ಟೀಮ್ ಇಂಡಿಯಾ ನಿಜವಾಗಲೂ ಸೆಮಿ ಫೈನಲ್ ಪ್ರವೇಶ ಮಾಡುತ್ತದೆಯೇ?? ಅಚ್ಚರಿ ಹೇಳಿಕೆ ನೀಡಿದ ಕಪಿಲ್ ದೇವ್ ಹೇಳಿದ್ದೇನು ಗೊತ್ತೇ??
ಈಗ ಎಲ್ಲೆಡೆ ಟಿ20 ವಿಶ್ವಕಪ್ ನ ಫೀವರ್ ಶುರುವಾಗಿದೆ. ಈ ಶನಿವಾರದಿಂದ ಸೂಪರ್ 12 ಹಂತದ ಪಂದ್ಯಗಳು ನಡೆಯುತ್ತಿದ್ದು, ಭಾರತ ತಂಡದ ಮೊದಲ ಪಂದ್ಯ ಪಾಕಿಸ್ತಾನ್ ವಿರುದ್ಧ ಇರಲಿದೆ. ಈ ಪಂದ್ಯಕ್ಕಾಗಿ ಎಲ್ಲರೂ ಕಾಯುತ್ತಲಿದ್ದಾರೆ. ಭಾರತ ತಂಡದ ಆಸ್ಟ್ರೇಲಿಯಾದಲ್ಲಿ ಸತತವಾಗಿ ಅಭ್ಯಾಸ ಮಾಡುತ್ತಿದ್ದು, ಎಲ್ಲರ ಬಾಯಲ್ಲಿ ಈಗ ಸೆಮಿಫೈನರ್ ತಲುಪುವ ತಂಡ ಯಾವುದು ಯಾವ ತಂಡ ವಿಶ್ವಕಪ್ ಗೆಲ್ಲಬಹುದು ಎನ್ನುವ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ಅವರು ಸಹ ಸೆಮಿಫೈನಲ್ ತಲುಪಬಹುದಾದ 4 ತಂಡಗಳನ್ನು ಹೆಸರಿಸಿದರು.
ಸಚಿನ್ ಅವರ ಪ್ರಕಾರ, ಭಾರತ, ಪಾಕಿಸ್ತಾನ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್ ತಲುಪಬಹುದು ಎಂದಿದ್ದರು. ಭಾರತದ ಮತ್ತೊಬ್ಬ ಹಿರಿಯ ಆಟಗಾರ ಕಪಿಲ್ ದೇವ್ ಅವರು, ಭಾರತ ಸೆಮಿಫೈನಲ್ ತಲುಪುವುದು ಕಷ್ಟ ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. “ಟಿ20 ಪಂದ್ಯಗಳಲ್ಲಿ ಫಲಿತಾಂಶ ಏನಾಗುತ್ತದೆ ಎಂದು ಹೇಳುವುದು ಕಷ್ಟ. ಒಂದು ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ತಂಡ ಮುಂದಿನ ಪಂದ್ಯದಲ್ಲಿ ಸೋಲಬಹುದು. ಅದರಿಂದ ಫಲಿತಾಂಶ ಏನು ಬೇಕಾದರೂ ಆಗಬಹುದು. ಭಾರತ ತಂಡ ಸೆಮಿಫೈನಲ್ ತಲುಪುವ ಸಾಧ್ಯತೆ ಶೇ.30ರಷ್ಟು ಮಾತ್ರ ಇದೆ” ಎಂದು ಹೇಳಿದ್ದಾರೆ ಕಪಿಲ್ ದೇವ್.

“ಟೀಮ್ ಇಂಡಿಯಾ ಸೆಮಿಫೈನಲ್ ಗೆ ಬಂದರಷ್ಟೇ ವಿಶ್ವಕಪ್ ಗೆಲ್ಲುತ್ತಾ ಎನ್ನುವ ಬಗ್ಗೆ ಚರ್ಚೆ ಮಾಡಬಹುದು. ನನ್ನ ಪ್ರಕಾರ, ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವ ಸಾಧ್ಯತೆ ಶೇ.30 ರಷ್ಟು ಮಾತ್ರವಿದೆ. ಇದರಿಂದಾಗಿ ಟೀಮ್ ಇಂಡಿಯಾ ಈ ಸಾರಿ ವಿಶ್ವಕಪ್ ಗೆಲ್ಲುವುದು ಕಷ್ಟ” ಎಂದು ಕಪಿಲ್ ದೇವ್ ಅವರು ಭವಿಷ್ಯ ನುಡಿದಿದ್ದಾರೆ. ಎಲ್ಲರೂ ಭಾರತ ತಂಡ ಈ ವರ್ಷ ಅದ್ಭುತವಾಗಿದೆ, ಬಲಿಷ್ಠವಾಗಿದೆ ಎಂದು ಹೇಳಿಕೆ ಕೊಡುತ್ತಿರುವಾಗ, ಕಪಿಲ್ ದೇವ್ ಅವರು ನೀಡಿರುವ ಈ ಹೇಳಿಕೆ ಸಂಚಲನ ಸೃಷ್ಟಿಸಿದೆ. ಸೂಪರ್ 12 ಹಂತದಲ್ಲಿ ಭಾರತ ತಂಡ 5 ಪಂದ್ಯಗಳನ್ನಾಡಲಿದ್ದು, ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.