ನೀವು ನಾನ್ ವೆಜ್ ತಿನ್ನುತ್ತಿರಾ?? ಹಾಗಿದ್ದರೆ ನಾನ್ ವೆಜ್ ಏನೋ ತಿನ್ನಿ, ಆದರೆ ಅದರ ಜೊತೆ ಅಪ್ಪಿ ತಪ್ಪಿಯೂ ಇವುಗಳನ್ನು ತಿನ್ನಬೇಡಿ, ಯಾವ್ಯಾವು ಗೊತ್ತೇ??
ಜನರ ದಿನನಿತ್ಯದ ಆಹಾರ ಕ್ರಮದಲ್ಲಿ ಮೂರು ವಿಧವಾಗಿ ಆಹಾರ ಸೇವನೆ ಮಾಡುವುದನ್ನು ನೋಡಬಹುದು. ಕೆಲವರು ಸಸ್ಯಾಹಾರಿಗಳಾಗಿರುತ್ತಾರೆ, ಕೆಲವರು ಮಾಂಸಹಾರಿಗಳಾಗಿರುತ್ತಾರೆ, ಇನ್ನು ಕೆಲವರು ಮೊಟ್ಟೆ ಮಾತ್ರ ತಿನ್ನುತ್ತಾರೆ. ಚಿಕನ್ ಮಟನ್ ಹಾಗೂ ಇನ್ನಿತರ ಮಾಂಸಾಹಾರಗಳನ್ನು ಅನ್ನು ಇಷ್ಟಪಟ್ಟು ತಿನ್ನುವವರು ಸಾಕಷ್ಟು ಜನರಿರುತ್ತಾರೆ. ಚಿಕನ್ ಮಟನ್ ಹಾಗೂ ಫಿಶ್ ಬಳಸಿ ಹಲವು ರೀತಿಯ ರುಚಿಕರವಾದ ಪದಾರ್ಥಗಳನ್ನು ಮಾಡಿ ತಿನ್ನಬಹುದು. ನಾನ್ ವೆಜ್ ಅನ್ನು ತುಂಬಾ ಇಷ್ಟಪಟ್ಟು ತಿನ್ನುವವರು, ಅದರ ಜೊತೆಗೆ ಕೆಲವು ಪದಾರ್ಥಗಳನ್ನು ತಿನ್ನಬಾರದು ಎನ್ನುವುದನ್ನು ಗಮನದಲ್ಲಿ ಇಟ್ಟುಕೊಳ್ಳಿ. ಆ ಪದಾರ್ಥಗಳು ಯಾವುವು ಎಂದು ಈಗ ತಿಳಿಸುತ್ತೇವೆ.
*ಸಂಜೀವಿನಿಯ ಹಾಗೆ ಎಂದು ಜೇನು ತುಪ್ಪವನ್ನು ಪರಿಗಣಿಸಲಾಗುತ್ತದೆ. ಆದರೆ ಇದನ್ನು ನಾನ್ ವೆಜ್ ಜೊತೆಗೆ ಸೇಗಿಸಿದರೆ, ವಿಷವಾಗಿ ಮಾರ್ಪಾಡಾಗಬಹುದು.
*ಮೈದಾ ನಿಧಾನವಾಗಿ ಜೀರ್ಣವಾಗುತ್ತದೆ, ಬಹಳ ಒಳ್ಳೆಯ ಆಹಾರ ಪದಾರ್ಥ ಇದಲ್ಲ, ಹಾಗಾಗಿ ನಾನ್ ವೆಜ್ ಜೊತೆ ಇದರಿಂದ ಮಾಡಿದ ಪದಾರ್ಥ ತಿನ್ನುವುದು ಒಳ್ಳೆಯದಲ್ಲ.
*ಬೇಗ ಜೀರ್ಣ ಆಗಲಿ ಎಂದು ಮಾಂಸಾಹಾರ ಸೇವಿಸಿದ ಬಳಿಕ ಕೆಲವರು ಮೊಸರು ಸೇವಿಸುತ್ತಾರೆ. ಆದರೆ ಆ ರೀತಿ ಮಾಡಬಾರದು, ಮಾಂಸಾಹಾರ ಸೇವಿಸಿದ ಬಳಿಕ ಹಾಲಿನಿಂದ ಮಾಡಿದ ಯಾವುದೇ ಪದಾರ್ಥವನ್ನು ತಿನ್ನಬಾರದು.

*ನಾನ್ ವೆಜ್ ತಿಂದ ಬಳಿಕ ಕೆಲವರು ಐಸ್ ಕ್ರೀಮ್ ತಿನ್ನಲು ಇಷ್ಟಪಡುತ್ತಾರೆ, ಅದು ಕೂಡ ಒಳ್ಳೆಯದಲ್ಲ, ಅದರಿಂದ ದೇಹದಲ್ಲಿ ಉಷ್ಣತೆ, ನಿದ್ರಾಹೀನತೆ ಸಮಸ್ಯೆ, ಜೀರ್ಣದ ಸಮಸ್ಯೆ, ಹಾಗೂ ದೈಹಿಕ ಸಮಸ್ಯೆ ಉಂಟಾಗಬಹುದು.
*ನಾನ್ ವೆಜ್ ತಿಂದ ಬಳಿಕ ಗೆಡ್ಡೆಯ ಪದಾರ್ಥಗಳನ್ನು ಸಹ ಸೇವಿಸಬಾರದು, ಇದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ.
*ನಾನ್ ವೆಜ್ ಜೊತೆಗೆ ಸೊಪ್ಪು ತಿಂದರೆ ಅಜೀರ್ಣವಾಗುತ್ತದೆ.
*ನಾನ್ ವೆಜ್ ಜೊತೆಗೆ ಅಥವಾ ತಿಂದ ಬಳಿಕ ಮೂಲಂಗಿ ಇಂದ ಮಾಡಿದ ಪದಾರ್ಥ ಸೇವಿಸಬಾರದು, ಎರಡರಲ್ಲೂ ಪ್ರೊಟೀನ್ ಅಂಶ ಹೆಚ್ಚಾಗಿರುವುದರಿಂದ ಎರಡರ ನಡುವೆ ಪ್ರತಿಕ್ರಿಯೆ ಆಗಿ, ರಕ್ತ ವಿಷವಾಗುವ ಸಾಧ್ಯತೆ ಹೆಚ್ಚಿರುತ್ತದೆ.