ಒಮ್ಮೆ ಖರಿದ ಎಣ್ಣೆಯನ್ನು ಮತ್ತೆ ಬಳಸಬೇಡಿ, ಹಾಗಿದ್ದರೇ ಏನು ಮಾಡಬೇಕು ಗೊತ್ತೇ??

30

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಈ ಕಲುಷಿತ ಜಮಾನದಲ್ಲಿ ನಾವು ಪ್ರತಿಯೊಂದು ಆಹಾರಗಳನ್ನು ಕೂಡ ತಾಜಾ ಹಾಗೂ ಆರೋಗ್ಯವಾಗಿರುವ ಆಹಾರವನ್ನು ಉಪಯೋಗಿಸಬೇಕಾಗಿದೆ. ಅದರಲ್ಲೂ ಅಡುಗೆ ಎಣ್ಣೆಯನ್ನು ಪದೇಪದೇ ಉಪಯೋಗಿಸಿ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕರ ವಾಗಿದೆ ಹಾಗೂ ಯಕೃತ್ತಿನ ಕ್ಯಾ’ನ್ಸರ್ ಬರಬಹುದಾದ ಸಾಧ್ಯತೆಗಳು ಕೂಡ ಇವೆ. ತಾಪಮಾನವು ಅಧಿಕವಾಗಿರುವ ಈ ಸಂದರ್ಭದಲ್ಲಿ ಅಡುಗೆ ಎಣ್ಣೆಯನ್ನು ಪದೇ ಪದೇ ಬಳಸಿ ಅದೇ ಆಹಾರವನ್ನು ತಿಂದರೆ ಆರೋಗ್ಯದಲ್ಲಿ ವಿಪರೀತ ವೈಪರೀತ್ಯಗಳು ಉಂಟಾಗುತ್ತದೆ. ಒಂದು ವೇಳೆ ಯಾವುದಾದರೂ ಹೋಟೆಲ್ ಇದೇ ತರ ಮಾಡುತ್ತಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬಹುದಾಗಿದೆ.

ಕೆಲವು ಕಡೆಗಳಲ್ಲಿ ದುಡ್ಡಿನ ಆಸೆಗಾಗಿ ಬಳಸಿದ ಎಣ್ಣೆಗಳನ್ನು ಮತ್ತೆ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತದೆ. ಆದರೆ ಇವುಗಳನ್ನು ಮಾಡುವುದನ್ನು ತಡೆಯುವುದಕ್ಕಾಗಿ ಇನ್ನೊಂದು ಉಪಾಯವನ್ನು ಈಗಾಗಲೇ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಹೊರತೆಗೆದೆ ಎಣ್ಣೆಯೊಂದಿಗೆ ಜೈವಿಕ ಡೀಸೆಲ್ ಮಾಡುವ ಯೋಜನೆ ಈಗಾಗಲೇ ತಯಾರಾಗಿದೆ ಎಂಬುದಾಗಿ ತಿಳಿದುಬಂದಿದೆ. ಈಗಾಗಲೇ ವಿಶಾಖಪಟ್ಟಣದಲ್ಲಿ ಹೊರತೆಗೆದೆ ಎಣ್ಣೆಯಿಂದ ಜೈವಿಕ ಡೀಸೆಲ್ ಅನ್ನು ತಯಾರಿಸಲಾಗುತ್ತಿದೆ. ಈಗಾಗಲೇ ಎನ್ ಎಸ್ ಆರ್ ಇಂಡಸ್ಟ್ರೀಸ್ ಬಳಸಿದ ಎಣ್ಣೆಗಳನ್ನು ರೆಸ್ಟೋರೆಂಟ್ ಅಪಾರ್ಟ್ಮೆಂಟ್ ಹಾಗೂ ಹಲವಾರು ಮೂಲಗಳಿಂದ ಖರೀದಿಸಲು ಡ್ರಮ್ ಗಳನ್ನು ಸ್ಥಾಪಿಸಿವೆ. ಇದಕ್ಕೆ ಹೋಟೆಲ್ಗಳು ಹಾಗೂ ರೆಸ್ಟೋರೆಂಟ್ ಮತ್ತು ಅಪಾರ್ಟ್ಮೆಂಟ್ನಲ್ಲಿ ಇರುವವರು ನೋಂದಿಸಿಕೊಳ್ಳಬೇಕು.

ಪ್ರತಿ ಲೀಟರಿಗೆ 30 ರೂಪಾಯಿಗಳಂತೆ ಖರೀದಿಸಲಾಗುತ್ತದೆ. ಒಂದು ವೇಳೆ ಎಣ್ಣೆಯಲ್ಲಿ ದ್ರುವಿಯ ಸಂಯುಕ್ತ ಮೂರನೇ ಬಳಕೆಯಲ್ಲಿ ಶೇಕಡ 25% ಮೀರಿದರೆ ಜೀವಕ್ಕೆ ಅಪಾಯ. 2030 ರ ಹೊತ್ತಿಗೆ ಸರ್ಕಾರ ಜೈವಿಕ ಡೀಸೆಲ್ ಅನ್ನು ಪರಿಚಯಿಸಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ವರ್ಷಕ್ಕೆ 500 ಕೋಟಿ ಲೀಟರ್ನಷ್ಟು ಜೈವಿಕ ಡೀಸೆಲ್ ಅಗತ್ಯವಿದೆ. ಇದಕ್ಕಾಗಿಯೇ ಬಳಸಿದ ಎಣ್ಣೆಯಿಂದ 110 ಕೋಟಿ ಲೀಟರ್ ಜೈವಿಕ ಡೀಸೆಲ್ ಅನ್ನು ದೇಶಿಯವಾಗಿ ತಯಾರಿಸಲು ಸರ್ಕಾರ ನಡೆಸಿರುವ ಯೋಜನೆಯಿಂದಲೇ ಬಳಸಿದ ಎಣ್ಣೆಗಳ ಮರುಪಯೋಗ ಪ್ರಾರಂಭವಾಗಿದೆ ಎಂದು ಹೇಳಬಹುದಾಗಿದೆ.

Get real time updates directly on you device, subscribe now.