ದೇಶವೇ ತಿರುಗಿ ನೋಡುವಂತೆ ಮಾಡಿರುವ ಕಾಂತಾರ ಸಿನೆಮಾಗೆ ಟೈಟಲ್ ಕೊಟ್ಟವರು ಯಾರು ಗೊತ್ತೇ?? ರಿಷಬ್ ಅಲ್ಲ, ಮತ್ಯಾರು ಗೊತ್ತೇ??
ಕಾಂತಾರ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತಿದೆ ಎಂದು ನಮಗೆಲ್ಲ ಗೊತ್ತಿದೆ. ರಿಷಬ್ ಶೆಟ್ಟಿ ಅವರ ಈ ಅದ್ಭುತ ಪ್ರಯತ್ನ ಕನ್ನಡ ಚಿತ್ರರಂಗವನ್ನು ನೆಕ್ಸ್ಟ್ ಲೆವೆಲ್ ಗೆ ಕರೆದುಕೊಂಡು ಹೋಗಿದೆ. ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾ ಕರ್ನಾಟಕದ ಪ್ರಾಂತ್ಯದ ಕಥೆ ಆಗಿರುವ ಕಾರಣ, ಕನ್ನಡದಲ್ಲಿ ಮಾತ್ರ ವಿಶ್ವದ ಎಲ್ಲಾ ಕಡೆ ಬಿಡುಗಡೆ ಮಾಡಿದ್ದರು, ಆದರೆ ಸಿನಿಮಾದ ಯಶಸ್ಸು ಎಷ್ಟರ ಮಟ್ಟಿಗೆ ಸಾಗಿತು ಎಂದರೆ, ಬೇರೆ ಭಾಷೆಯವರೆ ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಲೇಬೇಕು ಎಂದು ಡಿಮ್ಯಾಂಡ್ ಮಾಡಿ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಡಬ್ ಆಗಿದ್ದು, ಆ ಭಾಷೆಯಲ್ಲೂ ಅದ್ಭುತ ರೆಸ್ಪಾನ್ಸ್ ಪಡೆಯುತ್ತಿದೆ.
ಕಲೆಕ್ಷನ್ ವಿಚಾರದಲ್ಲಿ ಕೂಡ ಕಾಂತಾರ ಸಿನಿಮಾ ಮುಂದಿದೆ, ಕನ್ನಡದಲ್ಲೇ 65 ಕೋಟಿಗಿಂತ ಹೆಚ್ಚು ಹಣ ಕಲೆಕ್ಷನ್ ಮಾಡಿದ್ದು, ದಿನದಿಂದ ದಿನಕ್ಕೆ ಕಾಂತಾರ ಸಿನಿಮಾದ ಹಣಗಳಿಕೆ ಮತ್ತು ಶೋಗಳು ಹಾಗು ಜನರ ಬರುವಿಕೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆ ಅಂತೂ ಆಗಿಲ್ಲ. ಈಗಾಗಲೇ ಕಾಂತಾರ ಸಿನಿಮಾ 100 ಕೋಟಿ ಹಣಗಳಿಕೆ ಮಾಡಿ, 200ಕೋಟಿಯತ್ತ ಮುನ್ನುಗ್ಗುತ್ತಿದೆ. ಕಾಂತಾರ ಸಿನಿಮಾದ ಮುಖ್ಯ ಆಕರ್ಷಣೆ ಸಿನಿಮಾದ ಟೈಟಲ್ ಎಂದು ಹೇಳಬಹುದು. ಕಾಂತಾರ ಎನ್ನುವ ಆ ಹೆಸರೇ ಜನರನ್ನು ಸೆಳೆಯುವ ಹಾಗಿದೆ. ಕಾಂತಾರ ಎಂದರೆ ಕಾಡು ಎಂದು ಅರ್ಥ. ಈ ಸಿನಿಮಾದಲ್ಲಿ ಕಾಡು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.
ದೈವ ಸಿಗುವುದು, ದೈವ ಕಾಣೆಯಾಗುವುದು, ಶಿವ ಬಚ್ಚಿಟ್ಟುಕೊಳ್ಳುವುದು, ಶಿವನಿಗೆ ದೈವನುಡಿ ಅರ್ಥ ಆಗುವುದು, ಎಲ್ಲವೂ ಸಹ ಕಾಡಿನಲ್ಲಿಯೇ. ಹಾಗಾಗಿ ಕಾಂತಾರ ಎಂದು ಹೆಸರಿಡಲಾಗಿದೆ. ಈ ಹೆಸರನ್ನು ಸೂಚಿಸಿದವರು ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ, ರಿಷಬ್ ಶೆಟ್ಟಿ ಅವರು ಸೂಚಿಸಿದ ಹೆಸರು ಇದಲ್ಲ. ಸಿನಿಮಾಗೆ ಟೈಟಲ್ ಸೂಚಿಸಿ ಎಂದು ರಿಷಬ್ ಅವರು ರಾಜ್ ಬಿ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಅವರ ಬಳಿ ಕೇಳಿದ್ದರಂತೆ, ಆಗ ರಾಜ್ ಬಿ ಶೆಟ್ಟಿ ಅವರು ಕಾಂತಾರ ಎಂದು, ರಕ್ಷಿತ್ ಶೆಟ್ಟಿ ಅವರು ಒಂದು ದಂತಕಥೆ ಎಂದು ಹೇಳಿದ್ದರಂತೆ. ಬಹಳ ದಿನಗಳು ಯೋಚಿಸಿ, ರಿಷಬ್ ಶೆಟ್ಟಿ ಅವರು ಕಾಂತಾರ ಎಂದು ಟೈಟಲ್ ಇಟ್ಟು, ಒಂದು ದಂತಕಥೆ ಎಂದು ಟ್ಯಾಗ್ ಲೈನ್ ಇಟ್ಟರಂತೆ. ಈ ರೀತಿ ಆಯ್ಕೆಯಾದ ಟೈಟಲ್ ಕಾಂತಾರ.