ಸಾಲ ಮಾಡಿ ರವಿಚಂದ್ರನ್ ಮನೆ ಕಳೆದುಕೊಂಡಿದ್ದಕ್ಕೆ ಮಗ ಮನೋರಂಜನ್ ಹೇಳಿದ್ದೇನು ಗೊತ್ತಾ ? ಕಣ್ಣೀರಿಟ್ಟ ತಾಯಿ.
ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಸಾಕಷ್ಟು ಒಳ್ಳೆಯ ಸೂಪರ್ ಹಿಟ್ ಸೂಪರ್ ಹಿಟ್ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿ ಹೆಸರು ಮಾಡಿದವರು. ಅದ್ಧೂರಿಯಾಗಿ, ಬಿಗ್ ಬಜೆಟ್ ನಲ್ಲಿ ಸಿನಿಮಾ ಮಾಡುವುದನ್ನ ಶುರು ಮಾಡಿದವರೆ ಕ್ರೇಜಿಸ್ಟಾರ್ ಎಂದರೆ ತಪ್ಪಾಗುವುದಿಲ್ಲ. ಅಂತ ಮೇರುನಟ ರವಿಚಂದ್ರನ್ ಅವರು ಇಂದು ಸಂಕಷ್ಟದಲ್ಲಿದ್ದಾರೆ. ತಮ್ಮ ತಂದೆ ತಾಯಿ ಬಾಳಿ ಬದುಕಿದ ಮನೆಯನ್ನೇ ಬಿಟ್ಟು ಬಂದಿದ್ದಾರೆ.
ರವಿಚಂದ್ರನ್ ಅವರು ಈ ವಿಷಯದ ಬಗ್ಗೆ ರಿಯಾಲಿಟಿ ಶೋ ಎಪಿಸೋಡ್ ನಲ್ಲಿ ಭಾವುಕರಾಗಿ ಹೇಳಿಕೊಂಡಿದ್ದರು. ಜನರಿಗೆ ಒಳ್ಳೆಯ ಸಿನಿಮಾ ಕೊಡಬೇಕು ಎಂದು ತಾವು ಎಲ್ಲವನ್ನು ಕಳೆದುಕೊಂಡಿದ್ದಾಗಿಯೂ, ಮತ್ತೆ ವಾಪಸ್ ಬಂದು ಜನರನ್ನು ರಂಜಿಸುತ್ತೇನೆ ಎಂದು ಹೇಳಿಕೊಂಡಿದ್ದರು ಕ್ರೇಜಿಸ್ಟಾರ್. ಇತ್ತೀಚೆಗೆ ರವಿಚಂದ್ರನ್ ಅವರ ಯಾವ ಸಿನಿಮಾಗಳು ಸಹ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿಲ್ಲ. ಆ ಸಿನಿಮಾಗಳಿಗಾಗಿ ರವಿಚಂದ್ರನ್ ಅವರು ಮಾಡಿದ ಸಾಲಗಳಿಂದ ತೊಂದರೆಯಾಗಿ ಇಂದು ರಾಜಾಜಿನಗರದ ದೊಡ್ಡ ಮನೆಯನ್ನೇ ಬಿಟ್ಟು ಬರುವ ಪರಿಸ್ಥಿತಿ ಎದುರಾಗಿದೆ. ಇದೆಲ್ಲದರ ಬಗ್ಗೆ ಅಂದು ರವಿಚಂದ್ರನ್ ಅವರು ಮಾತನಾಡಿದಾಗ ವೇದಿಕೆಯ ಮೇಲಿದ್ದವರೆಲ್ಲ ಕಣ್ಣೀರು ಹಾಕಿದ್ದರು.
ಇನ್ನು ಈ ವಿಷಯದ ಬಗ್ಗೆ ರವಿಚಂದ್ರನ್ ಅವರ ಮಗ ಮನೋರಂಜನ್ ಅವರು ಏನು ಹೇಳಿದ್ದಾರೆ ಗೊತ್ತಾ? ತಂದೆ ಬಗ್ಗೆ ಮಗ ಹೇಳಿದ್ದೇನು ಎಂದು ತಿಳಿಸುತ್ತೇವೆ ನೋಡಿ.. “ನಮ್ಮ ತಂದೆ ಏನೇ ಮಾಡಿದರೂ ಅದು ಅಭಿಮಾನಿಗಳಿಗೋಸ್ಕರ. ಅವರನ್ನ ಸಂತೋಷ ಪಡಿಸೋದಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಿದರು, ಆದರೆ ಕೆಲವು ಸಿನಿಮಾಗಳು ಸೋತ ಕಾರಣ, ತಮ್ಮ ಬಳಿ ಇದ್ದ ಹಣವನ್ನೆಲ್ಲಾ ಕಳೆದುಕೊಂಡರು, ಇಂದು ಅವರಲಿ ಬಳಿ ಆಸ್ತಿ ಇಲ್ಲದೆ ಇರಬಹುದು. ಆದರೆ ನಮ್ಮನ್ನ ಆಸ್ತಿಯ ಹಾಗೆ ಬೆಳೆಸಿದ್ದಾರೆ. ಅವರಲ್ಲಿರುವ ನಟನೆಯ ಕಲೆಯನ್ನ ನಮಗೆ ಧಾರೆ ಎರೆದಿದ್ದಾರೆ..ಮನುಷ್ಯನಿಗೆ ಮುಖ್ಯವಾದದ್ದು ದುಡ್ಡಲ್ಲ, ಅವರನ್ನು ಪ್ರೀತಿಸುವ ಕೋಟ್ಯಾಂತರ ಜನರನ್ನ.. ಇದಕ್ಕಿಂತ ಇನ್ನೇನು ಬೇಕು..” ಎಂದು ಹೇಳಿದ್ದಾರೆ ಮನೋರಂಜನ್. ಮಗನ ಮಾತು ಕೇಳಿ ರವಿಚಂದ್ರ ಅವರ ಪತ್ನಿ ಸುಮತಿ ಅವರು ಕಣ್ಣೀರು ಹಾಕಿದ್ದಾರೆ.