ಇದೊಂದು ಸೊಪ್ಪನ್ನು ಹೀಗೆ ಬಳಸಿ, ನೀವೇ ಉದುರು ಎಂದರು ಕೂದಲು ಉದುರುವುದಿಲ್ಲ. ಏನು ಮಾಡಬೇಕು ಗೊತ್ತೇ??
ಈಗಿನ ಕಾಲದಲ್ಲಿ ದೊಡ್ಡವರು ಚಿಕ್ಕವರು ಎಂದು ವಯಸ್ಸಿನ ವ್ಯತ್ಯಾಸ ಎನ್ನದೆ ಎಲ್ಲಾ ವಯಸ್ಸಿನನವರಲ್ಲು ಬಿಳಿ ಕೂದಲು ಬರುತ್ತಿರುವುದನ್ನು ನೋಡಬಹುದು. ಕೂದಲು ಬಿಳಿ ಆಗಲು ಎರಡಿ ಕಾರಣ ಒಂದು ಆಹಾರದ ಕೊರತೆ ಮತ್ತೊಂದು ಒತ್ತಡ. ಈ ಬಿಳಿ ಕೂದಲು ಸಮಸ್ಯೆಯಿಂದ ಮುಕ್ತಿ ಪಡೆಯಲು ಹಲವರು ಮೆಹೆಂದಿ ಬಳಸುತ್ತಾರೆ, ಇದನ್ನು ಗೋರಂಟಿ ಎಂದು ಸಹ ಕರೆಯಲಾಗುತ್ತದೆ. ತಿಂಗಳಿಗೆ ಒಂದು ಸಾರಿ ಗೋರಂಟಿ ಹಚ್ಚುವುದರಿಂದ ಕೂದಲಿಗೆ ಅನೇಕ ಪ್ರಯೋಜನಗಳಿವೆ. ಮೆಹೆಂದಿ ಪುಡಿಯನ್ನು ಕಾಫಿ ಪುಡಿ ಜೊತೆಗೆ ಬೆರೆಸಿ, ಕೂದಲಿಗೆ ಕಂಡೀಶನರ್ ಆಗಿ ಬಳಸಬಹುದು.
ಬಿಳಿ ಕೂದಲನ್ನು ಕಪ್ಪು ಮಾಡಲು ಕೆಮಿಕಲ್ ಇಂದ ಮಾಡಿರುವ ಹೇರ್ ಶಾಂಪೂ ಮತ್ತು ಹೇರ್ ಡೈ ಬಳಸಬೇಡಿ, ಇದರಿಂದ ಕೂದಲಿಗೆ ಹಾನಿಯಾಗುತ್ತದೆ. ಕಪ್ಪು ಕೂದಲಿಗಾಗಿ ಮೆಹೆಂದಿ ಬಳಕೆ ಮಾಡಬಹುದು, ಇದು ನೈಸರ್ಗಿಕವಾಗಿದೆ ಜೊತೆಗೆ ಕೂದಲಿಗೆ ಯಾವುದೇ ಹಾನಿ ಮಾಡುವುದಿಲ್ಲ. ಕೂದಲು ಉದುರುವಿಕೆ ಸಮಸ್ಯೆಗು ಮೆಹೆಂದಿ ಒಳ್ಳೆಯ ಉಪಾಯ ಆಗಿದೆ, ನಿಂಬೆ ರಸರ ಜೊತೆಗೆ ಮೆಹೆಂದಿ ಪುಡಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ. ಎಣ್ಣೆಯುಕ್ತ ಕೂದಲಿಗೆ ಮೆಹೆಂದಿ ಹಚ್ಚಿದರೆ, ಕೂದಲು ಉದುರುವಿಕೆ ಮತ್ತು ಒಣಕೂದಲು ಸಮಸ್ಯೆ ಕಡಿಮೆ ಆಗುತ್ತದೆ. ಕೂದಲು ಉದುರುವ ಸಮಸ್ಯೆ ಇರುವವರು ತಿಂಗಳಿಗೆ ಒಂದು ಸಾರಿ ಮೆಹೆಂದಿ ಬಳಸಬೇಕು.
ಮೆಹೆಂದಿಯನ್ನು ಕೂದಲಿಗೆ ಹಚ್ಚಿ, 30 ರಿಂದ 45ನಿಮಿಷಗಳ ಕಾಲ ಬಿಡಿ, ಬಳಿಕ ಕೂದಲಿಗೆ ಕೆಲವು ಹನಿ ಆಲಿವ್ ಎಣ್ಣೆ ಹಾಕಿ, ಇದು ಕೂದಲಿಗೆ ನೈಸರ್ಗಿಕ ಕಂಡೀಶನರ್ ಆಗಿ ಕೆಲಸ ಮಾಡುತ್ತದೆ. ದಟ್ಟವಾದ ದಪ್ಪವಾದ ಕೂದಲು ಪಡೆಯಲು ಮೆಹೆಂದಿ ಸಹಾಯ ಮಾಡುತ್ತದೆ, ಕೂದಲನ್ನು ಬಲಪಡಿಸಲು ಸಹಾಯ ಮಾಡಿ, ಕೂದಲಿಗೆ ಉತ್ತಮ ಪೋಷಣೆ ನೀಡುತ್ತದೆ. ಹಾಗು ಕೂದಲು ಒಡೆಯುವುದನ್ನು ಸಹ ತಡೆಯುತ್ತದೆ. ನಿಂಬೆ ಹಣ್ಣು ಮತ್ತು ಮೆಹೆಂದಿಯನ್ನು ಜೊತೆಯಾಗಿ ಬಳಸುವುದರಿಂದ ಕೂದಲಿಗೆ ಪೋಷಕಾಂಶ ಸಿಗುತ್ತದೆ.