ನಿಮಗೆ ನಿಮ್ಮ ಕನಸಿನ ರಾಣಿಯೇ ಹೆಂಡತಿಯಾಗಿ ಸಿಗಬೇಕು ಎಂದರೆ, ಇದೊಂದು ಕೆಲಸ ಮಾಡಿ ಸಾಕು. ರಾಣಿಯೇ ಹುಡುಕಿಕೊಂಡು ಬರುತ್ತಾಳೆ.
ಪ್ರತಿಯೊಬ್ಬ ಹುಡುಗನಿಗೂ ತನ್ನ ಬಾಳ ಸಂಗಾತಿಯಾಗಿ ಬರುವ ಹುಡುಗಿ ಹೀಗೆಯೇ ಇರಬೇಕು ಎನ್ನುವ ಆಸೆ ಇರುತ್ತದೆ, ಸುಂದರವಾಗಿ, ಯೋಗ್ಯವಾಗಿ, ಬುದ್ಧಿವಂತೆಯಾಗಿ ಇರಬೇಕು ಎಂದು ಬಯಸುತ್ತಾರೆ. ಕೆಲವರು ಒಳ್ಳೆಯ ಹೆಂಡತಿಯನ್ನು ಪಡೆಯಲು ದೇವಿಯ ಪೂಜೆ ಪುನಸ್ಕಾರ ಮಾಡುತ್ತಾರೆ. ಇನ್ನು ಕೆಲವರಿಗೆ ಏನು ಮಾಡದೆಯೇ ಒಳ್ಳೆಯ ಹೆಂಡತಿ ಸಿಗುತ್ತಾಳೆ. ಹೀಗಿರುವಾಗ, ಜ್ಯೇಷ್ಠ ರಾಶಿಯಲ್ಲಿ ಹುಟ್ಟಿದವರು ಬಹಳ ಅದೃಷ್ಟವಂತರು, ಏನು ಮಾಡದೆ ಇದ್ದರು ಸಹ ಅವರಿಗೆ ಎಲ್ಲವೂ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಸುಂದರವಾದ ಹೆಂಡತಿಯನ್ನು ಪಡೆಯಲು ಕೆಲವು ಉಪಾಯಗಳನ್ನು ತಿಳಿಸಿದ್ದಾರೆ. ಅವುಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ.. ಈ ರೀತಿ ಮಾಡಿದರೆ ನೀವಿಷ್ಟ ಪಡುವಂಥ ಹೆಂಡತಿಯೇ ಸಿಗುತ್ತಾರೆ..
27ರ ಜ್ಯೇಷ್ಠ ನಕ್ಷತ್ರದ ಸ್ಥಾನ 23ನೇ ಸ್ಥಾನದಲ್ಲಿ ಇರುತ್ತದೆ. ಈ ನಕ್ಷತ್ರದಲ್ಲಿ ಹುಟ್ಟಿದವರು ಸೂಕ್ಷ್ಮ ಜೀವಿಗಳಾಗಿರುತ್ತಾರೆ. ಇವರಿಗೆ ದೇವರು, ಧರ್ಮ ಮತ್ತು ಕರ್ಮದ ಮೇಲೆ ವಿಪರೀತ ನಂಬಿಕೆ ಇರುತ್ತದೆ. ತಮ್ಮ ಸ್ವಭಾವದಿಂದ ಯಾರಿಗೂ ತೊಂದರೆ ಅಥವಾ ನೋವು ಕೊಡದೆ ಇರಲು ಬಯಸುತ್ತಾರೆ. ಈ ರಾಶಿಯವರಿಗೆ ಸುಂದರವಾದ ಹೆಂಡತಿ ಪಡೆಯಲು ಶಿವನ ಆರಾಧನೇ ಸಹಾಯ ಮಾಡುತ್ತದೆ. ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವುದು ಅಥವಾ 16 ಸೋಮವಾರಗಳು ನಿಷ್ಠೆಯಿಂದ ವ್ರತ ಮಾಡುವುದರಿಂದ ಸುಂದರವಾದ ಹೆಂಡಿತಿ ಸಿಗುತ್ತಾಳೆ.
ಮತ್ತೊಂದು ಪರಿಹಾರ ಏನೆಂದರೆ, ಪ್ರತಿದಿನ ಸೂರ್ಯದೇವನ ಪೂಜೆ ಮಾಡಿ ಹೂವು ಅರ್ಪಣೆ ಮಾಡುವುದರಿಂದ ಸುಂದರವಾದ ಹೆಂಡತಿ ಸಿಗುತ್ತಾಳೆ ಎಂದು ಹೇಳಲಾಗುತ್ತದೆ. ದುಗ್ರಾಸಪ್ತಶತಿ ಮಂತ್ರವನ್ನು ಜಪ ಮಾಡುವ ಮೂಲಕ ಆ ಹುಡುಗನಿಗೆ ಸುಂದರವಾದ ಮತ್ತು ಸುಸಂಸ್ಕೃತವಾದ ಹೆಂಡತಿ ಸಿಗುತ್ತಾಳೆ. ಈ ಮಂತ್ರ ಪಠಣೆ ಮಾಡುವ ಹುಡುಗರು ಸುಂದರವಾದ ಮತ್ತು ಬುದ್ಧಿವಂತ ಹುಡುಗಿಯನ್ನು ಮಾಡುವೆಯಾಗುತ್ತಾರೆ ಎಂದು ಹೇಳಲಾಗಿದೆ.