ಟಿಆರ್ಪಿ ಗಾಗಿ ಹೊಸ ಸ್ಟಾರ್ ಎಂಟ್ರಿ: ಹೊಸ ಚೆಲುವೆ ಎಂಟ್ರಿ ನೋಡಿ ಸುಸ್ತಾದ ಬಿಗ್ ಬಾಸ್ ಹುಡುಗರು. ಮನೆಗೆ ಬಂದಿದ್ದು ಯಾರು ಗೊತ್ತೇ??
ಬಿಗ್ ಬಾಸ್ ಕನ್ನಡ ಸೀಸನ್ 9 ಈಗ ಮೂರನೇ ವಾರ ಮುಗಿಸಿ, ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದಾರೆ. ಇಷ್ಟು ವಾರಗಳ ಕಾಲ ಮನೆಯಲ್ಲಿ ಹಲವು ರೀತಿಯ ಘಟನೆಗಳು ನಡೆದಿವೆ, ಮನರಂಜನೆ, ಜಗಳ ಕದನ ಇದೆಲ್ಲವೂ ನಡೆದಿದೆ. ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಅವರ ನಡುವೆ ಕನ್ನಡ ಭಾಷೆಯ ವಿಚಾರಕ್ಕೆ ಆಗಾಗ ಜಗಳಗಳು ನಡೆಯುತ್ತಲೇ ಇರುತ್ತದೆ. ಇಬ್ಬರು ವಾದ ವಿವಾದಕ್ಕೆ ಇಳಿಯುತ್ತಾರೆ. ಮನೆಯೊಳಗೆ ಇರುವ ಬೇರೆ ಸ್ಪರ್ಧಿಗಳ ನಡುವೆ ಕೂಡ ಕೋಲ್ಡ್ ವಾರ್ ಗಳು ನಡೆಯುತ್ತಿವೆ.
ಇತ್ತ ಕೆಲವು ಸ್ಪರ್ಧಿಗಳ ನಡುವೆ ಆತ್ಮೀಯತೆ ಸಹ ಬೆಳೆಯುತ್ತಿದೆ, ದೀಪಿಕಾ ದಾಸ್ ಮತ್ತು ಮಯೂರಿ ಅವರು ಒಳ್ಳೆಯ ಫ್ರೆಂಡ್ಸ್ ಆಗುತ್ತಿದ್ದಾರೆ, ದಿವ್ಯ ಉರುಡುಗ ಮತ್ತು ಅಮೂಲ್ಯ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆಯುತ್ತಿದೆ, ರಾಕೇಶ್ ಮತ್ತು ಅಮೂಲ್ಯ ನಡುವೆ ಕೂಡ ಕ್ಯೂಟ್ ಆದ ಮಾತುಕತೆ ಶುರುವಾಗಿ, ಇವರಿಬ್ಬರ ಫ್ಯಾನ್ ಪೇಜ್ ಶುರು ಮಾಡಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಹೀಗೆ ಒಂದಷ್ಟು ಸದಸ್ಯರಿಂದ ಕಂಟೆಂಟ್ ಸಿಗುತ್ತಿದ್ದರು ಸಹ, ಬಿಗ್ ಬಾಸ್ ಮನೆಯಲ್ಲಿ ಒಂದು ಸ್ಪಾರ್ಕ್ ಮಿಸ್ ಆಗುತ್ತಿದೆ ಎನ್ನುವ ಭಾವನೆ ಇದೆ. ಹಾಗಾಗಿ ವೈಲ್ಡ್ ಕಾರ್ಡ್ ಕಂಟೆಸ್ಟಂಟ್ ಅನ್ನು ಮನೆಗೆ ಕಳಿಸುವ ಪ್ಲಾನ್ ಮಾಡಿಕೊಂಡಿದೆ ಬಿಗ್ ಬಾಸ್ ತಂಡ.
ವೈಲ್ಡ್ ಕಾರ್ಡ್ ಕಂಟೆಸ್ಟಂಟ್ ಆಗಿ ಮನೆಗೆ ಹೋಗುವುದು ಸೋನು ಗೌಡ ಎಂದು ಹೇಳಲಾಗುತ್ತಿದೆ. ಓಟಿಟಿ ಸೀಸನ್ ನಲ್ಲಿ ಸೋನು ಗೌಡ ಅವರು ಕಂಟೆಂಟ್ ಕ್ವೀನ್ ಎಂದೇ ಖ್ಯಾತಿ ಪಡೆದಿದ್ದರು. ಬಹಳಷ್ಟು ವಿಚಾರಗಳಿಂದ ಸೋನು ಸುದ್ದಿಯಾಗುತ್ತಿದ್ದರು, ಸೋನು ಹೇಳುವ ಬಹಳಷ್ಟು ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿ ವೈರಲ್ ಆಗುತ್ತಿದ್ದವು. ಸೋನು ಅವರ ನೇರನಡೆ ಸ್ವಭಾವ ಅವರಾಡುವ ಮಾತುಗಳು ವೀಕ್ಷಕರಿಗೆ ಇಷ್ಟ ಆಗದೆ ಇದ್ದರು ಸಹ, ಅವುಗಳ ಬಗ್ಗೆ ಚರ್ಚೆ ಅಂತೂ ನಡೆಯುತ್ತಲೇ ಇರುತ್ತಿತ್ತು, ಹಾಗಾಗಿ ಸೋನು ಶ್ರೀನಿವಾಸ್ ಗೌಡ ಅವರನ್ನು ವೈಲ್ಡ್ ಕಾರ್ಡ್ ಕಂಟೆಸ್ಟಂಟ್ ಆಗಿ ಬಿಗ್ ಬಾಸ್ ಮನೆಯೊಳಗೆ ಕಳಿಸಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.