ಬಿಗ್ ನ್ಯೂಸ್: ಪಾಕ್ ವಿರುದ್ದದ ಪಂದ್ಯಕ್ಕೆ ನಾಲ್ಕು ಆಟಗಾರರಿಗೆ ಚಾನ್ಸ್ ಸಿಗುವುದು ಡೌಟ್. ಯಾರೆಲ್ಲ ಅವಕಾಶ ಪಡೆಯಲಿದ್ದಾರೆ ಗೊತ್ತೇ??

17

Get real time updates directly on you device, subscribe now.

ಆಕ್ಟೊಬರ್ 23ರಂದು ಮಧ್ಯಾಹ್ನ 1:30 ರಿಂದ ವಿಶ್ವಕಪ್ ನಲ್ಲಿ ಸೂಪರ್ 12ರ ಹಂತದ ಭಾರತ ವರ್ಸಸ್ ಪಾಕಿಸ್ತಾನ್ ಪಂದ್ಯ ನಡೆಯಲಿದೆ. ಎರಡು ತಂಡಕ್ಕೂ ಇದು ಮೊದಲ ಪಂದ್ಯ ಆಗಿರುವುದರಿಂದ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಬಾಬರ್ ಅಜಂ ಇಬ್ಬರು ಸಹ ಗೆಲ್ಲಬೇಕು ಎಂದು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ದುಬೈನಲ್ಲಿ ನಡೆದ ವಿಶ್ವಕಪ್ ನಲ್ಲಿ ಭಾರತವನ್ನು ಪಾಕಿಸ್ತಾನ್ 10 ವಿಕೆಟ್ ಗಳಿಂದ ಸೋಲಿಸಿತ್ತು. ಇದು ಭಾರತದ ವಿರುದ್ದ ಪಾಕಿಸ್ತಾನ್ ಗೆ ಮೊದಲ ಜಯ ಆಗಿತ್ತು.

ಅದೇ ಇತಿಹಾಸ ಮರುಕಳಿಸಬಾರರು ಎಂದು ಭಾರತ ತಂಡವು ಅಭ್ಯಾಸ ಮಾಡುತ್ತಿದೆ. ಆಕ್ಟೊಬರ್ 23ತಂದು ನಡೆಯುವ ಪಂದ್ಯಕ್ಕೆ ಈಗಾಗಲೇ ಪ್ಲೇಯಿಂಗ್ 11 ಬಹುತೇಕ ನಿರ್ಣಯ ಆಗಿದೆ ಎಂದು ಕ್ಯಾಪ್ಟನ್ ರೋಹಿತ್ ಶರ್ಮಾ ತಿಳಿಸಿದ್ದಾರೆ. ಹಾಗಿದ್ದಲ್ಲಿ ತಂಡದಲ್ಲಿ ಅವಕಾಶ ಪಡೆಯಲು ಕಷ್ಟ ಎನ್ನಬಹುದಾದ ನಾಲ್ವರು ಆಟಗಾರರು ಯಾರ್ಯಾರು ಎಂದು ಇಂದು ನಿಮಗೆ ತಿಳಿಸುತ್ತೇವೆ..

ಹರ್ಷಲ್ ಪಟೇಲ್ :- ಪ್ರಸ್ತುತ ಭಾರತ ತಂಡದಲ್ಲಿ ಮೂವರು ಉತ್ತಮ ಪ್ರದರ್ಶನ ನೀಡುವ ವೇಗಿಗಳಿದ್ದಾರೆ, ಆಲ್ ರೌಂಡರ್ ಆಗಿ ವಿಕೆಟ್ಸ್ ಪಡೆಯುವ ಸಾಮರ್ಥ್ಯ ಇರುವ ಫಿನಿಷರ್ ಹಾರ್ದಿಕ್ ಪಾಂಡ್ಯ ಅವರು, ಪವರ್ ಪ್ಲೇ ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುವ ಭುವನೇಶ್ವರ್ ಕುಮಾರ್ ಅವರು, ಡೆತ್ ಓವರ್ ನಲ್ಲಿ ಅದ್ಬುತ ಪ್ರದರ್ಶನ ನೀಡುವ ಅರ್ಷದೀಪ್ ಸಿಂಗ್ ಅವರು, ಓವರ್ ಯಾವುದೇ ಆಗಿರಲಿ ಅದ್ಭುತ ಪ್ರದರ್ಶನ ನೀಡುವ ಮೊಹಮ್ಮದ್ ಶಮಿ ಅವರು, ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶಮಿ ಅವರು 19ನೇ ಒಂದೇ ಓವರ್ ನಲ್ಲಿ ಬೌಲಿಂಗ್ ಮಾಡಿ 3 ವಿಕೆಟ್ಸ್ ಪಡೆದದ್ದನ್ನು ಈಗಾಗಲೇ ನೋಡಿದ್ದೇವೆ.

