ಅದೊಂದು ಕಾರಣಕ್ಕೆ ಮೊದಲ ಬಾರಿಗೆ ಬಿಗ್ ಬಾಸ್ ಅನ್ನು ಮಿಸ್ ಮಾಡುತ್ತಾರೆ ಸುದೀಪ್? ವಾರಾಂತ್ಯಕ್ಕೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುವುದಿಲ್ಲವೇ??
ಬಿಗ್ ಬಾಸ್ ಕನ್ನಡ ಶೋಗೆ ಮುಖ್ಯ ಆಧಾರ ಕಿಚ್ಚ ಸುದೀಪ್ ಅವರು ಎಂದು ಹೇಳಬಹುದು. ಹಲವು ಜನರು ವೀಕೆಂಡ್ ನಲ್ಲಿ ಕಿಚ್ಚನ ಪಂಚಾಯಿತಿ ಎಪಿಸೋಡ್ ನೋಡುವ ಸಲುವಾಗಿಯೇ ಕಾಯುತ್ತಿರುತ್ತಾರೆ. ಕನ್ನಡದಲ್ಲಿ ಇಲ್ಲಿಯವರೆಗೂ 8 ಬಿಗ್ ಬಾಸ್ ಸೀಸನ್ ಗಳು ಕಳೆದು 9ನೇ ಸೀಸನ್ ನಡೆಯುತ್ತಿದೆ. ಸುದೀಪ್ ಅವರು ಎಷ್ಟೇ ಬ್ಯುಸಿ ಇದ್ದರು ಕೂಡ ತಪ್ಪಿಸದೆ ಪ್ರತಿ ವೀಕೆಂಡ್ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ಗೆ ಬಂದು ಹೋಗುತ್ತಾರೆ. ಆದರೆ ಈ ವಾರದ ವೀಕೆಂಡ್ ಎಪಿಸೋಡ್ ನಲ್ಲಿ ಸುದೀಪ್ ಅವರು ಬರುವುದು ಡೌಟ್ ಎನ್ನುವ ಮಾತು ಕೇಳಿಬರುತ್ತಿದೆ.
ಕಳೆದ ವಾರ ಬಿಬಿಕೆ9 ಮೂರನೇ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರಿಗೆ ತೀವ್ರವಾಗಿ ಕೋಪ ಬಂದಿತ್ತು. ಅನುಪಮಾ ಅವರು ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಗೆದ್ದಿದ್ದು ಮ್ಯಾಚ್ ಫಿಕ್ಸಿಂಗ್ ಇಂದ ಎಂದು ಗುರೂಜಿ ಹೇಳಿದ ಕಾರಣ ಕಿಚ್ಚ ಸುದೀಪ್ ಅವರು ಗುಡುಗಿದರು. ನನ್ನ ಶೋ ಮರಿಯಾದೆ ತೆಗೆಯಬೇಡಿ, ಮಾತಿನ ಮೀಲ್ ನಿಗಾ ಇರಲಿ. ಫಿಕ್ಸಿಂಗ್ ಅನ್ನೋದಾದರೆ ನೀವು ಹೇಗೆ ಇಲ್ಲಿ ಇರ್ತಾ ಇದ್ರಿ. ನಾವು ಹೆಕೋ ಮಾತನ್ನ ಬಾಯಿ ಮುಚ್ಚಿಕೊಂಡು ಕೇಳಿಸಿಕೊಳ್ಳಬೇಕು. ನಿಮ್ಮ ವಯಸ್ಸಿಗೆ ಮರಿಯಾದೆ ಕೊಡ್ತಾ ಇದ್ದೀನಿ, ಹೀಗೆ ಆದರೆ ನಿಮ್ಮ ನನ್ನ ನಡುವೆ ಯುದ್ಧ ಆಗಬೇಕಾಗುತ್ತೆ ಎಂದು ಹೇಳಿದ್ದರು ಕಿಚ್ಚ.
ಇದಾದ ವಳಿಕ ನಾಲ್ಕನೇ ವಾರದ ವೀಕೆಂಡ್ ಗೆ ಸುದೀಪ್ ಅವರು ಕಾರಣಾಂತರಗಳಿಂದ ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಅಪ್ಪು ಅವರ ಗಂಧದಗುಡಿ ಸಿನಿಮಾ ಪ್ರೇರಿಲಿಸ್ ಇವೆಂಟ್ ಇರುವುದರಿಂದ ಅದರಲ್ಲಿ ಪಾಲ್ಗೊಳ್ಳಲಿರುವ ಸೂರ್ಯ ಅವರು ಈ ವಾರ ವೀಕೆಂಡ್ ಎಪಿಸೋಡ್ ಗೆ ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಗಂಧದಗುಡಿ ಪ್ರೀರಿಲೀಸ್ ಇವೆಂಟ್ ಇರುವುದು ಶುಕ್ರವಾರ, ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ನಡೆಯುವುದು ಶನಿವಾರ. ಹಾಗಾಗಿ ಸುದೀಪ್ ಅವರು ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ಗೆ ಬರದೆ ಇರೋದು ಹೇಗೆ ಸಾಧ್ಯ ಎನ್ನುತ್ತಿದ್ದಾರೆ ಅಭಿಮಾನಿಗಳು. ಈ ವಿಚಾರದ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಆಗಲಿ ಸುದೀಪ್ ಅವರಾಗಲಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಒಟ್ಟಿನಲ್ಲಿ ಏನಾಗುತ್ತದೆ ಎಂದು ತಿಳಿಯಲು ವೀಕೆಂಡ್ ಎಪಿಸೋಡ್ ವರೆಗು ಕಾಯಬೇಕಿದೆ.