ಪುನೀತ್ ಹೆಸರಿನಲ್ಲಿ ಆ್ಯಂಬುಲೆನ್ಸ್ ಸೇವೆ ಆರಂಭಿಸುವುದಾಗಿ ಘೋಷಣೆ ಮಾಡಿದ ಯಶ್: ಭೇಷ್ ಎಂದ ನೆಟ್ಟಿಗರು.

25

Get real time updates directly on you device, subscribe now.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ತಯಾರಿಸಿರುವ ಕೊನೆಯ ಸಿನಿಮಾ ಗಂಧದಗುಡಿ ಸಿನಿಮಾ ಆಕ್ಟೊಬರ್ 28ರಂದು ಬಿಡುಗಡೆ ಆಗಲಿದೆ, ಅದಕ್ಕಿಂತ ಮೊದಲು ಆಕ್ಟೊಬರ್ 21ರಂದು ನಿನ್ನೆ ಸಿನಿಮಾದ ಪ್ರೀರಿಲೀಸ್ ಇವೆಂಟ್ ಬೆಂಗಳೂರಿನಲ್ಲಿ ನಡೆಯಿತು. ನಿನ್ನೆ ನಡೆದ ಕಾರ್ಯಕ್ರಮಕ್ಕೆ, ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದ ಸಾಕಷ್ಟು ಗಣ್ಯವ್ಯಕ್ತಿಗಳು ಬಂದಿದ್ದರು. ನಿನ್ನೆಯ ಕಾರ್ಯಕ್ರಮಕ್ಕೆ ಬರಲು ಸಾಧ್ಯ ಆಗಲಿಲ್ಲ ಎಂದು ಖ್ಯಾತ ನಟರಾದ ಅಮಿತಾಭ್ ಬಚ್ಚನ್ ಅವರು ಮತ್ತು ಕಮಲ್ ಹಾಸನ್ ಅವರು ವಿಡಿಯೋ ಬೈಟ್ ಕಳಿಸಿದ್ದರು.

ನಿನ್ನೆಯ ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರೈ ಅವರು ಸಹ ಬಂದಿದ್ದರು. ಕಾರ್ಯಕ್ರಮದಲ್ಲಿ ಅಪ್ಪು ಅವರು ಇದ್ದಿದ್ದರೆ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ತಿಳಿಸಿದರು, ಬಳಿಕ ಅಪ್ಪು ಅವರ ಸಮಾಜ ಸೇವೆಯ ಕಾರ್ಯಗಳ ಬಗ್ಗೆ ಮಾತನಾಡಿ, ತಮಗೆ ಒಂದು ಆಲೋಚನೆ ಬಂದಿತು, ಅಪ್ಪು ಅವರ ಸಮಾಜಸೇವೆ ಕ್ರಿಯೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಅಪ್ಪು ಎಕ್ಸ್ಪ್ರೆಸ್ ಎನ್ನುವ ಹೆಸರಿನಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಇಡೀ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಶುರು ಮಾಡಬೇಕು ಎಂದು ಯೋಚನೆ ಮಾಡಿದಾಗ, ಮೊದಲು ಬಂದು ಶಿವಣ್ಣ ಅವರ ಬಳಿ ಬಂದು ಮಾತನಾಡಿದಾಗ, ಗೀತಕ್ಕ ಅವರು ಒಂದು ಆಂಬ್ಯುಲೆನ್ಸ್ ಕೊಟ್ಟರು.

ಈ ವಿಷಯ ಗೊತ್ತಾಗಿ ನಟ ಸೂರ್ಯ ಅವರು ಅಪ್ಪು ಅವರು ನಿಮ್ಮೊಬ್ಬರಿಗೆ ಮಾತ್ರವಲ್ಲ ನಮಗೂ ಆಸ್ತಿ ಎಂದು ಹೇಳಿ, ಅವರು ಒಂದು ಆಂಬ್ಯುಲೆನ್ಸ್ ಕೊಟ್ಟರು, ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಗೊತ್ತಾಗಿ ಅವರು ಕೂಡ ಒಂದು ಆಂಬ್ಯುಲೆನ್ಸ್ ನೀಡಿದರು ಎಂದು ಹೇಳಿ, ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಅಪ್ಪು ಎಕ್ಸ್ಪ್ರೆಸ್ ಇರಬೇಕು ಎಂದು ಹೇಳಿದರು. ಅದನ್ನು ಕೇಳಿದ ರಾಕಿಂಗ್ ಸ್ಟಾರ್ ಯಶ್ ಅವರು, ತಮ್ಮ ಯಶೋಮಾರ್ಗ ಸಂಸ್ಥೆಯಿಂದ ಇನ್ನುಳಿದ ಎಲ್ಲಾ ಜಿಲ್ಲೆಗಳಿಗೂ ಅಪ್ಪು ಎಕ್ಸ್ಪ್ರೆಸ್ ಗಾಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಯಶ್ ಅವರು ಅಪ್ಪು ಅಬರ ಮೇಲಿನ ಪ್ರೀತಿಯಿಂದ ನೀಡಿದ ಈ ಮಾತು ಅಪ್ಪು ಅಭಿಮಾನಿಗಳ ಮಂಡೆಸು ಗೆದ್ದಿದೆ. ಯಶ್ ಅವರ ಮಾತಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

Get real time updates directly on you device, subscribe now.