ರಿಷಬ್ ಪಂತ್ :- ಇವರಿಗೆ ತಂಡದ ಕಡೆಯಿಂದ ಸಾಕಷ್ಟು ಅವಕಾಶಗಳು ಸಿಕ್ಕರು ಸಹ, ಅದನ್ನು ಉಪಯೋಗಿಸಿಕೊಳ್ಳಲಿಲ್ಲ. ಮಿಡ್ಲ್ ಆರ್ಡರ್ ನಲ್ಲಿ ರಿಷಬ್ ಅವರು ರನ್ ಗಳಿಸಲು ಸಾಧ್ಯವಾಗಲಿಲ್ಲ ಎಂದು ಕೆಲವು ಪಂದ್ಯಗಳಲ್ಲಿ ಅವರನ್ನು ಓಪನರ್ ಆಗಿ ಅವಕಾಶ ನೀಡಲಾಯಿತು. ಆದರೆ ಅಲ್ಲಿ ಕೂಡ ರನ್ ಗಳಿಸದೆ ವಿಫಲರಾದರು ರಿಷಬ್. ಹಾಗಾಗಿ ಇವರ ಬದಲಾಗಿ ದಿನೇಶ್ ಕಾರ್ತಿಕ್ ಅವರಿಗೆ ಪ್ರಾಮುಖ್ಯತೆ ನೀಡುವ ಸಾಧ್ಯತೆ ಹೆಚ್ಚಿದೆ. ರಿಷಬ್ ಅವರು ಬೆಂಚ್ ಕಾಯುವ ಜಾಗೆ ಆಗಿ, ದಿನೇಶ್ ಕಾರ್ತಿಕ್ ಅವರು ಫೀಲ್ಡಿಂಗ್ ಮಾಡಬಹುದು. ಇದರ್ಸ್ ಜೊತೆಗೆ ರಿಷಬ್ ಅವರಿಗೆ ಮೊಣಕಾಲಿನ ಸಮಸ್ಯೆ ಇರಬಹುದು ಎನ್ನುವ ಅನುಮಾನ ಕೂಡ ಕ್ರಿಕೆಟ್ ಅಭಿಮಾನಿಗಳಲ್ಲಿ ಇದೆ.

ದೀಪಕ್ ಹೂಡಾ :- ಪ್ರಸ್ತುತ ಭಾರತ ತಂಡದಲ್ಲಿ ದೀಪಕ್ ಹೂಡಾ ಅವರು ಉತ್ತಮವಾದ ಫಾರ್ಮ್ ನಲ್ಲಿದ್ದರು ಸಹ ಅವರಿಗೆ ಪ್ಲೇಯಿಂಗ್ 11 ನಲ್ಲಿ ಅವಕಾಶ ಸಿಗುವುದು ಕಷ್ಟವಾಗಿದೆ. ಏಕೆಂದರೆ ತಂಡದಲ್ಲಿ ಈಗ ಪ್ಲೇಯಿಂಗ್ 11 ನಲ್ಲಿ ಅದ್ಭುತವಾದ ಬ್ಯಾಟ್ಸ್ಮನ್ ಗಲ್ ಲೈನಪ್ ಇದೆ. ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೋಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್, 6 ಸ್ಥಾನಗಳಲ್ಲಿ ಇವರು ಇರುವುದರಿಂದ ದೀಪಕ್ ಹೂಡಾ ಅವರಿಗೆ ಪ್ಲೇಯಿಂಗ್ 11 ನಲ್ಲಿ ಸ್ಥಾನ ಸಿಗುವುದು ಡೌಟ್ ಆಗಿದೆ.

ರವಿಚಂದ್ರನ್ ಅಶ್ವಿನ್ :- ಇವರಿಗೂ ಕೂಡ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಇಬ್ಬರು ಸಹ ಸ್ಪಿನ್ ಬೌಲಿಂಗ್ ಆಲ್ ರೌಂಡರ್ ಆಗಿದ್ದಾರೆ. ಅಶ್ವಿನ್ ಅವರಿಗೆ ಹೋಲಿಕೆ ಮಾಡಿದರೆ, ಅಕ್ಷರ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ, ಅಕ್ಷರ್ ಅವರು ತುರ್ತು ಸಮಯದಲ್ಲಿ ವಿಕೆಟ್ಸ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಇದರಿಂದ ಅಕ್ಷರ್ ಅವರಿಗೆ ಪ್ಲೇಯಿಂಗ್ 11 ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.

Get real time updates directly on you device, subscribe now.