ದೀಪಾವಳಿ ದಿನ ಈ ಪ್ರಾಣಿಗಳನ್ನು ನೋಡಿದರೆ ಏನಾಗುತ್ತದೆ ಎಂದು ತಿಳಿದರೆ, ಹಬ್ಬದ ದಿನ ಬೆಳಗ್ಗೆ ಎದ್ದು ಹುಡುಕಿಕೊಂಡು ಹೊರಡುತ್ತೀರಾ. ಏನಾಗುತ್ತದೆ ಅಂತೇ ಗೊತ್ತೇ??
ನಮ್ಮ ಹಿಂದೂ ಸಂಪ್ರದಾಯದಲ್ಲಿ ದೀಪಾವಳಿ ಹಬ್ಬ ಬಹಳ ವಿಶೇಷವಾದದ್ದು ಈ ಹಬ್ಬಕ್ಕೆ ವಿಶೇಷವಾದ ಮಹತ್ವ ಇದೆ. ಲಕ್ಷ್ಮೀದೇವಿಯ ಕೃಪೆ ಪಡೆಯಲು ಈ ಹಬ್ಬದಂದು ಲಕ್ಷ್ಮೀದೇವಿಗೆ ವಿಶೇಷವಾಗಿ ಪೂಜೆ ಮಾಡಿ, ಆಶೀರ್ವಾದ ಪಡೆಯಲಾಗುತ್ತದೆ. ಈ ವಿಶೇಷವಾದ ಹಬ್ಬದ ದಿನ ಕೆಲವು ಪ್ರಾಣಿಗಳನ್ನು ನೀವು ನೋಡಿದರೆ, ನಿಮ್ಮ ಅದೃಷ್ಟವೇ ಬದಲಾಗುತ್ತದೆ. ಎಲ್ಲಾ ಒಳ್ಳೆಯದು ನಿಮಗೆ ಸಿಗುತ್ತದೆ. ಹಾಗಿದ್ದರೆ ಆ ನಾಲ್ಕು ಪ್ರಾಣಿಗಳು ಯಾವುವು, ಅವುಗಳ ವಿಶೇಷತೆ ಏನು ಎಂದು ತಿಳಿಸುತ್ತೇವೆ ನೋಡಿ..
ಬೆಕ್ಕು :- ದೀಪಾವಳಿ ಹಬ್ಬದ ದಿನ ನಿಮ್ಮ ಕಣ್ಣಿಗೆ ಬೆಕ್ಕು ಕಾಣಿಸಿಕೊಂಡರೆ ಅದನ್ನು ಶುಭ ಸಂಕೇತ ಎಂದು ಕರೆಯಲಾಗುತ್ತದೆ. ಇದರಿಂದಾಗಿ ಲಕ್ಷ್ಮೀದೇವಿಯ ಕೃಪೆ ಸದಾ ನಿಮ್ಮ ಮನೆಯ ಮೇಲೆ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಳಿದುಬಂದಿದೆ.
ಹಲ್ಲಿ :- ಹಲವರು ಹಲ್ಲಿಯನ್ನು ನೋಡಿ ಭಯ ಪಡುತ್ತಾರೆ, ಮನೆಗಳಲ್ಲಿ ಹಲ್ಲಿಯಿಂದ ತೊಂದರೆಗೆ ಒಳಗಾಗುವವರು ಸಹ ಇದ್ದಾರೆ. ಆದರೆ ದೀಪಾವಳಿ ಹಬ್ಬದ ದಿನ ಹಲ್ಲಿ ಕಾಣಿಸಿಕೊಂಡರೆ ತುಂಬಾ ಒಳ್ಳೆಯ ಫಲ ನೀಡುತ್ತದೆ ಎಂದು ಹೇಳುತ್ತಾರೆ. ಹಲ್ಲಿಯ ನೋಟವು ಲಕ್ಷ್ಮೀದೇವಿಯ ಖುಷಿಯನ್ನು ಸೂಚಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಗೂಬೆ :- ಸಾಮಾನ್ಯವಾಗಿ ಗೂಬೆಯನ್ನು ಯಾರು ಕೂಡ ಇಷ್ಟಪಡುವುದಿಲ್ಲ. ಆದರೆ ಗೂಬೆಯನ್ನು ಲಕ್ಷ್ಮೀದೇವಿಯ ವಾಹನ ಎಂದು ಪರಿಗಣಿಸಲಾಗುತ್ತದೆ. ಗೂಬೆ ಕಾಣಿಸಿಕೊಂಡರೆ, ಒಳ್ಳೆಯದು ಎಂದು ಹೇಳುತ್ತಾರೆ. ದೀಪಾವಳಿ ಹಬ್ಬದ ದಿನ ನಿಮ್ಮ ಕಣ್ಣಿಗೆ ಗೂಬೆ ಕಾಣಿಸಿಕೊಂಡರೆ, ಜೀವನದಲ್ಲಿ ಅದೃಷ್ಟ ಶುರುವಾಗುತ್ತದೆ ಎಂದು ಅರ್ಥ. ದೀಪಾವಳಿ ಹಬ್ಬವನ್ನು ಗೂಬೆಯ ದರ್ಶನ ಪಡೆಯುವುದು, ಎಲ್ಲಕ್ಕಿಂತ ಹೆಚ್ಚು ಅದೃಷ್ಟ ಎನ್ನಲಾಗುತ್ತದೆ.
ಹಸು :- ನಮ್ಮ ಹಿಂದೂ ಧರ್ಮದಲ್ಲಿ ತಿಳಿಸಿರುವ ಪ್ರಕಾರ, ದೀಪಾವಳಿ ಹಬ್ಬದ ದಿನ ಕೇಸರಿ ಬಣ್ಣದ ಹಸುವನ್ನು ನೋಡಿದರೆ ಅದೃಷ್ಟ ಬದಲಾಗುತ್ತದೆ ಎಂದು ಹೇಳುತ್ತಾರೆ. ನಮ್ಮ ಧರ್ಮದಲ್ಲಿ ಹಸುವನ್ನು ತಾಯಿಗೆ ಹೋಲಿಕೆ ಮಾಡುತ್ತಾರೆ. ಹಾಗಾಗಿ ಹಬ್ಬದ ದಿನ ಹಸುವನ್ನು ನೋಡಿದರೆ, ನಿಮ್ಮ ಮನೆಯಲ್ಲಿ ಸಮೃದ್ಧಿ ಮತ್ತು ಸಂಪತ್ತು ಹೆಚ್ಚಾಗುತ್ತದೆ.