ಬಿಳಿ ಕೂದಲ ಸಮಸ್ಯೆ ನಿಮ್ಮನ್ನು ಕೂಡ ಕಾಡುತ್ತಿದೆಯೇ?? ಹಾಗಿದ್ದರೆ ಈ ಮನೆ ಮದ್ದು ಟ್ರೈ ಮಾಡಿ ಸಾಕು. ಕೂದಲು ಕಪ್ಪಾಗುತ್ತದೆ.
ಪ್ರತಿದಿನ ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಜಂಕ್ ಫುಡ್ ತಿನ್ನಲು ಶುರು ಮಾಡಿದ್ದು, ಇದರಿಂದ ಆರೋಗ್ಯ ಹದಗೆಡಬಹುದು. ನಾವು ಏನು ತಿನ್ನುತ್ತೇವೆ ಎನ್ನುವುದು ವಿಶೇಷವಾಗಿ ಕೂದಲಿನ ಮೇಲೆ ಬಹಳ ಪರಿಣಾಮ ಬೀರುತ್ತದೆ. ಕೂದಲು ಉದುರುವಿಕೆ, ಚಿಕ್ಕ ವಯಸ್ಸಿಗೆ ಬಿಳಿ ಕೂದಲು, ಶುಷ್ಕ ಕೂದಲು, ತಲೆಯಲ್ಲಿ ಹೊಟ್ಟು, ಇಂತಹ ಸಮಸ್ಯೆಗಳು ಶುರುವಾಗುತ್ತವೆ. ಇದಕ್ಕಾಗಿ ನೀವು ಕೆಮಿಕಲ್ ಇರುವ ಶ್ಯಾಂಪೂ ಕಂಡೀಶನರ್ ಗಳನ್ನು ಬಳಸಬಾರದು, ಅದರಿಂದ ಸಮಸ್ಯೆ ಇನ್ನು ಹೆಚ್ಚಾಗುತ್ತದೆ. ಈ ಸಮಸ್ಯೆಗಳಿಗೆ ಮನೆಯಲ್ಲೇ ಮಾಡಬಹುದಾದ ಸುಲಭವಾದ ಸೈಸರ್ಗಿಕ ಮನೆಮದ್ದುಗಳನ್ನು ಇಂದು ನಿಮಗೆ ತಿಳಿಸುತ್ತೇವೆ..
ಕರಿಬೇವು :- ಕೂದಲಿನ ಆರೋಗ್ಯಕ್ಕೆ ಕರಿಬೇವು ಬಹಳ ಪ್ರಯೋಜನಕಾರಿ. ಕೂದಲಿನಲ್ಲಿ ಮೆಲನಿನ್ ಅಂಶ ಕಡಿಮೆ ಆಗುವುದರಿಂದ ಕೂದಲು ಬೆಳ್ಳಗೆ ಆಗಬಹುದು. ಕರಿಬೇವನ್ನು ಕೂದಲಿನ ಆರೋಗ್ಯಕ್ಕೆ ಬಳಸುವುದರಂದ, ಕೂದಲಿನಲ್ಲಿ ಮೆಲನಿನ್ ಅಂಶ ಕಡಿಮೆ ಆಗದ ಹಾಗೆ ನೋಡಿಕೊಳ್ಳುತ್ತದೆ. ಕರಿಬೇವಿನ ಎಲೆಗಳ ಬಳಕೆಯಿಂದ ನಿಮ್ಮ ಕೂದಲು ಸದಾ ಮೃದುವಾಗಿರುತ್ತದೆ ಮತ್ತು ಶೈನ್ ಆಗುತ್ತಿರುತ್ತದೆ. ಕರಿಬೇವಿನಿಂದ ಹೇರ್ ಮಾಸ್ಕ್ ತಯಾರಿಸಿ ಬಳಸಬಹುದು. ಇದನ್ನು ಹೇಗೆ ಮಾಡುವುದು ಎಂದು ತಿಳಿಸುತ್ತೇವೆ.. ಹರಿಬೇವಿನ ಎಲೆಗಳು, ತೆಂಗಿನ ಎಣ್ಣೆ, ಬೇವಿನ ಎಲೆಗಳು, ವಿಟಮಿನ್ ಇ ಕ್ಯಾಪ್ಸೂಲ್ ಗಳು ಮತ್ತು ಮೊಸರು, ಇಷ್ಟನ್ನು ತೆಗೆದುಕೊಳ್ಳಿ. ಮಾಸ್ಕ್ ತಯಾರಿಸಲು ಕರಿಬೇವಿನ ಸೊಪ್ಪು ಮತ್ತು ಬೇವಿನ ಸೊಪ್ಪು ಎರಡನ್ನು ಸಹ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
ಇನ್ನೊಂದು ಪಾತ್ರೆಗೆ ಮೊಸರು, ವಿಟಮಿನ್ ಇ ಕ್ಯಾಪ್ಸೂಲ್ ಮತ್ತು ತೆಂಗಿನ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೀಟ್ ಮಾಡಿ, ನಂತರ ಈ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿ. ಇದು ತಣ್ಣಗಾದ ಬಳಿಕ ಕರಿಬೇವಿನ ಸೊಪ್ಪು ಮತ್ತು ಬೇವಿನ ಸೊಪ್ಪಿನ ಮಿಶ್ರಣವನ್ನು ಇದಕ್ಕೆ ಸೇರಿಸಿ ಮಿಕ್ಸ್ ಮಾಡಿ, ಈಗ ಹೇರ್ ಮಾಸ್ಕ್ ರೆಡಿಯಾಗಿದೆ. ಈ ಹೇರ್ ಮಾಸ್ಕ್ ಅಪ್ಲೈ ಮಾಡುವುದಕ್ಕಿಂತ ಮೊದಲು ಕೂದಲನ್ನು ಚೆನ್ನಾಗಿ ತೊಳೆದು, ಒಣಗಿಸಿ. ಬಳಿಕ ಕೂದಲು ಮತ್ತು ನೆತ್ತಿಯ ಮೇಲೆ ಹೇರ್ ಮಾಸ್ಕ್ ಹಚ್ಚಿ, ಒಂದು ಗಂಟೆಗಳ ಕಾಲ ಬಿಟ್ಟು ತೊಳೆಯಿರಿ. ಒಂದು ವಾರದಲ್ಲಿ ಎರಡು ಸಾರಿ ಈ ರೀತಿ ಮಾಡುತ್ತಾ ಬಂದರೆ, ಪರಿಣಾಮವನ್ನು ನೀವು ಗಮನಿಸುತ್ತೀರಿ.