ವಿಶ್ವಕಪ್ ಟೂರ್ನಿಗೂ ಮುನ್ನ ಪಾಕಿಸ್ತಾನ ಬೌಲರ್, ಶಹೀನ್ ಗೆ ಬೌಲಿಂಗ್ ಟಿಪ್ಸ್ ಕೊಟ್ಟ ಭಾರತೀಯ ಬೌಲರ್ ಶಮಿ. ನೆಟ್ಸ್ ನಲ್ಲಿ ಹೇಗಿತ್ತು ಗೊತ್ತೇ ಘಟನೆ.

14

Get real time updates directly on you device, subscribe now.

ಆಕ್ಟೊಬರ್ 23ರಂದು ನಡೆಯಲಿರುವ ಪಾಕಿಸ್ತಾನ್ ವಿರುದ್ಧ ಭಾರತದ ಮೊದಲ ಪಂದ್ಯವನ್ನು ನೋಡಲು ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಬದ್ಧ ವೈರಿಗಳ ನಡುವಿನ ಪಂದ್ಯ ಎಂದರೆ ನಿರೀಕ್ಷೆಗಳು ಹೆಚ್ಚಾಗಿಯೇ ಇರುತ್ತದೆ. ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಅಭ್ಯಾಸ ಪಂದ್ಯಗಳಲ್ಲಿ ನಿರತವಾಗಿದ್ದು, ಪಾಕಿಸ್ತಾನ್ ತಂಡವು ಕೂಡ ಕೊನೆಯ ಕ್ಷಣದ ಅಭ್ಯಾಸ ನಡೆಯತ್ತಿದೆ. 2021ರಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಭಾರತವನ್ನು ಪಾಕಿಸ್ತಾನ್ ಸೋಲಿಸಿತ್ತು, ಇಷ್ಟು ವರ್ಷಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ್ ಗೆ ಇದು ಮೊದಲ ಗೆಲುವಾಗಿತ್ತು.

ಪಾಕಿಸ್ತಾನದ ಈ ಗೆಲುವಿಗೆ ಕಾರಣವಾಗಿದ್ದವರು ಯುವವೇಗಿ ಶಾಹಿನ್ ಶಾ ಅಫ್ರಿದಿ. 22 ವರ್ಷದ ಈ ಯುವ ಆಟಗಾರ, ಭಾರತಡ್ಸ್ ಘಟಾನುಘಟಿಗಳ ವಿಕೆಟ್ಸ್ ಪಡೆದು, ಪಾಕಿಸ್ತಾನದ ಗೆಲುವಿಗೆ ಕಾರಣವಾಗಿದ್ದರು. ಏಷ್ಯಾಕಪ್ ಸಮಯದಲ್ಲಿ ಇಂಜುರಿ ಆಗಿದ್ದ ಕಾರಣ, ಭಾರತದ ವಿರುದ್ಧದ ಮ್ಯಾಚ್ ಗಳಲ್ಲಿ ಅಫ್ರಿದಿ ಅವರು ಕಾಣಿಸಿಕೊಳ್ಳಲಿಲ್ಲ. ಇದೀಗ ವಿಶ್ವಕಪ್ ಪಂದ್ಯಕ್ಕೆ ಮರಳಿ ಬಂದಿದ್ದಾರೆ. ಸೋಮವಾರ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಅಭ್ಯಾಸ ಪಂದ್ಯ ನಡೆಸಿದ ಬಳಿಕ ಬ್ರಿಸ್ಟೆನ್ ನಲ್ಲಿ ನೆಟ್ಸ್ ನಲ್ಲಿ ಅಭ್ಯಾಸ ನಡೆಸಿತು.

ಪಾಕಿಸ್ತಾನ್ ತಂಡ ಸಹ ಅಭ್ಯಾಸ ನಡೆಸುತ್ತಿತ್ತು, ಈ ಸಮಯದಲ್ಲಿ ಶಾಹಿನ್ ಶಾ ಅಫ್ರಿದಿ ಅವರಿಗೆ ನಮ್ಮ ತಂಡದ ಮೊಹಮ್ಮದ್ ಶಮಿ ಅವರು ಬೌಲಿಂಗ್ ಟಿಪ್ಸ್ ನೀಡಿದ್ದಾರೆ. ಆ ಸಮಯದಲ್ಲಿ ಇಬ್ಬರು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಆಸ್ಟ್ರೇಲಿಯಾ ವರ್ಸಸ್ ಭಾರತ ಅಭ್ಯಾಸ ಪಂದ್ಯದಲ್ಲಿ ಶಮಿ ಅವರು ಒಂದೇ ಓವರ್ ನಲ್ಲಿ 3 ವಿಕೆಟ್ಸ್ ಮತ್ತು ಒಂದು ರನ್ ಔಟ್ ಇಂದ ಪಂದ್ಯದ ದಿಕ್ಕನ್ನೇ ಬದಲಿಸಿದರು, ಅಂತಹ ಮೇರು ಆಟಗಾರನಿಂದ, ಅಫ್ರಿದಿ ಅವರು ಟಿಪ್ಸ್ ಪಡೆದಿದ್ದಾರೆ. ಮೊಹಮ್ಮದ್ ಶಮಿ ಅವರು ಅನುಭವಿ ಆಟಗಾರ, ಕಳೆದ ವರ್ಷ ಟಿ20 ವಿಶ್ವಕಪ್ ನಂತರ ಅವರು ಭಾರತದ ಪರವಾಗಿ ಆಡಿರಲಿಲ್ಲ, ಈಗ ಒಳ್ಳೆಯ ಅವಕಾಶ ಪಡೆದುಕೊಂಡು, ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳುತ್ತಿದ್ದಾರೆ.

Get real time updates directly on you device, subscribe now.