ಸಮಂತಾ vs ಅಕ್ಕಿನೇನಿ ಕುಟುಂಬ: ನಾಗ ಚೈತನ್ಯ ಚಿಕ್ಕಮ್ಮ ಅಮಲಾ ರವರನ್ನು ಅಂತಹ ಮಾತು ಅಂದು ಬಿಟ್ಟರೆ ಸಮಂತಾ: ಅದಕ್ಕೆ ವಿಚ್ಛೇದನನಾ??

41

Get real time updates directly on you device, subscribe now.

ನಟಿ ಸಮಂತಾ ಮತ್ತು ನಾಗಚೈತನ್ಯ ಅವರ ವಿಚ್ಛೇದನದ ಸುದ್ದಿ ಇಂದಿಗೂ ಹಾಟ್ ಟಾಪಿಕ್ ಆಗಿ ಚರ್ಚೆ ಆಗುತ್ತಲೇ ಇದೆ, ಇದಕ್ಕೆ ಕಾರಣ ಸಮಂತಾ ಮತ್ತು ನಾಗಚೈತನ್ಯ ಜೋಡಿ ನಾಲ್ಕು ವರ್ಷಗಳ ಕಾಲ ಬಗಳ ಅನ್ಯೋನ್ಯವಾಗಿದ್ದರು, ಇವರನ್ನು ನೋಡಿ ಜೋಡಿ ಎಂದರೆ ಹೇಗಿರಬೇಕು ಎಂದು ಜನರು ಸರ್ಟಿಫಿಕೇಟ್ ಕೊಟ್ಟಿದ್ದು ಇದೆ, ಸಮಂತಾ ಅವರು ಮದುವೆಗಿಂತ ಮೊದಲು ಸ್ಟಾರ್ ಹೀರೋಯಿನ್ ಎನ್ನಿಸಿಕೊಂಡವರು, ಬಹಳ ಕಡಿಮೆ ಸಮಯದಲ್ಲಿ ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದರು ಸ್ಯಾಮ್. ಇದರಿಂದ ಸಮಂತಾ ಅವರು ಸ್ವಲ್ಪ ವಿಲಕ್ಷಣ ಸ್ವಭಾವದವರಾಗಿದ್ದರು ಎನ್ನಲಾಗಿದೆ. ಸಮಂತಾ ಅವರಿಗೆ ಸ್ವಾತಂತ್ರ್ಯ ಬಹಳ ಮುಖ್ಯ.

ಅಕ್ಕಿನೇನಿ ಕುಟುಂಬದ ಸೊಸೆಯಾದ ಬಳಿಕ ಕೂಡ ಸಮಂತಾ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದರು, ದೊಡ್ಡ ಸಿನಿಮಾಗಳನ್ನು ಹೆಚ್ಚಾಗಿ ಮಾಡದೆ, ಚಿಕ್ಕ ಸಿನಿಮಾಗಳಲ್ಲಿ, ಮಹಿಳಾ ಪ್ರಧಾನ ಕಥೆ ಇರುವಂಥ ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸುತ್ತಾ ಬಂದರು ಸ್ಯಾಮ್. ಆದರೆ ಸಮಂತಾ ಅವರಃ ಫ್ಯಾಮಿಲಿ 2 ವೆಬ್ ಸೀರೀಸ್ ನಲ್ಲಿ ನಟಿಸಿದರು, ಇದರಲ್ಲಿ ಸಮಂತಾ ಅವರ ಬೋಲ್ಡ್ ಅವತಾರ ಹೇಗಿತ್ತು ಎಂದು ನಮಗೆಲ್ಲರಿಗೂ ಗೊತ್ತಿದೆ. ಹಾಟ್ ಲುಕ್ ಇಂದ ಗಮನ ಸೆಳೆದಿದ್ದರು ಸ್ಯಾಮ್. ಫ್ಯಾಮಿಲಿ ಮ್ಯಾನ್ ಸಿನಿಮಾ ಬಗ್ಗೆ ನಟಿ ಅಮಲಾ ಅವರು ಬಹಳ ದಿನಗಳ ಹಿಂದೆ ಚೈತನ್ಯ ಅವರ ಜೊತೆಗೆ ಮಾತನಾಡಿದ್ದರಂತೆ. ಈ ವಿಚಾರವನ್ನು ಚೈತನ್ಯ ಅವರು ಸಮಂತಾ ಅವರ ಬಳಿ ಹೇಳಿದರಂತೆ..

ಆಗ ಸಮಂತಾ ಅವರು, ಅಮಲಾ ಅವರು ತಮ್ಮ ವಿರುದ್ಧ ಬೇಕೆಂದೇ ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದ್ದರಂತೆ. ಒಂದು ವಿಷಯಕ್ಕೆ ಅಮಲಾ ಅವರು ಮತ್ತು ಸ್ಯಾಮ್ ನಡುವೆ ಮಾತಿಗೆ ಮಾತು ಬೆಳೆದು, ಸ್ಯಾಮ್ ಅವರು ಅಮಲಾ ಅವರ ಮೇಲೆ ಜೋರಾಗಿ ಕಿರುಚಿ ಬೈದರಂತೆ. ಅಮಲಾ ಅವರ ಮೇಲೆ ಬೈದು ಧ್ವನಿ ಏರಿಸಿ ಮಾತನಾಡಿದ ಕಾರಣ, ನಾಗಾರ್ಜುನ ಅವರು ಸೀರಿಯಸ್ ಆಗಿ ತೆಗೆದುಕೊಂಡರಂತೆ. ತಮ್ಮ ಪ್ರಾಣದ ಹಾಗೆ ನೋಡಿಕೊಳ್ಳುತ್ತಿರುವ ಅಮಲಾ ಅವರ ಮೇಲೆ ಸಮಂತಾ ಅವರು ಕಿರುಚಾಡಿದ ಕಾರಣ, ಅಕ್ಕಿನೇನಿ ಕುಟುಂಬದ ಸೊಸೆ ಆಗುವ ಅರ್ಹತೆ ಅವರಿಗೆ ಇಲ್ಲ ಎಂದು ಹೇಳಿದರಂತೆ ನಾಗಾರ್ಜುನ. ಅಕ್ಕಿನೇನಿ ಕುಟುಂಬದ ಸಮಂತಾ ಅವರೊಡನೆ ಹೊಂದಿಕೊಳ್ಳಲು ಆಗಲಿಲ್ಲ, ಇದರಿಂದ ಭಿನ್ನಾಭಿಪ್ರಾಯಗಳು ಹೆಚ್ಚಾಗಿ, ಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದುಕೊಂಡರು ಎನ್ನಲಾಗುತ್ತಿದೆ.

Get real time updates directly on you device, subscribe now.