ಮನೆಯಲ್ಲಿ ತುಂಬಿ ತುಳುಕುತ್ತದೆ ಹಣ; ನಾಲ್ಕು ರಾಶಿಗಳಿಗೆ ಇನ್ನು ಕಷ್ಟ ಮುಗಿದು ಅದೃಷ್ಟ ಆರಂಭ. ಯಾವ್ಯಾವ ರಾಶಿಗಳಿಗೆ ಗೊತ್ತೇ??

78

Get real time updates directly on you device, subscribe now.

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹವನ್ನು ಸೇನಾಧಿಪತಿ ಎಂದು ಕರೆಯುತ್ತಾರೆ. ಧೈರ್ಯ, ಬಲ, ಮದುವೆ, ಭೂಮಿ ಇದೆಲ್ಲವನ್ನು ಮಂಗಳಗ್ರಹ ಪ್ರತಿನಿಧಿಸುತ್ತದೆ. ಮಂಗಳನ ಕೃಪೆ ಇದ್ದರೆ ವೈವಾಹಿಕ ಜೀವನ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ. ಆಕ್ಟೊಬರ್ 30 ರಂದು ಮಂಗಳ ಗ್ರಹವು ಹಿಮ್ಮುಖ ಚಲನೆ ಶುರುಮಾಡಲಿದ್ದು, ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. ಆದರೆ 4 ರಾಶಿಗಳ ಮೇಲೆ ಮಂಗಳಗ್ರಹದ ಪರಿಣಾಮ ವಿಶೇಷವಾಗಿರಲಿದೆ. ಮಂಗಳ ಗ್ರಹದ ಹಿಮ್ಮುಖ ಚಲನೆ ಇಂದ ಮಹಾಪುರುಷ ರಾಜಯೋಗ ಸಹ ರೂಪುಗೊಳ್ಳುತ್ತದೆ. ಇದರ ವಿಶೇಷ ಫಲ ಪಡೆಯುವ ಆ ನಾಲ್ಕು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಮಹಾಪುರುಷ ರಾಜಯೋಗವು ಈ ರಾಶಿಯವರಿಗೆ ಆರ್ಥಿಕವಾಗಿ ಬಹಳ ಲಾಭ ತರುತ್ತದೆ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತದೆ, ದಿಢೀರ್ ಧನಲಾಭ ಉಂಟಾಗುತ್ತದೆ. ಬ್ಯುಸಿನೆಸ್ ನಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತದೆ. ದೂರದ ಪ್ರಯಾಣ ಮಾಡುವ ಅವಕಾಶ ಬರಬಹುದು, ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ರಾಜಕೀಯದಲ್ಲಿ ಸಕ್ರಿಯರಾಗಿರುವವರು, ದೊಡ್ಡ ಹಂತಕ್ಕೆ ತಲುಪುತ್ತಾರೆ. ಹಿರಿಯರ ಆಸ್ತಿಯಿಂದ ನಿಮಗೆ ಲಾಭ ಸಿಗುತ್ತದೆ.

ಸಿಂಹ ರಾಶಿ :- ಮಹಾಪುರುಷ ರಾಜಯೋಗ ನಿಮ್ಮ ರಾಶಿಯವರಿಗೆ ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿ ಆಗುವ ಹಾಗೆ ಮಾಡುತ್ತದೆ. ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಮತ್ತು ಪ್ರತಿಷ್ಠೆ ಸಿಗುತ್ತದೆ. ಶುರುಮಾಡುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಪಡೆಯುತ್ತೀರಿ. ಉದ್ಯೋಗದಲ್ಲಿ ದೊಡ್ಡ ಮಟ್ಟದಲ್ಲಿ ಏಳಿಗೆ ಕಾಣುತ್ತೀರಿ. ಪರೀಕ್ಷೆಗೆ ಮತ್ತು ಕೆಲಸಕ್ಕಾಗಿ ಸಂದರ್ಶನದಲ್ಲಿ ಪಾಲ್ಗೊಳ್ಳುತ್ತಿರುವವರಿಗೆ ಒಳ್ಳೆಯದಾಗುತ್ತದೆ. ನಿಮ್ಮ ಮನೆಯಲ್ಲಿ ಧಾರ್ಮಿಕ ಅಥವಾ ಒಳ್ಳೆಯ ಕಾರ್ಯಗಳು ನಡೆಯುತ್ತದೆ.

ಕನ್ಯಾ ರಾಶಿ :- ಮಹಾಪುರುಷ ರಾಜಯೋಗ ಈ ರಾಶಿಯವರ ವೃತ್ತಿ ಜೀವನದಲ್ಲಿ ಮತ್ತು ಬ್ಯುಸಿನೆಸ್ ನಲ್ಲಿ ಹೆಚ್ಚು ಯಶಸ್ಸನ್ನು ತಂದುಕೊಡುತ್ತದೆ. ಆಸ್ತಿ ಖರೀದಿ ಮಾಡುವ ಅಥವಾ ಹೊಸ ಕಾರ್ ಖರೀದಿ ಮಾಡುವ ಅವಕಾಶ ನಿಮಗೆ ಸಿಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಹೆಚ್ಚು ಲಾಭ ಪಡೆಯುತ್ತೀರಿ. ಈ ಸಮಯದಲ್ಲಿ ಹೂಡಿಕೆ ಮಾಡುವುದರಿಂದ ಲಾಭ ಬರುತ್ತದೆ. ಕೆಲಸದಲ್ಲಿ ನಿಮ್ಮ ಪ್ರಭಾವ ಜಾಸ್ತಿಯಾಗುತ್ತದೆ.

ಕುಂಭ ರಾಶಿ :- ಮಂಗಳಗ್ರಹ ಮತ್ತು ಮಹಾಪುರುಷ ರಾಜಯೋಗ ಕುಂಭ ರಾಶಿಯವರಿಗೆ ಉತ್ತಮ ಪ್ರತಿಫಲ ನೀಡುತ್ತದೆ. ಕೆಲಸಗಳಲ್ಲಿ ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಯಶಸ್ಸು ಪಡೆಯುತ್ತೀರಿ, ನಿಮ್ಮಲ್ಲಿ ಹುಮ್ಮಸ್ಸು ಸಂತೋಷ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ.

Get real time updates directly on you device, subscribe now.