ಈ ಭಾರತೀಯನೆ ವಿಶ್ವಶ್ರೇಷ್ಠ ಆಟಗಾರ ಎಂದ ಡೇವಿಡ್ ವಾರ್ನರ್; ಕೊಹ್ಲಿ ಅಲ್ಲವಂತೆ ಮತ್ಯಾರು ಗೊತ್ತೇ??

27

Get real time updates directly on you device, subscribe now.

ಟಿ20 ವಿಶ್ವಕಪ್ ಪಂದ್ಯಗಳು ಪಂದ್ಯಗಳು ಆಸ್ಟ್ರೇಲಿಯಾದಲ್ಲಿ ನಡೆಯುವುದರಿಂದ ಆಸ್ಟ್ರೇಲಿಯಾ ತಂಡಕ್ಕೆ ಅಲ್ಲಿನ ಪಿಚ್ ಬಗ್ಗೆ ಚೆನ್ನಾಗಿ ಗೊತ್ತಿರುವ ಕಾರಣ ಅವರು ಮೇಲುಗೈ ಸಾಧಿಸುವುದರಲ್ಲಿ ಯಾವುದೇ ಸಂಶಯ ಇಲ್ಲ. ಆಸ್ಟ್ರೇಲಿಯಾ ತಂಡವು ಇದುವರೆಗೂ ಆಡಿರುವ ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಪ್ರಾಬಲ್ಯ ಸಾಧಿಸುತ್ತಾ ಬಂದಿವೆ. ಈಗ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದಲ್ಲಿ ಗೆದ್ದ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದೆ.

ಈ ಸಂತೋಷದಲ್ಲಿದೆ ಆಸ್ಟ್ರೇಲಿಯಾ ತಂಡ, ಈ ಸರಣಿ ಮುಗಿದ ಬಳಿಕ, ಆಸ್ಟ್ರೇಲಿಯಾ ತಂಡದ ಬಲಿಷ್ಠ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಅವರು ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇಂಡೀಸ್ ವಿರುದ್ಧದ ಸರಣಿವ ಎರಡನೇ ಪಂದ್ಯದಲ್ಲಿ ವಾರ್ನರ್ ಅವರು 41 ಎಸೆತಗಳಲ್ಲಿ ಭರ್ಜರಿಯಾಗಿ 75 ರನ್ ಭಾರಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಇಲ್ಲಿ 3 ಸಿಕ್ಸರ್ ಮತ್ತು ಬೌಂಡರಿ ಭಾರಿಸಿದ್ದರು. ಇಂತಹ ಇನ್ನಿಂಗ್ಸ್ ಇಂದ ವಾರ್ನರ್ ಅವರು ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದು, ಇದನ್ನು ಸೇರಿಸಿ ಈವರೆಗೂ ಟಿ20 ಮಾದರಿ ಪಂದ್ಯದಲ್ಲಿ 11 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ ವಾರ್ನರ್. ಆದರೆ ಅತಿಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ಆಟಗಾರನ ಸ್ಥಾನದಲ್ಲಿ ಇರುವುದು ರೋಹಿತ್ ಶರ್ಮಾ ಅವರು.

ಇದುವರೆಗೂ ರೋಹಿತ್ ಶರ್ಮಾ ಅವರು 12 ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ಶಾಹಿದ್ ಅಫ್ರಿದಿ, ಡೇವಿಡ್ ವಾರ್ನರ್ ಮತ್ತು ಮೊಹಮ್ಮದ್ ಹಫೀಜ್ ಮೂವರು ಸಹ 11 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. 10 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮಾರ್ಟಿನ್ ಗಪ್ಟಿಲ್ ಮತ್ತು ಕ್ರಿಸ್ ಗೇಲ್ ಅವರು 3ನೇ ಸ್ತಾನದಲ್ಲಿದ್ದಾರೆ. ರೋಹಿತ್ ಅವರಿಗೆ ಸರಿಸಮನಾಗಲು ವಾರ್ನರ್ ಅವರು ಇನ್ನೊಂದು ಹೆಜ್ಜೆ ದೂರದಲಿದ್ದಾರೆ. ರೋಹಿತ್ ಅವರು ಅತಿಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ಅತ್ಯುತ್ತಮ ಆಟಗಾರ ಆಗಿದ್ದಾರೆ. ವಾರ್ನರ್ ಅವರು 11ನೇ ಸಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವಾಗ ರೋಹಿತ್ ಶರ್ಮಾ ಅವರ ಬಗ್ಗೆ ಮಾತನಾಡಿ,
“ಅವರೊಬ್ಬ ಅತ್ಯುತ್ತಮ ಓಪನಿಂಗ್ ಬ್ಯಾಟ್ಸ್ಮನ್” ಎಂದಿದ್ದಾರೆ ವಾರ್ನರ್.

Get real time updates directly on you device, subscribe now.