಕ್ ಮಾಡುತ್ತಿರುವ ಕಾಂತಾರ ನೋಡಿದ, ಕ್ವೀನ್ ಕಂಗನಾ ಹೇಳಿದ್ದೇನು ಗೊತ್ತೇ??
ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ರೆಕಾರ್ಡ್ ಗಳನ್ನು ಧೂಳೆಬ್ಬಿಸುತ್ತಿದೆ. ಸಿನಿಮಾ ಬಿಡುಗಡೆಯಾಗಿ ಮೂರು ವಾರ ಕಳೆದು, ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದರು ಸಹ ಇಂದಿಗೂ ಸಿನಿಮಾ ಮೇಲಿನ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇಂದಿಗೂ ಜನರು ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಕಾಂತಾರ ಸಿನಿಮಾ ಮಾತ್ರವಲ್ಲ ಅದೊಂದು ಅನುಭವ ಎನ್ನುತ್ತಿದ್ದಾರೆ. ಈಗ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆ ಆಗಿರುವ ಕಾಂತಾರ ಎಲ್ಲಾ ಭಾಷೆಗಳಲ್ಲೂ ಭರ್ಜರಿಯಾಗಿ ಹೌಸ್ ಫುಲ್ ಶೋಗಳ ಮೂಲಕ ಮುನ್ನುಗ್ಗುತ್ತಿದೆ.
ಸಿನಿಮಾ ನೋಡಿದವರು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ಒಂದಷ್ಟು ಹೊಸ ವಿಚಾರವನ್ನ ಕಲಿಯುತ್ತಿದ್ದಾರೆ. ಕಾಂತಾರ ನೋಡಿ ಸಿನಿಮಾಪ್ರಿಯರು ಮಾತ್ರವಲ್ಲದೆ, ಸೆಲೆಬ್ರಿಟಿಗಳು ಸಹ ಮಾರುಹೋಗಿ, ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ, ಇದೇ ಸಾಲಿಗೆ ಬಾಲಿವುಡ್ ನ ಖ್ಯಾತ ನಟಿ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುವ ಕಂಗನಾ ರಣಾವತ್ ಅವರು ಸಹ ಸೇರಿಕೊಂಡಿದ್ದಾರೆ, ಕಂಗನಾ ಅವರು ಕಾಂತಾರ ಸಿನಿಮಾವನ್ನು ಹಾಡಿ ಹೊಗಳಿದ್ದು, ಈ ಸಿನಿಮಾ ಆಸ್ಕರ್ ಗೆ ಹೋಗಬೇಕು ಎಂದಿದ್ದಾರೆ, ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಂಗನಾ ಅವರು, “ಮುಂದಿನ ವರ್ಷ ಕಾಂತಾರ ಸಿನಿಮಾ ಆಸ್ಕರ್ ಗೆ ಹೋಗಬೇಕು. ಈ ವರ್ಷ ಮುಗಿಯಲು ಇನ್ನು ಕೆಲ ತಿಂಗಳುಗಳು ಉಳಿದಿದೆ, ಇನ್ನು ಒಳ್ಳೆಯ ಸಿನಿಮಾಗಳು ಬರಬಹುದು, ಆದರೆ ಕಾಂತಾರ ಸಿನಿಮಾ ಆಸ್ಕರ್ ಗೆ ಖಂಡಿತವಾಗಿ ಹೋಗಬೇಕು.
ನಮ್ಮ ಭಾರತ ದೇಶ ಒಂದು ಪವಾಡ, ಇಲ್ಲಿ ನೀವು ಅನುಭವಿಸಲು ಹೋದರೆ, ಅದರಿಂದ ನಿಮಗೆ ನಿರಾಶೆ ಆಗಬಹುದು, ಆದರೆ ನೀವು ಆ ಪವಾಡಕ್ಕೆ ಶರಣಾದರೆ, ಅದರಲ್ಲಿ ನೀವು ಕೂಡ ಒಬ್ಬರಾಗುತ್ತೀರಾ. ಕಾಂತಾರ ಸಿನಿಮಾ ವಾಸ್ತವತೆಯ ಅನುಭವ ಆಗಿದ್ದು, ಇಡೀ ಪ್ರಪಂಚಕ್ಕೆ ತಿಳಿಯಬೇಕು..” ಎಂದು ಹೇಳಿದ್ದಾರೆ. ಇದಕ್ಕಿಂತ ಮೊದಲು ಸಿನಿಮಾ ನೋಡಿ ಕೂಡ ಕಂಗನಾ ರನಾವತ್ ಅವರು ಬಹಳ ಎಕ್ಸೈಟ್ ಆಗಿದ್ದರು, ಕುಟುಂಬದ ಜೊತೆಗೆ ಕಾಂತಾರ ಸಿನಿಮಾ ನೋಡಿಬಂದೆ, ಆ ಗುಂಗಿನಿಂದ ಹೊರಬರೋದಕ್ಕೆ ಆಗ್ತಾ ಇಲ್ಲ. ಇನ್ನು ಒಂದು ವಾರ ಬೇಕಾಗಬಹುದು, ಬಾಲಿವುಡ್ ನಲ್ಲಿ ಇಂತಹ ಸಿನಿಮಾಗಳು ಬರುವುದಿಲ್ಲ ಎಂದಿದ್ದರು ಕಂಗನಾ. ಕನ್ನಡ ಸಿನಿಮಾಗೆ ಎಲ್ಲೆಡೆಯಿಂದ ಇಂತಹ ಸಪೋರ್ಟ್ ಸಿಗುತ್ತಿರುವುದು ಸಂತೋಷದ ವಿಚಾರ ಆಗಿದೆ.